Русские видео

Сейчас в тренде

Иностранные видео


Скачать с ютуб Havyaka haadu_Kanvar helidar neetiya ಹವ್ಯಕ ಹಾಡು_ಕಣ್ವರ್ ಹೇಳಿದರ್ ನೀತಿಯಾ в хорошем качестве

Havyaka haadu_Kanvar helidar neetiya ಹವ್ಯಕ ಹಾಡು_ಕಣ್ವರ್ ಹೇಳಿದರ್ ನೀತಿಯಾ 10 месяцев назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



Havyaka haadu_Kanvar helidar neetiya ಹವ್ಯಕ ಹಾಡು_ಕಣ್ವರ್ ಹೇಳಿದರ್ ನೀತಿಯಾ

ರಚನೆ _ಶ್ರೀಮತಿ ದಾಕ್ಷಾಯಣಿ ವಿಶ್ವನಾಥ ಹೆಗಡೆ ಸೋಮನಮನೆ ಹಾಡಿದವರು_ಶಿಲ್ಪಾ ಪ್ರಶಾಂತ ಹೆಗಡೆ ಅಂಬ್ಲಿಹೊಂಡ ಹಾಡಲು ಅನುಕೂಲವಾಗಲಿ ಎನ್ನುವ ದೃಷ್ಟಿಯಿಂದ ಎರಡೆರಡು ಚರಣಗಳನ್ನು ಸೇರಿಸಿ ಹಾಡಿದ್ದು,ಚರಣಗಳ ಕ್ರಮಸಂಖ್ಯೆಯಲ್ಲಿ ಬದಲಾವಣೆ ಮಾಡಿಲ್ಲ. 🏵ಹಾಡಿನ ಸಾಹಿತ್ಯ🏵 ಕಣ್ವರ್ ಹೇಳಿದರ್ ನೀತಿಯಾ ಶಾಕುಂತಲೆಗೆ ಸುತೆಯೇ ಕೇಳೆಂದೆನುತ ||ಪ|| ಪತಿಗೃಹಕಾಗಿ ತಾ ಪೊರಟ ಶಾಕುಂತಲೆಗೆ ಸತಿಧರ್ಮ ನಡತೆಯ ಕೇಳು ನೀನೆನುತ ||ಅಪ|| ಮಗಳೆ ನೀ ಬಾರೆಂದು ಬಳಿಯೊಳ್ ಕೂಡ್ರಿಸಿಕೊಂಡು|| ತಿಳಿಸುವೆ ಸತಿಧರ್ಮ ನಡತೆಯ ನಿನಗೆಂದು ||೧|| ತರಳೆ ನಮ್ಮನು ಅಗಲಿ ಪೊರಟೆಯ ಗೃಹಕೆಂದು|| ಕಳಿಸಲೆಂತೋ ಎನ್ನ ಮನವು ಕೊರಗುವುದು ||೨|| ಕುಣಿಸಿ ನಲಿಸಿದ ಜಿಂಕೆ ಬಹಳ ಶೋಕಿಸುತಿಹುದು ||ಬೆಳೆಸಿದ ಸುಮಲತೆ ಬಾಡಿ ಬಳುಕುವುದು ||೩|| ಹುಲ್ಲು ನೀರುಣಿಸಿದ ಕರುವು ಕೊರಗುತಲಿಹುದು || ನಿನ್ನಗಲಿಕೆಗಾಗಿ ಕಪಿಲೆ ದುಃಖಿಸುತಿಹುದು ||೪|| ನಲುಮೆ ಗೆಳತಿಯರೆಲ್ಲ ಕಣ್ಣೀರ ಸುರಿಸುವರು ||ಹೆಣ್ಣು ಜನಿಸಿದ ಮೇಲೆ ಪರರ ಸ್ವತ್ತಾಗಿಹುದು ||೫|| ಈ ಪುಣ್ಯಾಶ್ರಮವೆಲ್ಲ ಬರಿದಾಗಿ ತೋರುವುದು ||ತರಳೆ ನಿನಗಿನ್ನೊಂದು ಸ್ಥಾನ ಅಲ್ಲಿಹುದು ||೬|| ಪತಿಗೃಹಕೆ ಪೋಗಿ ನೀ ಸುಖಿಯಾಗಿ ಬಾಳಮ್ಮ ||ಸತಿಧರ್ಮ ನಡತೆಯ ಬಿಡದೆ ನಡೆಸಮ್ಮ ||೭|| ಗುರುಹಿರಿಯರ ಸೇವೆ ನಿರುತ ನೀ ಮಾಡಮ್ಮ|| ಕರಪಿಡಿದಿಹ ಪತಿಯ ಮನವೊಲಿಸಮ್ಮ ||೮|| ಪತಿಸೇವೆಯೊಳು ದಾಸಿ ನೀನಾಗಲೇ ಬೇಕು || ಚತುರತೆಯೊಳು ಮಂತ್ರಿಯಂತಿರಬೇಕು ||೯|| ಪತಿಗೆ ಬಡಿಸುವಾಗ ಮಾತೆಯಂತಿರಬೇಕು || ಪ್ರೇಮಸಮ್ಮಿಲನದಿ ರತಿಯಾಗಬೇಕು ||೧೦|| ಶಾಂತಿ ಸಹನೆಯೊಳು ಭೂ ತಾಯಿಯಂತಿರಬೇಕು || ಘನಶೀಲವಂತೆ ಸದ್ಗುಣಿಯಾಗಬೇಕು ||೧೧|| ಸತಿಗೆ ಪತಿಯೆ ಪರದೈವವೆಂದರಿಯಮ್ಮ || ಪತಿಸೇವೆಯನು ಮಾಡಿ ಧನ್ಯಳಾಗಮ್ಮ ||೧೨|| ಬಳ್ಳಿಗೆ ಮರವು ಆಧಾರ ತಾನಾದಂತೆ ||ಚಿರಕಾಲ ಪತಿ ನಿನಗಾಧಾರವಮ್ಮ ||೧೩|| ಎರಡು ಕುಲಗಳ ಹೆಸರುಳಿಸಿ ನೀ ಬಾಳಮ್ಮ || ಪಡೆದವರ ಒಡಲ ಸಾರ್ಥಕಗೊಳಿಸಮ್ಮ ||೧೪|| ಮನೆಗೆ ಬಂದತಿಥಿಯನಾದರಿಸುತ ನೋಡು || ಮನೆಯೊಳು ಲಕ್ಷುಮಿ ದೇವಿ ನೀನಾಗು ||೧೫|| ಪತಿವೃತಾಚರಣೆಯ ಸತತ ನೀ ನಡೆಸಮ್ಮ || ಸತಿ ಅನಸೂಯೆಯಂದದಲಿ ಬಾಳಮ್ಮ ||೧೬|| ಕಷ್ಟಕಾಲದಿ ನಿಷ್ಟುರತೆಯ ನೀ ತೋರದೆ || ಸುಖದಭಿಮಾನದಿ ಗರ್ವಿಷ್ಟೆ ಎನಿಸದೆ ||೧೭|| ಪಿತ ಕಣ್ವರ್ ಹೇಳಿದ ಹಿತದ ನುಡಿಯ ಕೇಳಿ || ಸುತೆ ಶಾಕುಂತಲೆ ಪೊರಟಳೆ ಪಿತಗೆರಗಿ ||೧೮|| ಬಾಳು ಮುತ್ತೈದೆಯಾಗಿ ಬಾಲಕರ ತಾಯಾಗಿ || ಬಾಲೆ ನೀ ಪೋಗೆಂದು ಹರಸಿ ತಾ ಕಳುಹಲು ||೧೯||

Comments