Русские видео

Сейчас в тренде

Иностранные видео


Скачать с ютуб Havyaka haadu_Kashi yatre 2. ಹವ್ಯಕ ಹಾಡು_ಕಾಶೀ ಯಾತ್ರೆ 2 (ವೃತ ಸಮಾವರ್ತನೆಗೆ) в хорошем качестве

Havyaka haadu_Kashi yatre 2. ಹವ್ಯಕ ಹಾಡು_ಕಾಶೀ ಯಾತ್ರೆ 2 (ವೃತ ಸಮಾವರ್ತನೆಗೆ) 7 месяцев назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



Havyaka haadu_Kashi yatre 2. ಹವ್ಯಕ ಹಾಡು_ಕಾಶೀ ಯಾತ್ರೆ 2 (ವೃತ ಸಮಾವರ್ತನೆಗೆ)

ಹಾಡಿದವರು_ ದಿವ್ಯಾ ಹೆಗಡೆ ಭತ್ಗೆರೆ ಈ ವಿಡಿಯೋ ದಲ್ಲಿ ಕೆಲವು ಫೋಟೋಗಳನ್ನು ಗೂಗಲ್ ನಿಂದ ಪಡೆಯಲಾಗಿದೆ. ಹಾಡಿನ ಸಾಹಿತ್ಯ ವೃತ ಸಮಾವರ್ತನೆಗೆ ಹಚ್ಚಡ ಮುಂಡಾಸವು ಮಲ್ಲಿಗೆ ಮಾಲೆ ಸರಗಳು|ಸರವು ಕಣ್ಣಿಗೆ ಕಪ್ಪು ಹೆತ್ತಮ್ಮ ಕೊಟ್ಟು ಕಳುಹಿದ||೧|| ಇಟ್ಟ ಕನ್ನಡಿಯಲ್ಲಿ ನಗೆಮುಖವ ನೋಡಿದನೆ|ತನಗೆ ವರುಣಾದ ಮಡದಿಯು|ಮಡದಿ ಇಲ್ಲವೆಂದು ಪುತ್ರ ಕಾಶೀ ಯಾತ್ರೆಗ್ಹೊರಟಾನೆ||೨|| ಪಟ್ಟೆ ಮಂಚಕೆ ತಕ್ಕ ಮಿತ್ರೆ ಇಲ್ಲೆ ಎಂದು|ಹೆತ್ತಮ್ಮನ ಕೂಡ ಮುನಿವನ|ಮುನಿದು ಕಾಶಿಗ್ಹೋಪ ಪುತ್ರನ ಇತ್ತ ಬರಹೇಳಿ||೩|| ಪುತ್ರ ಕಾಶಿಗೆಂದು ಹೊಸ್ತಿಲ ಇಳಿವಾಗ|ಅಕ್ಷತೆಯ ತಂದರೆದುರಲಿ|ಎದುರಲಿ ತಾಯವ್ವನ ಪುತ್ರ ಕಾಶೀಯಾತ್ರೆಗ್ಹೊರಟಾಗ||೪|| ಜೋಡಾಗೆ ಇಬ್ಬರು ಬ್ರಾಹ್ಮಣರೆದುರಾದಾರೆ| ಜೋಡಾಗೆ ಕಹಳೆ ನುಡಿದಾವೆ|ನುಡಿದಾವೆ ತಾಯವ್ವನ ಬಾಲ ಕಾಶೀಯಾತ್ರೆಗ್ಹೊರಟಾಹ||೫|| ಆಯುಧ ಸಹಿತಲೊಬ್ಬ ಶೂದ್ರ ಎದುರಾದಾನೆ|ಎಲ್ಲ ಶಕುನಗಳು ಶುಭವವು|ಶುಭವವು ತಾಯವ್ವನ ಕಂದ ಕಾಶೀಯಾತ್ರೆಗ್ಹೊರಟಾಗ||೬|| ಕಾಶೀಗ್ಹೋಗುವೆನೆಂದು ಆತ ತಮ್ಮಯ್ಯನು ದೇಶದೊಳಗುಳ್ಳ ಸಕಲವ|ಸಕಲ ವಸ್ತುಗಳನ್ನು ತಾಸು ಗಳಿಗೆಯಲಿ ತರಿಸಿದ||೭|| ಅಕ್ಕಿ ಬೆಲ್ಲದ ಗಂಟ ಕಟ್ಟಿಟ್ಟ ಹೆಗಲಲ್ಲಿ|ಮುತ್ತಿನ ಕೊಡೆಯಾ ಬಲಗೈಯ್ಯ|ಬಲಗೈಲಿ ಹಿಡಕೊಂಡು ಕಂದ ಕಾಶೀಯಾತ್ರೆಗ್ಹೊರಟಾನೆ||೮|| ಗುತ್ತಿಯ ನಾಡಿನಲಿ ಮಿತ್ರೆಯು ಇರುವಳು| ಒಪ್ಪದಲಿ ಹೋಗಿ ಕರಪಿಡಿ| ಪಿಡಿದು ತಂದಾ ಮೇಲೆ|ಕಾಶ್ಯಾತ್ರೆಗೆಂದು ಹೊರಡ್ವದು||೯|| ಇಂದೀಗೆಂಟು ದಿನಕೆ ನಾರಿಯನು ನಿನ್ನನು|ಕುಟುಂಬ ಸಹಿತವಾಗೇ ಕಳುಹುವೆ|ಕಳುಹುವೆವು ಎನುತಾಲೆ ಮಾವಯ್ಯ ಕೊಡೆಯ ತಡೆದಾನೆ||೧೦|| ಮುತ್ತಿನ‌ಕೊಡೆಗಳ ಚಪ್ಪರಕೆ ಸಾಚಿದನೆ| ಬೇಳೆ ಬೆಲ್ಲವನೆ ಇಳಿಸಿದ|ಇಳಿಸಿದ ಕಂದಯ್ಯನು ಕಾಶ್ಯಾತ್ರೆ ಮಾಡಿ ದಣಿದಾನೆ ||೧೧|| ಕಾಶೀಗ್ಹೋದರೆ ಫಲ ಹೋದೆನೆಂದರೆ ಫಲ|ಹೋದೆನೆಂದ್ ಏಳು ಹೆಜ್ಜೆಗಳ |ಹೆಜ್ಜೆಗಳ ನಡೆದರೆ ಕಾಶೀಗ್ಹೋದಷ್ಟು ಫಲ ಬಂದ||೧೨|| 🏵🏵🏵🏵🏵🏵🏵🏵🏵🏵🏵🏵 ಕಾಶೀಯಾತ್ರೆಯ ಮತ್ತೊಂದು ಹಾಡಿಗಾಗಿ ಕೆಳಗಿನ ಲಿಂಕ್ ನೋಡಿ    • Havyaka haadu_Kaashi Yatre.  ಹವ್ಯಕ ಹಾ...  

Comments