Русские видео

Сейчас в тренде

Иностранные видео


Скачать с ютуб Aihole l ಐಹೊಳೆ l Durga temple l Bagalakote l Karnataka Tourism в хорошем качестве

Aihole l ಐಹೊಳೆ l Durga temple l Bagalakote l Karnataka Tourism 10 месяцев назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



Aihole l ಐಹೊಳೆ l Durga temple l Bagalakote l Karnataka Tourism

ಐಹೊಳೆ ಭಾರತೀಯ ಶಿಲ್ಪಕಲೆಯ ತೊಟ್ಟಿಲು ಎನಿಸಿರುವ ಐಹೊಳೆಯು, ಬೆಂಗಳೂರಿನಿಂದ ೪೮೩ ಕಿ. ಮೀ ಹಾಗೂ ಹುನಗುಂದ ದಿಂದ ೩೫ ಕಿ.ಮಿ ಗಳ ದೂರದಲ್ಲಿ ಮಲಪ್ರಭಾ ನದಿಯ ದಂಡೆಯಲ್ಲಿದೆ. ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕಿಗೆ ಸೇರಿದ ಐಹೊಳೆ ಬಾದಾಮಿ ಚಾಲುಕ್ಯ ವಾಸ್ತುಶಿಲ್ಪ ಶೈಲಿಯ ಒಂದು ದೊಡ್ಡ ಕೇಂದ್ರವಾಗಿದೆ. ಇತಿಹಾಸ ಐಹೊಳೆಯು ಬಾದಾಮಿ ಚಾಲುಕ್ಯರ ಮೊದಲ ರಾಜಧಾನಿಯಾಗಿದ್ದಿತು. ಈ ಸ್ಥಳದ ದೇವಾಲಯಗಳು ಹಾಗೂ ದೇವಾಲಯದ ಶಿಲ್ಪಗಳು ಅತಿ ಹೆಚ್ಚು ಪ್ರಾಚೀನವಾದವುಗಳಾಗಿವೆ. ಇದು ಚಾಲುಕ್ಯರ ಕಾಲದಲ್ಲಿ ವಿದ್ಯಾಕೇಂದ್ರವಾಗಿತ್ತು. ಐಹೊಳೆ ಒಂದು "ಅಧಿ ಷ್ಠಾನ". ಅಂದರೆ ಸರಕಾರದ ಆಡಳಿತಾಕಾರದ ಒಂದು ಕೇಂದ್ರ ಅಥವಾ ರಾಜಧಾನಿನಗರವಾಗಿತ್ತು. ಐಹೊಳೆಯ ಹೆಸರು ಶಾಸನಗಳಲ್ಲಿ ಆರ್ಯಪುರ' ಎಂದು ಉಲ್ಲೇಖಿಸಲ್ಪಟ್ಟಿದೆ. ಆರ್ಯಪುರವಾಗಿದ್ದ ಸ್ಥಳ ಕಾಲಾನುಕ್ರಮದಲ್ಲಿ ಆಡುಭಾಷೆಯಲ್ಲಿಐಹೊಳೆ ಯಾಯಿ ತು. ಐಹೊಳೆ ಅತ್ಯಂತ ಪ್ರಾಚೀನ ಗ್ರಾಮ. ಐಹೊಳೆಗೆ ಭಾರತೀಯ ಇತಿಹಾಸದಲ್ಲಿ ತುಂಬ ಮಹತ್ವದ ಸ್ಥಾನವಿದೆ. ಇದನ್ನು ದೇವಾಲಯ ವಾಸ್ತು ನಿರ್ಮಾಣದ ತೊಟ್ಟಿಲು ಎಂದು ಕರೆಯುತ್ತಾರೆ. 6ರಿಂದ 8ನೇ ಶತಮಾನದವರೆಗೆ ಗುಹಾಲಯ ಹಾಗು ದೇವಾಲಯಗಳ ನಿರ್ಮಾಣದಲ್ಲಿ ಅನೇಕ ರೀತಿಯ ಪ್ರಯೋಗಗಳು ನಡೆದದ್ದನ್ನು ಕಾಣುತ್ತೇವೆ. ಶಾಸನದಲ್ಲಿ ಈ ಸ್ಥಳವನ್ನು ಅಯ್ಯವೊಳೆ-ಆಯಿವೊಳೆ-ಐಯಾವೊಳಿ-ಆರ್ಯಪುರ ಮುಂತಾಗಿ ಉಲ್ಲೇಖಿಸಲಾಗಿದ್ದು ಬರುಬರುತ್ತ ಐಹೊಳೆ ಆಗಿರುವ ಸಾಧ್ಯತೆ ಇದೆ. ಇದಲ್ಲದೇ ಐನೂರು ಪಂಡಿತರು ಇದ್ದದ್ದರಿಂದ ಐಹೊಳೆ ಎಂದಾಯ್ತೆಂತಲೂ ಪರುಶುರಾಮನು ಕ್ಷತ್ರಿಯರನ್ನು ನಿರ್ನಾಮ ಮಾಡಿ ರಕ್ತ ಸಿಕ್ತ ಪರಶುವನ್ನು ಇಲ್ಲಿನ ಹೊಳೆಯೊಂದರಲ್ಲಿ ತೊಳೆದಾಗ ಇಡೀ ನದಿ ನೀರೆ ಕೆಂಪಾಯ್ತತಂತೆ. ಇದನ್ನು ಕಂಡು ಊರಿನ ಮಹಿಳೆಯರು 'ಅಯ್ಯಯ್ಯೋ ಹೊಳಿ' ಎಂದು ಉದ್ಗರಿಸಿದ್ದೇ ಮುಂದೆ ಬರುಬರುತ್ತ ಐಹೊಳೆಯಾಯ್ತೆಂಬ ಪೌರಾಣಿಕ ಐತಿಹ್ಯಗಳೂ ಈ ಊರಿನ ಹೆಸರಿನೊಂದಿಗೆ ತಳಕು ಹಾಕಿಕೊಂಡಿವೆ. ಇಲ್ಲಿ ಕ್ರಿ.ಪೂ. ೬-೭ನೇ ಶತಮಾನದಲ್ಲಿ ಅಂದರೆ 'ಕಬ್ಬಿಣದ ಯುಗ'ದಲ್ಲೇ ಇಲ್ಲಿ ಜನವಸತಿ ಇತ್ತೆಂದು ಪ್ರಾಗೈತಿಹಾಸಿಕ ಸಂಶೋಧಕರು ಅಂದಾಜು ಮಾಡಿದ್ದಾರೆ. ಇಲ್ಲಿ ಉಸಗು ಕಲ್ಲಿನಿಂದ ಮತ್ತು ಕತ್ತರಿಸಿದ ಬಂಡೆಗಳನ್ನು ಗಾರೆ, ಮಣ್ಣಿನ ನೆರವಿಲ್ಲದೆ ಒಂದರ ಮೇಲೊಂದು ಇಟ್ಟು ನಿರ್ಮಿಸಿದ ಕೋಟೆಯಿದೆ. ಇದನ್ನು ಸುಮಾರು ಕ್ರಿ.ಶ. ೬ನೇ ಶತಮಾನದಲ್ಲಿ ನಿರ್ಮಿಸಿರಬಹುದು ಎಂದು ಹೇಳಲಾಗಿದ್ದು ಕರ್ನಾಟಕದಲ್ಲಿ ಉಳಿದಿರುವ ಶಿಲಾಕೋಟೆಗಳ ಪೈಕಿ ಇದು ಅತ್ಯಂತ ಪ್ರಾಚೀನವಾದದ್ದಾಗಿದೆ. ಕೋಟೆಯ ಸುತ್ತ ಕಂದಕ ಇರುವುದನ್ನು ಈಗಲೂ ಗುರುತಿಸಬಹುದಾಗಿದ್ದು, ಕೋಟೆಯ ಅವಶೇಷಗಳನ್ನು ಕಾಣಬಹುದು. ವಾಸ್ತುಶಿಲ್ಪ: ಇಲ್ಲಿ ಸುಮಾರು 120 ದೇವಾಲಯ ಹಾಗು 4 ಗುಹಾಲಯಗಳನ್ನು ಕಾಣಬಹುದು. ಇವನ್ನೆಲ್ಲ ಬೇರೆ ಬೇರೆ ಕಾಲಘಟ್ಟಗಳಲ್ಲಿ ನಿರ್ಮಿಸಲಾಗಿದ್ದು ಪ್ರತಿಯೊಂದರ ವಾಸ್ತು ಭಿನ್ನವಾಗಿವೆ. ಇವನ್ನು ಸ್ಥಳೀಯವಾಗಿ ಸಿಗುವ ಕೆಂಪು ಮರಳು ಶಿಲೆಯಲ್ಲಿ ನಿರ್ಮಿಸಿದ್ದರಿಂದ ಅನೇಕ ದೇವಾಲಯಗಳು ಕಾಲನ ಹೊಡೆತಕ್ಕೆ ಸಿಕ್ಕು ಹಾಳಾಗಿವೆ. ಅಲ್ಲದೇ ಮುಸ್ಲಿಂ ದಾಳಿಯಿಂದ ಹಾಗು ಜನರಲ್ಲಿರುವ ಇತಿಹಾಸ ಪ್ರಜ್ಷೆಯ ಕೊರತೆಯಿಂದ ಮತ್ತು ನಿಧಿಯ ಆಶೆಯಿಂದಲೂ ಅನೇಕ ದೇವಾಲಯಗಳು ಹಾಳಾಗಿರುವ ಕನ್ನಡ ಸಾಹಿತ್ಯ. ಹಾಗೂ ಇಲ್ಲಿ ಅನೇಕ ಜನರು ಈ ಕಟ್ಟಡಗಳನ್ನು ನೋಡಲು ಬಂದಾಗಲೂ ಶಿಲೆಗಳನ್ನು ಮುಟ್ಟಿ ಹಾಳಾಗಿವೆ, ಎಂದು ಹೇಳಲಾಗಿದೆ. ದೇವಾಲಯಗಳು ಇಲ್ಲಿನ ದೇವಾಲಯಗಳ ನಿರ್ಮಾಣದಲ್ಲಿ ಔತ್ತರೇಯ ಪದ್ಧತಿಯ ಪ್ರಭಾವವು ಕಂಡು ಬರುತ್ತದೆ. ಐಹೊಳೆಯ ದೇವಾಲಯಗಳನ್ನು ಪುರಾತತ್ವ ಸರ್ವೇಕ್ಷಣ ಇಲಾಖೆ ೨೨ ವಿಭಾಗಳಾಗಿ ವಿಂಗಡಿಸಿದೆ. ಇದರಲ್ಲಿ ಹುಚ್ಚಿಮಲ್ಲಿಗುಡಿ, ಲಡಖಾನ್ ಗುಡಿ, ಹುಚ್ಚಪ್ಪಯ್ಯಮಠ, ಗಳಗನಾಥ, ರಾವಲ್ ಪಹಡಿ, ಗುಹಾಂತರ ದೇವಾಲಯ, ಜೈನರ ಮೇಗುತಿ ದೇವಾಲಯ, ಎರಡು ಅಂತಸ್ತಿನ ಜೈನ ದೇವಾಲಯ ಪ್ರಮುಖ ಆಕರ್ಷಣೆ. ಇಲ್ಲಿನ ದೇವಾಲಯಗಳ ವಿಚಿತ್ರ ಹೆಸರುಗಳಿಗೆ ಐತಿಹಾಸಿಕವಾಗಿ ಯಾವ ಸಮರ್ಥನೆಯೂ ಸಿಗುವುದಿಲ್ಲ. ಬಹುಶ: ಬ್ರಿಟಿಷರ ಕಾಲದಲ್ಲಿ ಸರ್ವೇ ಮಾಡಲು ಪ್ರಾರಂಭಿಸಿದಾಗ ಆಯಾ ದೇವಾಲಯಗಳಲ್ಲಿ ಆಗ ವಾಸವಾಗಿದ್ದ ವ್ಯಕ್ತಿಗಳಿಂದ ಇಂಥ ಹೆಸರುಗಳು ಬಂದಿರುವ ಸಾಧ್ಯತೆ ಇದೆ. ೧. ಇಲ್ಲಿನ ದೇವಾಲಯಗಳಲ್ಲಿ ದುರ್ಗಾ ದೇವಾಲಯ ಅತ್ಯಂತ ಪ್ರಮುಖವಾದದ್ದು. ಇದು ಮೂಲತ: ಸೂರ್ಯದೇವಾಲಯವಾಗಿದ್ದು ಕೋಟೆ ಅಂದರೆ ದುರ್ಗಕ್ಕೆ ಹತ್ತಿರವಿರುವುದರಿಂದ ದುರ್ಗ ದೇವಾಲಯವೆಂದು ಪ್ರಸಿದ್ಧವಾಗಿದೆ. ಕ್ರಿ ಶ 742ರಲ್ಲಿ 2ನೇ ವಿಕ್ರಮಾದಿತ್ಯನ ಅಳಿಯ ಕೋಮಾರಸಿಂಗ ಎಂಬುವವ ಇದನ್ನು ಕಟ್ಟಿಸಿದ. ಎತ್ತರದ ಜಗತಿ ಮೇಲೆ ಕಟ್ಟಲಾಗಿದ್ದು ಗಜಪೃಷ್ಠಾಕಾರದಲ್ಲಿ ಇರುವುದು ಇದರ ವಿಶೇಷತೆ. ಇದರ ಅಸಂಖ್ಯ ಕಲ್ಲಿನ ಕಂಬಗಳು ಹಾಗು ಇಂಗ್ಲೀಷ ಅಕ್ಷರದ U ಆಕಾರದ ವಿಶಿಷ್ಠ ರಚನೆಯಿಂದ ಹೊರನೋಟಕ್ಕೆ ದೆಹಲಿಯ ಸಂಸತ್ ಭವನವನ್ನು ನೆನಪಿಸುತ್ತದೆ. ಐಹೊಳೆಯ ಕೋಟೆಯನ್ನು ಉತ್ತರ ರಸ್ತೆಯಿಂದ ಪ್ರವೇಶಿಸುತ್ತಿದ್ದಂತೆಯೇ ಕಾಣುವ ಕ್ರಿ.ಶ ೫ನೇ ಶತಮಾನದಲ್ಲಿ ನಿರ್ಮಿಸಲಾಗಿರುವ ಸುಂದರ ಹಾಗೂ ಮನಮೋಹಕ ಕೆತ್ತನೆಗಳಿಂದ ಕಂಗೊಳಿಸುವ ದುರ್ಗೆಯ ಮಂದಿರ ಮನಸೆಳೆಯುತ್ತದೆ. ದೇವಾಲಯದ ಮುಖಮಂಟಪದ ಭಿತ್ತಿಯ ಅಡ್ಡಪಟ್ಟಿಕೆಗಳಲ್ಲಿ ರಾಮಲಕ್ಷ್ಮಣ ಸೀತಾಮಾತೆಯನ್ನು ಗುಹ -ನಾವೆಯ ನೆರವಿನಿಂದ ನದಿ ದಾಟಿಸಿದ ಸುಂದರ ಉಬ್ಬುಶಿಲ್ಪವಿದೆ. ಪುರಾಣ, ಪುಣ್ಯಕಥೆಗಳ ಹಲವು ಕಥಾನಕಗಳು ಇಲ್ಲಿವೆ. ೨. ಕ್ರಿ.ಶ.೪೫೦ರಲ್ಲಿ ನಿರ್ಮಿತವಾದ ಲಾಡಖಾನ್ದ್ದೇ ಇಲ್ಲಿನ ಪ್ರಾಚೀನ ದೇವಾಲಯ. ವಿಷ್ಣುವಿಗೆ ಸಮರ್ಪಿತವಾಗಿದ್ದ ದೇವಾಲಯದ ರಚನೆಯಲ್ಲಿ ಗುಪ್ತ ಸಂಪ್ರದಾಯದ ಪ್ರಭಾವವು ಕಂಡು ಬರುತ್ತದೆ. ಏಕೆಂದರೆ ಪೂರ್ಣ ಕಲಶ ಮತ್ತು ನಿಂತ ನಿಲುವಿನ ಗಂಗೆ-ಯಮುನೆಯರ ಆಕೃತಿಗಳು ಇಲ್ಲಿವೆ. ಇದರ ಹೆಸರಿಗೂ ದೇವಾಲಯಕ್ಕೂ ಯಾವುದೇ ಸಂಬಂಧವಿಲ್ಲ. ಬಹುಶ: ಮುಸ್ಲಿಂ ಸಂತನೊಬ್ಬ ಇಲ್ಲಿ ವಾಸವಾಗಿದ್ದರಿಂದ ಈ ಹೆಸರು ಬಂದಿರಬಹುದು. ಪೂರ್ವದಲ್ಲಿ ಇದೊಂದು ಸಮುದಾಯ ಭವನಾಗಿದ್ದು ನಂತರದ ಕಾಲಘಟ್ಟದಲ್ಲಿ ಗರ್ಭಗುಡಿಯನ್ನು ಸೇರಿಸಿದಂತಿದೆ. ಇಲ್ಲಿನ ಕಂಬವೊಂದರ ಮೇಲೆ ಚಳುಕ್ಯರ ರಾಜ ಲಾಂಛನ, ಕಲ್ಲಿನ ಏಣಿ ಹಾಗು ವಿವಿಧ ಚಿತ್ತಾರದ ಜಾಲಂಧ್ರಗಳು ಗಮನ ಸೆಳೆಯುತ್ತವೆ ೩. ಕ್ರಿ.ಶ.೬೩೪ರಲ್ಲಿ ೨ನೆಯ ಪುಲಿಕೇಶಿಯ ಕಾಲದಲ್ಲಿ ಅವನ ಆಶ್ರಯದಲ್ಲಿದ್ದ ರವಿಕೀರ್ತಿಯಿಂದ ಮೇಗುಟಿ(ಮೇಗುಡಿ ಅಂದರೆ ಮೇಲಿನ ಗುಡಿ) ದೇವಾಲಯವು ನಿರ್ಮಾಣವಾಯಿತು. ಎತ್ತರವಾದ ಸ್ಥಳದಲ್ಲಿರುವ ಕಾರಣ ದೇವಾಲಯಕ್ಕೆ ಈ ಹೆಸರು ಬಂದಿದೆ.ಜಿನನಿಗೆ ಸಮರ್ಪಿತ ವಾಗಿದ್ದ ಈ ಗುಡಿಯು ಗರ್ಭಗೃಹ ಮತ್ತು ನವರಂಗಗಳನ್ನು ಹೊಂದಿದೆ. ಇದು ಬೆಟ್ಟದ ಮೇಲಿದ್ದು ಎತ್ತರದ ಅಧಿಷ್ಠಾನದ ಮೇಲೆ ಕಟ್ಟಲಾಗಿದೆ. ಇದನ್ನು ಇಮ್ಮಡಿ ಪುಲಿಕೇಶಿಯ ಆಸ್ಥಾನದಲ್ಲಿದ್ದ ರವಿಕೀರ್ತಿ ಎಂಬ ಕವಿ ಕಟ್ಟಿಸಿದ. ಇಲ್ಲಿನ ಮುಖಮಂಟಪದ ಹೊರಭಿತ್ತಿಯ ಮೇಲೆ ಚಾಳುಕ್ಯ ಅರಸರ ವಂಶಾವಳಿ ಹಾಗು ಉತ್ತರ ಭಾರತದ ವಿಷ್ಣುವರ್ಧನ ಹಾಗು ಇಮ್ಮಡಿ ಪುಲಕೇಶಿ ನಡುವೆ ನಡೆದ ಯುದ್ಧದ ವಿವರಣಾತ್ಮಕ ಶಾಸನವಿದೆ. ಇಲ್ಲಿ ಮಹಡಿ ಮೇಲೊಂದು ಗರ್ಭಗುಡಿ ಇರುವುದು ವಿಶೇಷ. ಮೇಲಿರುವ ಗರ್ಭಗೃಹಕ್ಕೆ ಹೋಗಲು ಅಂತರಾಳದಲ್ಲಿ ಮೆಟ್ಟಿಲುಗಳಿವೆ. ಇದು ಕರ್ನಾಟಕದ ಅತ್ಯಂತ ಪುರಾತನ ಜಿನಾಲಯವಾಗಿದ್ದು ಅಧ್ಯನದ ದೃಷ್ಟಿಯಿಂದ ಮಹತ್ವದ್ದಾಗಿದೆ. Google map location: https://maps.app.goo.gl/27rEckfnczGWt... No Copyright Music | Copyright free Flute Background Music | No copyright Flute Background Music    • No Copyright Music | Copyright free F...   LICENSE:- We license all of our music under a Creative Commons #NoCopyrightMusic #copyright #copyrightfree

Comments