Русские видео

Сейчас в тренде

Иностранные видео


Скачать с ютуб ಜಯತೀರ್ಥರ ಸ್ತೋತ್ರ ಸುಳಾದಿ|ಸಾಹಿತ್ಯದೊಂದಿಗೆ|Jayateertharastotra Suladi with lyrics||Vyasateerthacharya в хорошем качестве

ಜಯತೀರ್ಥರ ಸ್ತೋತ್ರ ಸುಳಾದಿ|ಸಾಹಿತ್ಯದೊಂದಿಗೆ|Jayateertharastotra Suladi with lyrics||Vyasateerthacharya 3 года назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



ಜಯತೀರ್ಥರ ಸ್ತೋತ್ರ ಸುಳಾದಿ|ಸಾಹಿತ್ಯದೊಂದಿಗೆ|Jayateertharastotra Suladi with lyrics||Vyasateerthacharya

Sri Jayateerthara Stotra Suladi of Sri Vijayadasaru sung by Vyasateerthacharya, Mysore. Lyrics:- ಶ್ರೀ ಜಯತೀರ್ಥರ ಸ್ತೋತ್ರ ಸುಳಾದಿ ಜಯರಾಯ ಜಯರಾಯ ಜಯದೇವಿ ಅರಸನ್ನಾ – ಶ್ರಯಮಾಡಿಕೊಂಡಿಪ್ಪ ತಪೋವಿತ್ತಪ ಭಯವ ಪರಿಹರಿಸಿ ಭವದೂರರ ಮಾಡಿ ಹರಿಭ – ಕ್ತಿಯ ಕೊಡು ಜ್ಞಾನ ವೈರಾಗ್ಯದೊಡನೆ ದಯ ದೃಷ್ಟಿಯಿಂದ ನೋಡು ಕಾಪಾಡು ಮಾತಾಡು ಲಯ ವಿವರ್ಜಿತವಾದ ವೈಕುಂಠಕೆ ಸ್ವಯವಾಗಿ ಮಾರ್ಗ ತೋರು ಸಜ್ಜನರೊಳಗಿಟ್ಟು ಜಯವ ಪಾಲಿಸು ಎನಗೆ ಯತಿಕುಲರನ್ನ ಅಯುತಕ್ಕಾದರು ನಾನು ಐಹಿಕ ಸುಖವನೊಲ್ಲೆ ಬಯಸುವೆ ಸತತದಲ್ಲಿ ಹರಿಯ ನಾಮ – ತ್ರಯಗಳ ನಾಲಿಗೇಲಿ ನೆನೆದು ನೆನೆದು ಕರ್ಮ ಕ್ಷಯವಾಗುವಂತೆ ಕ್ಷಿಪ್ರದಲ್ಲಿ ಬಿಡದೆ ಪ್ರಯತ್ನವೆಂಬೋದಿದಕೆ ಸಾರ್ಥಕವಾಗಲಿ ಪಯೋನಿಧಿ ಸುತೆರಮಣ ಮನದೊಳು ನಿಲ್ಲಲು ಪಯಃಪಾನದಿಂದಧಿಕ ನಿಮ್ಮ ದರುಶನ ಎನಗೆ ಪ್ರಿಯ ಮತ್ತೊಂದಾವದಿಲ್ಲ ಇದೇ ಬಲು ಲಾಭ ಗಯ ಕಾಶಿ ತ್ರಿಸಂಗಮ ಮೊದಲಾದ ತೀರ್ಥಕ್ಷೇತ್ರ ನಯದಿಂದ ಮಾಡಿದ ಫಲಬಪ್ಪುದು ಪಯೋಧರಗಳ ತಿನದಂತೆ ಮಾಳ್ಪುದು ಹೃ – ದಯದೊಳಗಿಪ್ಪದೆನೆಗೆ ಇದೇ ಏಕಾಂತ ಭಯಕೃದ್ಭಯನಾಶ ವಿಜಯವಿಠ್ಠಲನ ಸೇ – ವೆಯ ಮಾಡುವ ಸದ್ಗುಣಶೀಲ ಸುಜನಪಾಲಾ ॥ 1 ॥ ಮಟ್ಟತಾಳ ಆವ ಜನುಮದ ಪುಣ್ಯ ಫಲಿಸಿತು ಎನಗಿಂದು ರಾವುತರಾಗಿದ್ದ ಜಯತೀರ್ಥರ ಕಂಡೆ ದೇವಾಂಶರು ಇವರು ಇವರ ಸ್ವರೂಪವ ಭಾವದಿಂದಲಿ ತಿಳಿದು ಕೊಂಡಾಡುವ ಧನ್ಯ ಪಾವಿನ ಪರಿಯಲ್ಲಿ ಇಲ್ಲಿ ಇರುತಿಪ್ಪರು ಕಾವುತ ಭಕುತರ ಪಾವನಗೈಸುವರು ದೇವ ದೇವೇಶ ಸಿರಿ ವಿಜಯವಿಠ್ಠಲ ನಂಘ್ರಿ – ತಾವರೆ ಭಜಿಸಿಸುವ ನಿಷ್ಕಾಮುಕ ಮೌನಿ ॥ 2 ॥ ತ್ರಿವಿಡಿತಾಳ ವೈಷ್ಣವ ಜನ್ಮ ಬಂದುದಕಿದೇ ಸಾಧನ ವಿಷ್ಣುವಿನ ಭಕುತಿ ದೊರಕಿದುದಕೆ ನಷ್ಟವಾಯಿತು ಎನ್ನ ಸಂಚಿತಾಗಾಮಿ ಕರ್ಮ ಕಷ್ಟ ದಾರಿದ್ರಗಳು ಹಿಂದಾದವೋ ತುಷ್ಟನಾದೆನು ಎನ್ನ ಕುಲಕೋಟಿ ಸಹಿತ ಅ – ನಿಷ್ಟ ಮಾರ್ಗಕೆ ಇನ್ನು ಪೋಗೆ ನಾನು ಸೃಷ್ಟಿಯೊಳಗೆ ಇವರ ದರ್ಶನವಾಗದಲೆ ಸ್ಪಷ್ಟವಾದ ಜ್ಞಾನ ಪುಟ್ಟದಯ್ಯಾ ಇಷ್ಟು ಕಾಲ ಬಿಡದೆ ಮುಂದೆ ಮಾಡುವ ಬಲು ನಿಷ್ಟಗೆ ಅನುಕೂಲ ತಾತ್ವಿಕರು ಶಿಷ್ಟಾಚಾರವನ್ನು ಮೀರದಲೆ ನಿಮ್ಮ ಇಷ್ಟಾರ್ಥ ಬಯಸುವದು ಉಚಿತದಲ್ಲಿ ವೈಷ್ಣವಾಚಾರ್ಯರ ಮತ ಉದ್ಧಾರ ಕರ್ತ ಭ್ರಷ್ಟವಾದಿಗಳನ್ನು ನುಗ್ಗಲೊತ್ತಿ ಕೃಷ್ಣೆವಂದಿತ ನಮ್ಮ ವಿಜಯವಿಠ್ಠಲರೇಯನ ಅಷ್ಟ ಕರ್ತೃತ್ವ ಸ್ಥಾಪಿಸಿದ ಧೀರ ॥ 3 ॥ ಅಟ್ಟತಾಳ ಕುಶರಾಯ ಇಲ್ಲಿ ತಪಸು ಮಾಡಿದಂಥ ವಸುಮತಿಯ ನೋಡಿ ದಿಗ್ದೇಶ ಜಯಿಸಿ ಮಾ – ನಸದಲ್ಲಿ ತಿಳಿದು ಅಕ್ಷೋಭ್ಯತೀರ್ಥರು ನಸುನಗುತಲೆ ಇಲ್ಲಿ ವಾಸವಾದರು ಬಿಡದೇ ಋಷಿ ಕುಲೋತ್ತಮರಾದ ಜಯರಾಯರು ನಿತ್ಯ ಬೆಸನೆ ಬೆಸನೆ ಬಂದು ಗುಪ್ತದಲ್ಲಿ ಪೂ – ಜಿಸುವರು ಪ್ರೀತಿಲಿ ಏನೆಂಬೆನಾಶ್ಚರ್ಯ ಶಶಿ ವರ್ಣದಂತೆ ಪೊಳೆವ ದರುಶನ ಗ್ರಂಥ ರಸ ಪೂರಿತವಾಗಿ ವಿಸ್ತರಿಸಿದರು ವಿ – ಕಸಿತವ ಮಾಡಿ ಕರದ ಕನ್ನಡಿಯಂತೆ ಕುಶಲ ಮಾನವರಿಗೆ ಜ್ಞಾನ ಹೆಚ್ಚುವಂತೆ ವಸುಧೆಯೊಳಗೆ ನಮ್ಮ ವಿಜಯವಿಠ್ಠಲರೇಯನು ವಶವಾಗುವದಕ್ಕೆ ಪ್ರಸಾದ ಮಾಡಿದರು ॥ 4 ॥ ಆದಿತಾಳ ಈ ಮುನಿ ಒಲಿದರೆ ಅವನೆ ಭಾಗ್ಯವಂತ ಭೂಮಿಯೊಳಗೆ ಮುಕ್ತಿ ಯೋಗ್ಯನೆನಿಸುವನು ಭೀಮ ಭವಾಂಬುಧಿ ಬತ್ತಿ ಪೋಗುವುದು ನಿ – ಸ್ಸೀಮನಾಗುವ ಪಂಚಭೇದಾರ್ಥ ಪ್ರಮೇಯದಲ್ಲಿ ತಾಮಸ ಜನರಿಗೆ ಭಕ್ತಿ ಪುಟ್ಟದು ದುಃ – ಖ ಮಹೋದಧಿಯೊಳಗೆ ಸೂಸುತಲಿಪ್ಪರು ಸ್ವಾಮಿ ಈಗಲೆ ಬಂದು ದುರುಳ ಮನುಜನ ನೋಡಿ ನಾ ಮೊರೆ ಇಡುವೆನು ಕಾಯೊ ಕರುಣದಲ್ಲಿ ಯಾಮ ಯಾಮಕೆ ನಿಮ್ಮ ಸ್ಮರಣೆ ಪಾಲಿಸಿ ಉ – ತ್ತಮ ಬುದ್ಧಿಕೊಟ್ಟು ಕೃತಾರ್ಥನ್ನ ಮಾಡು ರಾಮ ಸುಗುಣಧಾಮ ವಿಜಯವಿಠ್ಠಲನ ನಾಮ ಕೊಂಡಾಡುವ ಟೀಕಾಚಾರ್ಯ ॥ 5 ॥ ಜತೆ ಮೇಘನಾಥಪುರ ಕಕುರ ವೇಣಿವಾಸ ರಾಘವೇಶ ವಿಜಯವಿಠ್ಠಲನ್ನ ನಿಜದಾಸ ॥ #ಜಯತೀರ್ಥರು #ಮಳಖೇಡ #ಟೀಕಾಚಾರ್ಯರು #jayateertha #malakheda #nyayasudha #satyatmatirtha_swamiji #vyasateerthacharya #ಮೂಲರಾಮ #Moolarama #kanavalli #vyasasudhalahari #ವ್ಯಾಸಸುಧಾಲಹರಿ

Comments