Русские видео

Сейчас в тренде

Иностранные видео


Скачать с ютуб "Sripadaraya guruve dhrudha bhakuti",Sripadarajara stotra suladi,Vijayadasara rachane,Nandini Sripad в хорошем качестве

"Sripadaraya guruve dhrudha bhakuti",Sripadarajara stotra suladi,Vijayadasara rachane,Nandini Sripad 3 года назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



"Sripadaraya guruve dhrudha bhakuti",Sripadarajara stotra suladi,Vijayadasara rachane,Nandini Sripad

ಶ್ರೀವಿಜಯದಾಸಾರ್ಯ ವಿರಚಿತ ಶ್ರೀ ಶ್ರೀಪಾದರಾಜರ ಸ್ತೋತ್ರ ಸುಳಾದಿ ರಾಗ ತೋಡಿ ಧ್ರುವತಾಳ ಶ್ರೀಪಾದರಾಯ ಗುರುವೆ ಧೃಢಭಕುತಿಯಿಂದ ನಿಮ್ಮ ಶ್ರೀಪಾದಪದುಮವನ್ನು ನೆರೆನಂಬಿದವನ ಭಾಗ್ಯ ಆಪಾರವಲ್ಲದೆ ಲೇಶ ಕೊರತೆ ಇಲ್ಲ ಗೋಪಾದ ಉದಕದೊಳು ರತುನ ದೊರಕಿದಂತೆ ಪ್ರಾಪುತವಾಗುವದು ಬಾಹೀರಂತರ ಸೌಖ್ಯ ಲೋಪವಾಗದು ಒಂದು ಇಷ್ಟಾರ್ಥ ಪ್ರತಿದಿನ ಆಪಾರ್ಥ ಎನಿಸದು ಪೇಳಿದ ವಚನಂಗಳು ಆಪವರ್ಗಕೆ ಮಾರ್ಗ ಕೇವಲ ಖ್ಯಾತಿಯಾಗಿ ತಾಪಸಿಯಾಗುವನು ಜನುಮ ಜನುಮವು ಬಿಡದೆ ಗೋಪಾಲಕೃಷ್ಣನ ಗುಣವೆ ಕೊಂಡಾಡುತ ಆಪಾದಮೌಳಿ ಪರಿಯಂತ ನೋಡುವ ಮಹ - ಪಾಪ ರಹಿತರಾಗಿ ಸಂಚರಿಸುವರು ನಿತ್ಯ ಪ್ರಾಪುತವಲ್ಲದೆ ಒಂದಾದರವರಿಗೆ ಭೂಪಾರ ಬೇಡಿದ ಮನೋರಥಂಗಳು ಶ್ರೀಪಾದರಾಯ ಶಿರಿ ನಾರಾಯಣ ಯೋಗಿ ಈ ಪರಿ ಸ್ಮರಿಸಿದ ಜನರ ಸಂಗದಲ್ಲಿದ್ದ ಆ ಪುಣ್ಯಪುರುಷನಿಗೆ ಕೈವಲ್ಯ ಇದ್ದಲ್ಲಿಗೆ ಪೋಪಾದಲ್ಲದೆ ಅವನ ಆಯುಷ್ಯ ವ್ಯರ್ಥವಾಗಿ ಭಾಪು ಇವರ ಬಿರುದು ಪೊತ್ತು ತಿರುಗಿದರೆ ಶಾಪಾದಪಿ ಶರಾದಪಿ ಎನಿಸಿಕೊಂಬ ದೀಪದ ಬೆಳಕಿನಲ್ಲಿ ಸರ್ವವು ಕಂಡಂತೆ ವ್ಯಾಪುತದರ್ಶಿಯಾಗಿ ಯೋಗ್ಯತದಂತೆ ಕಾಂಬ ದ್ವಿಪಾದ ಪಶುಗಾಣೊ ಈ ಮುನಿಯ ನಂಬದವ ಕೂಪಾರವೆಂಬ ಮಹ ಘೋರದೊಳಗೆ ಇಪ್ಪ ಆಪತ್ಕಾಲ ಮಿತ್ರ ವಿಜಯವಿಟ್ಠಲರೇಯನ ವ್ಯಾಪಾರವನ್ನೆ ನೆನೆದು ನಲಿನಲಿದಾಡುವ ॥ 1 ॥ ಮಟ್ಟತಾಳ ಭಕುತಿ ಬೇಕಾದವರು ಇವರ ಪಾದದಲ್ಲಿ ಸಕಲಕಾಗೆ ಇದೇ ಸಾಧ್ಯವೆ ನಮಗೆಂದು ಸಕುತನಾಗಲಿ ಬೇಕು ರಾಗಂಗಳ ತೊರೆದು ಮುಕುತಿ ಮಾರ್ಗಕೆ ಇನ್ನು ಯಾತಕೆ ಅನುಮಾನ ಕಕುಲಾತಿಯಿಂದ ಕಂಡಲ್ಲಿ ತಿರುಗಿ ಹಕ್ಕಲ ಮನಸಿನಲ್ಲಿ ಕೆಟ್ಟು ಪೋಗದಿರಿ ಲಕುಮಿರಮಣ ನಮ್ಮ ವಿಜಯವಿಟ್ಠಲರೇಯನ ಭಕುತರೊಳಗೆ ಮಹಾಮಹಿಮ ಎನಿಸಿಕೊಂಬಾ ॥ 2 ॥ ತ್ರಿವಿಡಿತಾಳ ನಂಬಿರೊ ಶ್ರೀಪಾದರಾಯರ ಚರಣವ ಹಂಬಲಿಸದಿರಿ ಅನ್ಯಮಾರ್ಗ ತುಂಬಿ ತುಳುಕುತಿಪ್ಪುದು ಇಹಪರದ ಭಾಗ್ಯ ಉಂಬುವದುಡುವದು ಅಡಿಗಡಿಗೆ ಡಿಂಬದೊಳಗೆ ಹರಿಯ ಧ್ಯಾನಂಗತನಾಗಿ ಕಾಂಬುವ ಲೇಶ ಪಾಪಂಗಳಿಲ್ಲದೆ ಗಂಭೀರ ಸಂಸಾರವಾದರೂ ಅದೆ ಅವಗೆ ಇಂಬುಗೊಡುವದು ವೈದೀಕವೆನಿಸಿ ಅಂಬುಜಸಖ ತೇಜ ವಿಜಯವಿಟ್ಠಲರೇಯನ ಬೆಂಬಿಡದೆ ಭಜಿಸಬೇಕು ಈ ಪರಿಯಲ್ಲಿ ॥ 3 ॥ ಅಟ್ಟತಾಳ ಇವರ ಪ್ರಸಾದವಾದರೆ ವ್ಯಾಸಮುನಿರಾಯ ಕವಿರಾಯ ಪುರಂದರದಾಸರು ಮೊದಲಾ - ದವರ ಕರುಣವಿನ್ನು ಸಿದ್ಧಿಸುವದು ಕೇಳಿ ನವಭಕುತಿ ಪುಟ್ಟುವದು ವ್ಯಕ್ತವಾಗಿ ತವಕದಿಂದಲಿ ಚರಮದೇಹ ಬರುವದು ದಿವಿಜರು ವಲಿದು ಸತ್ಕರ್ಮ ಮಾಡಿಸುವರು ಅವಿರುದ್ಧರಾದ ಜನರೆಲ್ಲ ನೆರೆದು ಭಾ - ಗ್ಯವನು ಬರಲಿ ಎಂದು ಕೊಂಡಾಡುವರು ನಿತ್ಯ ಶ್ರವಣಕ್ಕೆ ತೋರುವ ವಿಜಯವಿಟ್ಠಲರೇಯನ ದಿವರಾತ್ರಿಯಲಿ ನೋಡಿ ಸುಜನರ ಕೂಡುವಾ ॥ 4 ॥ ಆದಿತಾಳ ನರಕ ನರಕದಲ್ಲಿ ಹೊರಳುವ ಆ ಮನುಜ ಧರೆಯೊಳು ಇವರ ಚರಿತೆ ಒಂದೊಂದದ್ಭುತವಾಗಿ ನಿರುತದಲ್ಲಿ ನೋಡೆ ತುಂಬಿ ಸೂಸುತಲಿವೆ ಅರುಣೋದಯದಲೆದ್ದು ಶ್ರೀಪಾದರಾಯರೆಂದು ಸ್ಮರಿಸಿದ ಮಾನವಂಗೆ ಸರ್ವ ಸಾಧನದಿಂದ ಪರಮಗತಿಯಾದಂತೆ ಆಗುವದು ಸಿದ್ಧ ಪರಿಹಾಸವಲ್ಲ ಕೇಳಿ ಅನುಭವ ತಿಳಿದವಗೆ ಸುರ ಭೂಸುರರ ಪ್ರಿಯ ವಿಜಯವಿಟ್ಠಲನ ಕರುಣದಿಂದಲಿ ಮಹ ಉನ್ನತದಲ್ಲಿಪ್ಪರೂ ॥ 5 ॥ ಜತೆ ಧ್ರುವ ಮರಿಯದಲೆ ಇದನೆ ಓದಿದವಗೆ ಬಂದ ಭವರೋಗ ಪರಿಹಾರ ವಿಜಯವಿಟ್ಠಲ ವಲಿವಾ ॥ for more suladis click this link : https://raocollectionssongs.blogspot....

Comments