Русские видео

Сейчас в тренде

Иностранные видео


Скачать с ютуб Vishnupaada Suladi|Vijayadasaru|Vyasateerthacharya|ವಿಷ್ಣುಪಾದ ಸುಳಾದಿ|ವಿಜಯದಾಸರು|ಗಾಯನ-ವ್ಯಾಸತೀರ್ಥಾಚಾರ್ಯ в хорошем качестве

Vishnupaada Suladi|Vijayadasaru|Vyasateerthacharya|ವಿಷ್ಣುಪಾದ ಸುಳಾದಿ|ವಿಜಯದಾಸರು|ಗಾಯನ-ವ್ಯಾಸತೀರ್ಥಾಚಾರ್ಯ 2 года назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



Vishnupaada Suladi|Vijayadasaru|Vyasateerthacharya|ವಿಷ್ಣುಪಾದ ಸುಳಾದಿ|ವಿಜಯದಾಸರು|ಗಾಯನ-ವ್ಯಾಸತೀರ್ಥಾಚಾರ್ಯ

ಶ್ರೀಹರಿಯನ್ನು ಸುಲಭವಾಗಿ ಒಳಿಸಿಕೊಳ್ಳುವ ಹಾದಿ- ಸುಳಾದಿಯೆಂದು ಹಿರಿಯರು ಹೇಳುತ್ತಾರೆ. ಒಂದು ಸುಳಾದಿಯನ್ನು ಹಾಡಿದರೆ, ಅನೇಕ ದೇವರನಾಮಗಳನ್ನು ಹಾಡಿದ ಪುಣ್ಯವಿದೆ. ಹರಿದಾಸ ಸಾಹಿತ್ಯದಲ್ಲಿ ಸುಳಾದಿಗಳಿಗೆ ವಿಶಿಷ್ಟ ಸ್ಥಾನವಿದೆ. ಸುಳಾದಿಗಳಲ್ಲಿ ರಾಗ ಒಂದೇ ಇದ್ದು ನುಡಿಗಳು ಬೇರೆ ಬೇರೆ ತಾಳಗಳಲ್ಲಿ ಇರುತ್ತವೆ. ಅಪಾರಪುಣ್ಯಪ್ರದವಾದ ವಿಷ್ಣುಪಾದದ ಮಹಾತ್ಮೆಯನ್ನು ಶ್ರೀ ವಿಜಯದಾಸರು ಈ ಸುಳಾದಿಯಲ್ಲಿ ಸಂಗ್ರಹಿಸಿದ್ದಾರೆ. Elderly scholars say that, the literature form- Suladi is a very easy way to earn Lord Srihari's blessings. It is said that singing one suladi is equivalent to singing numerous devotional songs. Suladis occupy a special place inthe Haridasa Literature. Suladis are composed in one Raga(Melody) and different Talas(Rhythms). Sri Vijayadasaru has collectively described the glory of Vishnupaada in this Suladi. The Omnipotent Lord Vishnu undoubtedly bestows the choicest of his blessings on the seekers who Listen to, Sing, read and understand this Suladi. ವಿಡಿಯೋವನ್ನು like ಮಾಡಿ, share ಮಾಡಿ ಹಾಗೂ ದಯವಿಟ್ಟು ನಮ್ಮYoutube channel ಅನ್ನು subscribe ಮಾಡಿ 🙏🙏🙏🙏 Please like the video, share it with your people and subscribe to our YouTube channel. Support our work 🙏🏾🙏🏾🙏🏾🙏🏾 ಶ್ರೀ ವಿಜಯದಾಸಾರ್ಯಕೃತ ವಿಷ್ಣುಪಾದ ಸುಳಾದಿ ಜಗವೆಲ್ಲ ವ್ಯಾಪಿಸಿದ ಬಲು ಅತೀಂದ್ರಿಯ ಪಾದ ಪಗೆಗಳ ಮಸ್ತಕಾದ್ರಿಗೆ ವಜ್ರ ಪ್ರಹಾರ ಪಾದ ಝಗಝಗಿಸುವ ಪರಮ ಮಂಗಳ ಖಣಿಪಾದ ನಿಗಮಾವಳಿಗೆ ಇದು ನಿಲುಕದ ಪಾದ ಅಗಣಿತ ಗುಣಪೂರ್ಣ ಸೌಮ್ಯ ಪಾದ ತ್ರಿಗುಣಾತೀತವಾದ ಶೃಂಗಾರ ನಿಧಿ ಪಾದ ಗಗನ ನದಿಯ ಹೆತ್ತ ಗಂಭೀರ ಪಾದ ಖಗರಾಜನ ದಿವ್ಯ ಹೆಗಲಲ್ಲಿ ಪೊಳೆವ ಪಾದ ಯುಗಯುಗದಲ್ಲಿ ಇಲ್ಲಿ ಪೂಜೆಗೊಂಬುವ ಪಾದ ಬಗೆ ಬಗೆ ವರಗಳ ಕೊಡುವ ಪಾದ ಮಿಗೆ ಸಾಹಸವುಳ್ಳ ಮಿಸಣಿಯಾಭರಣ ಪಾದ ಅಘ ದೂರವಾದ ಪಾದ ಅತಿಚಿತ್ರಪಾದ ನಗವೈರಿನುತ ನಮ್ಮ ವಿಜಯವಿಠಲ ಪ- ನ್ನಗ ಶಾಯಿಯ ಪಾದ ವಿಷ್ಣು ಪಾದ ಧರ್ಮ ಶಿಲೆಯ ಮೇಲೆ ಮೆರೆವ ಮಣಿಪಾದ ಕರ್ಮಖಂಡನ ಮಾಳ್ಪ ಕಲುಷವಿಗತ ಪಾದ ಕರ್ಮವರ್ಮ ಮರ್ಮ ಕರ್ಮ ಸಂಗದ ಪಾದ ಪೆರ್ಮೆಯಲಿ ಉನ್ನತವಾದ ಪ್ರಮೇಯ ಭರಿತ ಪಾದ ಕೂರ್ಮರೂಪಿ ನಮ್ಮ ವಿಜಯವಿಠಲರೇಯನ ಧರ್ಮಮೂರುತಿ ಪಾದ ಶ್ರೀದ ಪಾದ ದಹರಾಕಾಶದಲಿ ಮಿಂಚುವ ಘನ ಪಾದ ಬಹು ಗಮನವಾಗಿದ್ದ ಭಾಗ್ಯದ ಪಾದ ಅಹೋರಾತ್ರಿಯಲ್ಲಿ ಬಿಡದೆ ಆನಂದದ ಪಾದ ಮಹಾಪುಣ್ಯ ತಂದೀವ ಮಂತ್ರ ಪಾದ ದ್ರೋಹಿ ಮಾನವರಿಗೆ ದೂರವಾದ ಪಾದ ಗಹನವಾದ ಪಾದ ಗುಪ್ತ ಪಾದ ಸ್ನೇಹಭಾವದಿಂದ ಸಾರುವ ನಿಧಿ ಪಾದ ರಹಸ್ಯವಾಗಿ ಸತತ ಜಪಿಸುವ ಪಾದ ತ್ರಾಹಿ ತಾವರೆನಯನ ವಿಜಯವಿಠಲ ಸರಸೀ ರುಹ ಪೋಲುವ ಪಾದ ಅರ್ಚ್ಯ ಪಾದ ಅಸುರ ಗಯನ ಶಿರದಲ್ಲಿ ನಿಂದ ಪಾದ ಎಸೆವ ಹದಿನೆಂಟು ಪಾದದೊಳಿಪ್ಪ ಪಾದ ಶಶಿಮುಖಿ ಗೋಪೇರ ಮನಕ್ಕೆ ಮೋಹಕಪಾದ ವಶವಾಗಿ ಭಕ್ತರ ಬಳಿಯಲಿಪ್ಪ ಪಾದ ವಿಷವರ್ಜಿತವಾದ ವಿಲಕ್ಷಣ ಪಾದ ಬೆಸನೆ ಲಾಲಿಸಿ ಲಾಲನೆ ಮಾಡುವ ಪಾದ ಅಸಮದೇವ ನಮ್ಮ ವಿಜಯವಿಠಲರೇಯನ ಹೆಸರಾದ ಪಾದ ಪರಮ ಸುಖ ರೂಪ ಪಾದ ಎಲ್ಲರಿಂದಲಿ ಪಿಂಡ ಹಾಕಿಸಿಕೊಂಬ ಪಾದ ಮಲ್ಲ ಮೊದಲಾದ ಖಳರ ಜಯಿಸಿದ ಪಾದ ಮೆಲ್ಲಮೆಲ್ಲನೆ ಶುದ್ಧ ಸ್ತೋತ್ರ ಕೈಕೊಂಬ ಪಾದ ಸಲ್ಲಲಿತ ಪಾದ ಸರ್ವ ಸೌಕರ್ಯದಾಯಕ ಪಾದ ಎಲ್ಲೆಲ್ಲಿ ನೋಡಿದರೂ ಅವ್ಯಕ್ತವಾದ ಪಾದ ಬಲ್ಲಿದ ಹರಿ ನಮ್ಮ ವಿಜಯವಿಠಲರೇಯ ವಲ್ಲಭನ ಪಾದ ವಜ್ರ ಅಂಕಿತ ಪಾದ ಫಲ್ಗುಣೀ ತೀರದಲಿ ಮೆರೆವ ಮಹತ್ಪಾದ ಫಲ್ಗುಣ ಸಾರಥಿ ವಿಜಯವಿಠಲನ ಪಾದ Vishnupaada Suladi of Sri Vijayadasaru English lyrics- Jagavella vyaapisida balu atiindriya paada Pagegala mastakaadrige vajraprahaara paada Jhagajhagisuva parama mangala khanipaada Nigamaavalige idu nilukada paada Aganita gunapoorna Soumya paada Trigunaateetavaada shrungaara nidhi paada Gagana nadiya hetta gambheera paada Khagaraajana Divya hegalalli poleva paada Yugayugadalli illi poojegombuva paada Bage bage varagala koduva paada Mige sahasavulla misaniyaabharana paada Aghadooravaada atichitra paada Nagavairinuta Namma vijayavithala pa- Nnagashaayiya paada Vishnu paada Dharmashileya mele mereva manipaada Karmakhandana maalpa kalushavigata paada Karmavarma marma karmasangada paada Permeyali unnatavaada prameyabharita paada Koormaroopi Namma vijayavithalareyana Dharma mooruti paada shreeda paada Daharaakashadali minchuva Ghana paada Bahu gamanavaagidda bhaagyada paaada Ahoraatriyali bidade aanandada paaada Mahaapunya tandeeva mantra paada Drohi maanavarige dooravaada paada Gahanavaada paada Gupta paada Snehabhaavadinda saaruva Nidhi paada Rahasyavaagi satata japisuva paada Traahi taavarenayana Vijaya vithala sarasee Ruha poluva paada archya paada Asura gayana shiradalli ninda paada Eseva hadinentu paadadolippa paada Shashimukhi gopera manakke mohaka paada Vashavaagi bhaktara baliyalippa paada Vishavarjitavaada vilakshana paada Besane laalisi laalane maaduva paada Asamadeva Namma vijayavithalareyana Hesaraada paada parama sukha roopa paada Ellarindali pinda haakisikomba paada Malla modalaada khalara jayisida paada Mellamellane shuddha stotra kaikomba paada Sallalita paada sarva soukarya daayaka paada Ellelli nodidaru avyaktavaada paada Ballida Hari Namma Vijayavithalareya Vallabhana paada vajraankitapaada Phalguni teeradali mereva mahatpaada Phalguna saarathi Vijayavithalana paada #suladi #dasasahitya #gaya #vishnu #vishnupad #satyatmatirtha_swamiji #healingmusic #traditionalsongs #traditional #dasasourabha #jagannathadasaru #vijayadasaru #ಪಿತೃಪಕ್ಷ #ಪಕ್ಷ #ಪಕ್ಷಮಾಸ #pakshamasa #paksha #pinddan #ವಿಷ್ಣುಪಾದಸ್ತುತಿ #vishnupadastuti

Comments