Русские видео

Сейчас в тренде

Иностранные видео


Скачать с ютуб ಮಲ್ಪೆ ವಾಸುದೇವ ಸಾಮಗl ರಂಗಸ್ಥಳದ ಅತಿಥಿlMalpe vasudeva Samaga Interview в хорошем качестве

ಮಲ್ಪೆ ವಾಸುದೇವ ಸಾಮಗl ರಂಗಸ್ಥಳದ ಅತಿಥಿlMalpe vasudeva Samaga Interview 4 года назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



ಮಲ್ಪೆ ವಾಸುದೇವ ಸಾಮಗl ರಂಗಸ್ಥಳದ ಅತಿಥಿlMalpe vasudeva Samaga Interview

ಇಂದಿನ ರಂಗಸ್ಥಳದ ಅತಿಥಿ ಮಲ್ಪೆ ವಾಸುದೇವ ಸಾಮಗ ! ಯಕ್ಷಗಾನದ ಅಪೂರ್ವ ಕಲಾವಿದ ಮಲ್ಪೆ ವಾಸುದೇವ ಸಾಮಗ ಮಲ್ಪೆ ವಾಸುದೇವ ಸಾಮಗರು ಪ್ರತಿಭೆಯಿಂದ ಮಿಂಚಿದ ಯಕ್ಷಗಾನದ ಅಪೂರ್ವ ಕಲಾವಿದ. ವಾಸುದೇವ ಸಾಮಗರಿಗೆ ಯಕ್ಷಗಾನ ಪರಂಪರೆಯ ಬಳುವಳಿ ಇದೆ. ರಂಗಸ್ಥಳದಲ್ಲಿ ವಾಸುದೇವ ಸಾಮಗರು ಎಂಟ್ರಿ ಆಯಿತೆಂದರೆ ಮಾತುಗಾರಿಕೆಯ ಪ್ರಭುದ್ಧತೆ ಎದ್ದುಕಾಣುತ್ತದೆ. ಅರ್ಥಪೂರ್ಣವಾದ ಅರ್ಥಗಾರಿಕೆಯಲ್ಲಿ ಎದುರಾಳಿ ಎಷ್ಟೇ ಪ್ರಬಲವಾಗಿದ್ದರೂ ತನ್ನ ಮಾತಿನ ಮೂಲಕವೇ ಯಕ್ಷಗಾನದ ಆಯಕಟ್ಟನ್ನು ಮೀರದೆ ಆತನನ್ನು ಕಟ್ಟಿಹಾಕುತ್ತಾರೆ.ಇವರ ತಂದೆ ರಾಮದಾಸ ಸಾಮಗರಂತೂ ನಾಮಾಂಕಿತ ಹರಿದಾಸರು, ಆಟ-ಕೂಟಗಳ ಅರ್ಥಧಾರಿಗಳು. ತುಳು- ಕನ್ನಡ ಭಾಷೆಗಳ ಬಳಕೆಯಲ್ಲಿ ಅತ್ಯಂತ ಎಚ್ಚರವುಳ್ಳವರು. ಅವರ ಪದ-ಜೋಡಣೆ ವಾಕ್ಯ ಸರಣಿಯೇ ಆಕರ್ಷಕ. ದೊಡ್ಡ ತಂದೆ ಶಂಕರನಾರಾಯಣ ಸಾಮಗರಂತೂ ಹರಿಕಥೆ, ಯಕ್ಷಗಾನಗಳಲ್ಲಿ ತನ್ನ ಅನನ್ಯ ವಾಗ್ಮಿತೆಯಿಂದ ಬಹುಶ್ರುತರಾದ ಅಗ್ರಮಾನ್ಯರು. ದಂತಕಥೆಯಾಗಿ ಜನಮಾನಸದಲ್ಲಿ ನೆಲೆ ನಿಂತವರು. ‘ಸಾಮಗರೆಂದರೆ ಮಾತುಗಾರಿಕೆಗೆ ಮತ್ತೊಂದು ಹೆಸರು. ವಾಸುದೇವ ಸಾಮಗರು ಹೆಚ್ಚು ಓದಿದವರಲ್ಲ, ಹಾಗೆಂದು ಓದಿದುದನ್ನು ಮರೆತವರೂ ಅಲ್ಲ. ಓದಿಗಿಂತ ಮಿಗಿಲಾದ ಪ್ರತಿಭಾ ಲಹರಿಯಿಂದ ‘ಸೈ’ಯೆನಿಸಿಕೊಂಡವರು. ಅವರ ಪ್ರತಿಭೆಯ ಬೆಂಕಿ ಚಂಡಿನ ಮಾತುಗಾರಿಕೆ ಕೇಳಲು ಅದೆಷ್ಟು ಯಕ್ಷ ಪ್ರೇಕ್ಷಕರು ಹಪಹಪಿಸುತ್ತಾರೆ. ಅನಿರೀಕ್ಷಿತ ಚರ್ಚೆಗಳ ಸಂದರ್ಭ ಸಾಮಗರ ಪ್ರತಿಭೆ ಅನಾವರಣವಾಗುತ್ತಿತ್ತು ಮಾತಿನ ಮಂಟಪ ಕಟ್ಟಲು ನೆರವಾಗುತ್ತಿದ್ದರು. ಸಾಮಗರಿಗೆ ಅತ್ಯಂತ ಕೀರ್ತಿ ತಂದಿತ ಪಾತ್ರ ‘ಯಕ್ಷಲೋಕ ವಿಜಯ’ದ ಪ್ರದೀಪ. ಪ್ರದೀಪನ ಬುದ್ಧಿ - ಭಾವಗಳ ಸಾವಯವ ಶಿಲ್ಪವನ್ನು ಸಚೇತನವಾಗಿ ಕಡೆದಿರಿಸಿದ ಸಾಮಗರ ಕೌಶಲ ಅಪೂರ್ವವಾದುದು, ಅನನ್ಯವಾದುದು. ಈ ಪಾತ್ರವನ್ನು ನೋಡಲೆಂದೇ ಜನ ಬರುತ್ತಿದ್ದರು. ಒಂದು ವದಂತಿಯಿದೆ. ಸಾಮಗರನ್ನು ಅವರ ಮಡದಿ ಮೀರಾ, ವೇಷ ನೋಡಿಯೇ ಮರುಳಾದರೆಂದು. ಆನಂತರ, ಮಗನಿಗೆ ಪ್ರದೀಪನೆಂದು ಹೆಸರಿಟ್ಟರೆಂದು.ಸಾಮಗರಲ್ಲಿ ಮುಚ್ಚು-ಮರೆಯೆಂಬುದೇ ಇಲ್ಲ. ಪಾತ್ರ ನಿರ್ವಹಣೆಯಲ್ಲಿ ಎಂತೋ, ಬದುಕಿನಲ್ಲಿ ಕೂಡ. ಅವರಿಗೆ ಶೀಲ-ಅಶ್ಲೀಲಗಳು ಮಾನವ ಸಹಜ ಸ್ವಭಾವಗಳಷ್ಟೆ. ಹೀಗಾಗಿ, ತೆರೆದು ತೋರುವಲ್ಲಿ ಮುಜುಗರವಿಲ್ಲ. ಅನೇಕ ಮಡಿವಂತರಿಗಿದು ಅಪ್ರಿಯವಾದುದೂ ಇದೆ. ಇಂತಹ ಮೇರು ಕಲಾವಿದನ ಸಂದರ್ಶನ ಡೆಮಾಕ್ರಟಿಕ್ ಟಿವಿಯ ರಂಗಸ್ಥಳ ಕಾರ್ಯಕ್ರಮದಲ್ಲಿ ನೋಡೋಣ ಬನ್ನಿ......

Comments