У нас вы можете посмотреть бесплатно ಜೋಗುಳ ಪದ | ಡೊಂಬೂತಿಯ ಜೋಗುಳ | ತೊಟ್ಟಿಲ ಹಾಡು | Doori Pada | или скачать в максимальном доступном качестве, которое было загружено на ютуб. Для скачивания выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу
страницы.
Спасибо за использование сервиса savevideohd.ru
#ShobhaSagaOfficial #ShobhaSagar ಜೋಗುಳ ಪದ | ಲಾಲಿ ಹಾಡು | ಡೊಂಬೂತಿಯ ಜೋಗುಳ | ದೂರಿ ಪದ | kannada lullabies | janapada songs kannada Original Credits Singer - Shobha Sagar Music Composer - Shobha Sagar lyrics - Janapada ಜೋಗುಳ ಪದ | Laali laali songs | Baby Music | Doori Pada | ತೊಟ್ಟಿಲ ಹಾಡು | Jo Jo Jogula | Indian Kannada Lullaby #Jogulapada #Janapada #Doori #Lalihaadu #Jojolali #uttarakarnataka #Kalikannada #class4 #uttarakarnatakajanapadasong #NannaKanda #babymusic #laalihaadu #kannadaLullaby #babycalmingmusic Lyrics 👇 ಅಡಕಿ ಸಂತ್ಯಾಗ ಅಡ್ಯಾಳ ಡೊಂಬೂತಿ| ನೋಡಿ ಬಂದಣ್ಣ ಉಣವೊಲ್ಲ | ಡೊಂಬೂತಿ| ನಾಳೆ ಬಂದಾಡ ನವಿಲಾಟ || ಕರಿಯಂಗಿ ಕಸೂತಿ ತಲೆತುಂಬ ಜಾವೂಳ | ಅಂಗಳದಾಗ ನವಿಲಾಟ | ಅದಕಿಂತ | ರಂಗಯ್ಯನಾಟ ವಿಪರೀತ || ಅತ್ತಾನ ಕಾಡ್ಯಾನ ಮತ್ತೇನು ಬೇಡ್ಯಾನ | ಮೆತ್ತ ಮೆತ್ತನ ಧಿಮುಕವ | ಕೊಟ್ಟರ | ಗಪ್ಪು ಚಿಪ್ಪಾಗಿ ಮಲಗ್ಯಾನ || ಕಾಡಿಗಚ್ಚಿದ ಕಣ್ಣು ತೀಡಿ ಮಾಡಿದ ಹುಬ್ಬು | ಮಾವೀನ ಹೋಳು ನಿನ ಕಣ್ಣು | ಕಂದಯ್ಯ | ಮಾವ ಬಣ್ಣಿಸಿ ಕರದಾನ || ಕೂಸೊಂದು ಕುಂದಣ ಏನೊಂದು ಜಾವೂಳ | ದೇಶಕ್ಕೆ ಜಾಣ ಅಗಸಾಲಾ | ಮಾಡ್ಯಾನ | ಕೂಸ ಕಂದಯ್ಯನರಳೇಲೆ || ತೊಟ್ಟಿಲದಾಗೊಂದು ತೊಳದ ಮುತ್ತನು ಕಂಡೆ | ಹೊಟ್ಟೆ ಮ್ಯಾಲಾಗಿ ಮಲಗ್ಯಾನ | ಕಂದಯ್ಯ| ಮುತ್ತಿನ ದೃಷ್ಟಿ ತಗೆವೇನ || ಹವ್ವಲ್ಲೆ ಎಂದರ ಹೋಗೋನು ತಿರಿಗ್ಯಾನ | ಎಲ ನಿನ್ನನಾರು ಕರದಾರ | ನಾವ್ ನಮ್ಮ| ಗಿಣಿರಾಮನನ್ನು ಕರೆದೇವ || ಹಾರೈಸಿ ಹಡೆದವ್ವ ಒಳಗೇನು ಮಾಡೂತಿ | ನೋಡು ಬಾ ತಾಯಿ ಮಗನಾಟ | ನನ ಬಾಲ | ಗುಲಗಂಜಿ ಗಿಡಕ ಗುರಿಯಿಟ್ಟಾ || ಬಾರಯ್ಯ ಬಾ ನನ್ನ ಬಾಲ ಚಕ್ರಾವರ್ತಿ | ನಾಲೀಗಿ ಮ್ಯಾಲ ಸರಸೋತಿ | ಇರುವಂಥ | ನನ ಬಾಲ ಹಾಲ ಕುಡಿ ಬಾರೋ || ಅಳದೀರೊ ಕಂದಯ್ಯ ನಿನಗೊಂದು ಹೇಳುವೆನು | ಅಮರವತಿಯೆಂಬ ಎಳದೋಟ| ದೊಳಗಿನ | ಅರಗಿಳಿಯ ತಂದು ಕೊಡುವೇನ || ಕೂಸು ನನ ಕಂದಯ್ಯ ಕೇಸ ಬಿಟ್ಟಾಡಾಗ | ದೇಶದಿಂದೆರಡು ಗಿಣಿ ಬಂದು | ಕೇಳ್ಯಾವ | ಕೂಸ ನೀನ್ಯಾರ ಮಗನೆಂದು || ತೋಳುದ್ದ ತಲೆದಿಂಬು ಮಾರುದ್ಧ ಹಾಸೀಗಿ | ಮಾಣಿಕದಂಥ ಮಗ ಮುಂದ | ಮಲಗಿದರ | ಮಾರಾಯ್ರ ಗೊಡವೆ ನನಗೇನ | ಗಂಡ ಹೆಂಡರ ಜೋಡು ದುಂಡುಮುತ್ತಿನ ಜೋಡು | ಗಂಡೆರಳಿ ಜೋಡು ಅಡವ್ಯಾಗ | ನನ ಬಾಲಾ | ನೀ ಜೋಡೋ ನನಗೆ ಮನಿಯಾಗ || ಬಾಲ ಹನುಮನ ಮುಂದ ಬಾಗಿ ಚಂಡಾಡ್ಯಾನ | ಬಾವೂಲಿಗಿವಿಯ ನನ ಬಾಲ| ಕ೦ಡರ | ಬಾಲ್ಯಾರು ಬಸಿರು ಬಯಸ್ಕಾರ | ಹಿಂಡ ಮಕ್ಕಳೊಳಗ ಪುಂಡ ನನ ಕಂದಯ್ಯ | ದುಂಡುಮಲ್ಲಿಗಿ ಮರನೇರಿ | ಹೂಕೊಯ್ದು| ಗಂಡುಳ್ಳ ಬಾಲ ತುರಬಿಗಿ || ಚಿಕ್ಕ ನನ ಕಂದಯ್ಯ ಚಿಣಿದಾಂಡು ಆಡ್ಯಾನ | ಚಿಕ್ಕ ಹೊಳಿ ದಾಟಿ ತೊರೆಗಲ್ಲ | ಬಾಲ್ಯಾರ | ಚಿತ್ರದ ಕೊಡಕ ಚಿಣಿ ಬಡೆದು|| ಸಕ್ಕರಿ ಸವಿಗಾರಾ ವೀಳ್ಯದ ರುಚಿಗಾರಾ | ವೀರಭದ್ರನ ಅವತಾರಾ | ನನ ಮಗನ | ಹ್ಯಾ೦ಗ ಸಂಬಸಲೆ ಹಡೆದವ್ವ ||