Русские видео

Сейчас в тренде

Иностранные видео


Скачать с ютуб D V Gundappa (DVG) | ಡಿವಿಜಿ в хорошем качестве

D V Gundappa (DVG) | ಡಿವಿಜಿ 3 дня назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



D V Gundappa (DVG) | ಡಿವಿಜಿ

Episode 4 of Noorakke Nooru Karnataka focuses on the revered Kannada writer D V Gundappa (DVG). Bengaluru-based scholar Shashi Kiran B N, a contributing editor of Prekshaa and an award-winning Sanskrit scholar, joins the hosts to discuss DVG’s profound contributions. Born in 1887, DVG was largely self-taught, mastering multiple languages and gaining deep knowledge in Vedic literature and Western philosophy. His celebrated works, particularly Mankuthimmanna Kagga and Marula Muniyana Kagga, distill complex ideas into simple reflections on life. Known for his humility, DVG referred to himself as a publisher rather than the author of these timeless meditations. DVG’s influence remains strong through his writings and ideals, which continue to inspire generations. ಡಿವಿಜಿ - ಕನ್ನಡಿಗರು ಪ್ರೀತಿಸುವ ಕಗ್ಗಗಳ ಹಿಂದಿರುವ ಅಸಾಧಾರಣ ವ್ಯಕ್ತಿ ಸುಧೀಶ್ ವೆಂಕಟೇಶ್ ಅವರೊಂದಿಗೆ ಶ್ರದ್ಧಾ ಜೈನ್ ಪ್ರಸ್ತುತಪಡಿಸಿದಸಂಚಿಕೆ-4 ರ ಈ ವಿಷಯವು ಕನ್ನಡದ ಮೇರು ಸಾಹಿತಿ ಡಿ ವಿಗುಂಡಪ್ಪನವರನ್ನು ಕೇಂದ್ರೀಕರಿಸಿದೆ. ಡಿವಿಜಿ ಎಂದೇಖ್ಯಾತನಾಮರಾಗಿರುವ ಇವರು ಕನ್ನಡ ಸಾಹಿತ್ಯ, ತತ್ವಶಾಸ್ತ್ರ, ಪತ್ರಿಕೋದ್ಯಮ ಮತ್ತು ಸಾರ್ವಜನಿಕ ಸೇವೆ ಕುರಿತು ಪಾರಂಗತ‌ರಾಗಿದ್ದರು.ಕಗ್ಗಗಳ ಮೂಲಕ ಕನ್ನಡ ಕಾವ್ಯಲೋಕವನ್ನು ವಿಶಿಷ್ಟವಾಗಿ ಕಟ್ಟಿಕೊಟ್ಟರು.ಇಂಥ ಮಹಾನುಭಾವರ ಬಗ್ಗೆ ತಮ್ಮ ಒಳನೋಟಗಳನ್ನು ಈ ಸರಣಿಯಲ್ಲಿಹಂಚಿಕೊಂಡಿದ್ದಾರೆ ವೃತ್ತಿಯಲ್ಲಿ ಮೆಕ್ಯಾನಿಕಲ್ ಎಜಿನಿಯರ್‌ ಆಗಿರುವಮತ್ತು ಪ್ರವೃತ್ತಿಯಲ್ಲಿ ಅನುವಾದಕರಾಗಿರುವ ಬೆಂಗಳೂರು ಮೂಲದವಿದ್ವಾಂಸ ಶಶಿ ಕಿರಣ್ ಬಿ. ಎನ್. ಇವರು ಸಂಸ್ಕೃತದಲ್ಲಿಸೌಂದರ್ಯಶಾಸ್ತ್ರದ ಕುರಿತು ಪದವಿ ಪಡೆದ್ದಾರೆ. ಭಾರತೀಯ ಸಂಸ್ಕೃತಿಮತ್ತು ತತ್ವಶಾಸ್ತ್ರಕ್ಕೆ ಸಂಬಂಧಿಸಿದ ಆನ್‌ಲೈನ್ ಜರ್ನಲ್ “ಪ್ರೇಕ್ಷಾ”ದಸಂಪಾದಕರೂ ಆಗಿದ್ದಾರೆ. ಸಂಸ್ಕೃತ ಅನುವಾದಕ್ಕಾಗಿ ಇವರಿಗೆ ಸಾಹಿತ್ಯಅಕಾಡೆಮಿ ಅನುವಾದ ಪ್ರಶಸ್ತಿ (2021) ಮತ್ತು ಬನ್ನಂಜೆಗೋವಿಂದಾಚಾರ್ಯ ಪ್ರಶಸ್ತಿ (2023)ಗಳು ಲಭಿಸಿವೆ. ಅಲ್ಲದೇ, ಡಿವಿಜಿಸಾರ-ಸಂಗ್ರಹ ಮತ್ತು ಡಿ ವಿ ಗುಂಡಪ್ಪ ಅವರ ಆಯ್ದ ಬರಹಗಳುಸೇರಿದಂತೆ ಅವರ ಕೆಲ ಕೃತಿಗಳನ್ನು ಸಂಪಾದಿಸಿದ್ದಾರೆ. 1887ರ ಮಾರ್ಚ್ 17 ರಂದು ಜನಿಸಿದ ಡಿವಿಜಿ ಅವರು ವೈದಿಕ ಸಾಹಿತ್ಯ, ಪಾಶ್ಚಿಮಾತ್ಯ ತತ್ವಶಾಸ್ತ್ರ ಮತ್ತು ರಾಜ್ಯಶಾಸ್ತ್ರದಲ್ಲಿ ಆಳವಾದ ಜ್ಞಾನವನ್ನುಗಳಿಸುತ್ತಲೇ ಕನ್ನಡ, ಸಂಸ್ಕೃತ ಮತ್ತು ಇಂಗ್ಲಿಷ್ ಅನ್ನು ಕರಗತಮಾಡಿಕೊಂಡರು. ಒಟ್ಟು 60 ಪುಸ್ತಕಗಳನ್ನು ರಚಿಸಿದರು. ಉತ್ಕೃಷ್ಟವಿಚಾರಧಾರೆಗಳನ್ನು ಹೊಂದಿರುವ ಸುಮಾರು ೨೦೦ಕ್ಕೂ ಹೆಚ್ಚುಲೇಖನಗಳು ಇಂದಿಗೂಕನ್ನಡ ಸಾಹಿತ್ಯ ಮತ್ತು ಬೌದ್ಧಿಕವಲಯಗಳಲ್ಲಿ ವಿಶೇಷ ಸ್ಥಾನವನ್ನು ಕಾಯ್ದುಕೊಂಡಿವೆ. ಡಿವಿಜಿ ರಚಿಸಿದ ನಾಲ್ಕೇ ನಾಲ್ಕು ಸಾಲಿನ ಕಗ್ಗಗಳು ಇಂದಿನವರೆಗೂಪ್ರಸ್ತುತತೆ ಪಡೆದುಕೊಳ್ಳಲು ಕಾರಣ ಅದರಲ್ಲಿ ಅಡಗಿರುವ ಸಂಕೀರ್ಣತೆ, ತಾತ್ವಿಕತೆ ಮತ್ತು ವೈಚಾರಿಕ ಹೊಳಹು.ಇವೆಲ್ಲವನ್ನು ಮಾರ್ಮಿಕವಾಗಿಕಟ್ಟಿಕೊಟ್ಟ ಬಗೆ ನಿಜಕ್ಕೂ ಗಮನಾರ್ಹ. ಇವರ ಶ್ರೇಷ್ಠ ಕೃತಿ ಮಂಕುತಿಮ್ಮನಕಗ್ಗ900 ಕ್ಕೂ ಹೆಚ್ಚು ಕಗ್ಗಗಳನ್ನು ಒಳಗೊಂಡಿದೆ. ನಿಷ್ಕಪಟ ಮತ್ತು ಸರಳವ್ಯಕ್ತಿತ್ವದ ಡಿವಿಜಿ, “ಮಂಕುತಿಮ್ಮ”ನ ಮೂಲಕ ಪ್ರಕೃತಿ ಮತ್ತು ಬದುಕಿನಒಳಪದರಗಳನ್ನು ಅತ್ಯಂತ ಚುರುಕಾಗಿ, ಸೂಕ್ಷ್ಮವಾಗಿ,ವಿನಯದಿಂದ, ಹಾಸ್ಯದ ಲೇಪದೊಂದಿಗೆ ಕಟ್ಟಿಕೊಟ್ಟಿದ್ದಾರೆ. ಇದೇ ಇವರಬರೆವಣಿಗೆಯ ಶಕ್ತಿ ಮತ್ತು ವೈಶಿಷ್ಟ್ಯ. ಅವರ ಇನ್ನೊಂದು ಮೇರುಕೃತಿ, ಮರುಳ ಮುನಿಯನ ಕಗ್ಗದಲ್ಲಿ ಇವರ ಕಾವ್ಯದ ತೇಜಸ್ಸನ್ನುಆಳನೋಟವನ್ನು ಕಾಣಬಹುದಾಗಿದೆ. ಡಿವಿಜಿ ಪ್ರತೀದಿನನಿದ್ದೆಗೆ ಜಾರುವ ಮೊದಲು ಕಾಗದದ ಚೂರುಗಳ ಮೇಲೆಈ ಕಗ್ಗಗಳನ್ನು ಬರೆಯುತ್ತಿದ್ದರು. ಇವರು ಕವಿ, ಲೇಖಕ, ಅನುವಾದಕ, ವಿದ್ವಾಂಸರಷ್ಟೇ ಅಲ್ಲ ಪ್ರಕಾಶಕರೂ ಆಗಿದ್ದರು. ಸಾಹಿತ್ಯದ ಹೊರತಾಗಿ ಸಮಾಜ ಸುಧಾರಣೆಯ ಪ್ರತಿಪಾದಕರೂಆಗಿದ್ದರು. ನೈತಿಕತೆ ಮತ್ತು ಆಡಳಿತದ ಕುರಿತು ಸಾರ್ವಜನಿಕರಲ್ಲಿ ಅರಿವುಮೂಡಿಸಲು ಗೋಖಲೆ ಇನ್‌ಸ್ಟಿಟ್ಯೂಟ್‌ ಆಫ್‌ ಪಬ್ಲಿಕ್ ಅಫೇರ್ಸ್ ಎಂಬಸಂಸ್ಥೆಯನ್ನು ಸ್ಥಾಪಿಸಿದರು. ಈ ಮೂಲಕ ಸಾಕಷ್ಟು ಕಾರ್ಯಕ್ರಮಗಳನ್ನುಹಮ್ಮಿಕೊಂಡು ಜನರಲ್ಲಿ ಜಾಗೃತಿ ಕೂಡ ಮೂಡಿಸಿದರು. ಈ ಕಾರಣಕ್ಕಾಗಿಮತ್ತು ಅವರ ಸಾಹಿತ್ತ್ಯಿಕ ಕೊಡುಗೆಗಳಿಗಾಗಿ 1974 ರಲ್ಲಿ ಕೇಂದ್ರ ಸರ್ಕಾರಪದ್ಮಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಿತು. ಡಿವಿಜಿ 1975ರ ಅಕ್ಟೋಬರ್ 7 ರಂದು ನಿಧನರಾದರು, ಅವರುಭೌತಿಕವಾಗಿ ಇಲ್ಲವಾದರೂ ಅವರ ಕಗ್ಗಗಳು ಕಾವ್ಯಪ್ರಿಯರ ಮೂಲಕಇಂದಿಗೂ ತಮ್ಮ ಸೌಂದರ್ಯವನ್ನು ಕಾಯ್ದುಕೊಂಡಿವೆ. ಜನಮಾನಸದಮೇಲೆ ಪ್ರಭಾವವನ್ನು ಬೀರುವಲ್ಲಿ ಯಶಸ್ವಿಯಾಗಿವೆ. ಇಂದಿನ ಪೀಳಿಗೆಗೆದಾರಿದೀಪದಂತೆ ಗೋಚರಿಸುತ್ತಿವೆ. Acknowledgements: Kaggas, Kannada translations, and book extracts researched and recited by Shridevi Kalasad. Credits Akshay Ramuhalli, Bijoy Venugopal, Bruce Lee Mani, Narayan Krishnaswamy, Prashant Vasudevan, Sananda Dasgupta, Seema Seth, Shraddha Gautam, Supriya Joshi, and Velu Shankar. ‪@AiyyoShraddha‬ Visit our website for more information: https://bit.ly/DVG100

Comments