Русские видео

Сейчас в тренде

Иностранные видео


Скачать с ютуб ಇದು ಮನುಷ್ಯನನ್ನು ಸದಾ ಆರೋಗ್ಯದಲ್ಲಿಡುವ ಮೂರು ಸೂತ್ರಗಳು! | ಅವಧೂತ ಶ್ರೀ ವಿನಯ್ ಗುರೂಜಿ в хорошем качестве

ಇದು ಮನುಷ್ಯನನ್ನು ಸದಾ ಆರೋಗ್ಯದಲ್ಲಿಡುವ ಮೂರು ಸೂತ್ರಗಳು! | ಅವಧೂತ ಶ್ರೀ ವಿನಯ್ ಗುರೂಜಿ 1 год назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



ಇದು ಮನುಷ್ಯನನ್ನು ಸದಾ ಆರೋಗ್ಯದಲ್ಲಿಡುವ ಮೂರು ಸೂತ್ರಗಳು! | ಅವಧೂತ ಶ್ರೀ ವಿನಯ್ ಗುರೂಜಿ

ಇದು ಮನುಷ್ಯನನ್ನು ಸದಾ ಆರೋಗ್ಯದಲ್ಲಿಡುವ ಮೂರು ಸೂತ್ರಗಳು! | ಅವಧೂತ ಶ್ರೀ ವಿನಯ್ ಗುರೂಜಿ ಆರೋಗ್ಯದ ತರ್ಕಕ್ಕೆ ಉತ್ತರ ಮನುಷ್ಯನ ದಿನಚರಿಯಲ್ಲೇ ಇದೆ. ಭಗವದ್ಗೀತೆಯಲ್ಲಿ ಯುಕ್ತಾಹಾರ ವಿಹಾರಸ್ಯ ಯುಕ್ತಚೇಷ್ಟಾಯ ಎನ್ನುವ ಶ್ಲೋಕವೊಂದಿದೆ ಅದರ ಪ್ರಕಾರ ಯುಕ್ತ ನಡವಳಿಕೆ, ಯುಕ್ತ ಆಹಾರ, ಯುಕ್ತ ತಿರುಗಾಟ ಇದು ಮನುಷ್ಯನನ್ನು ಸದಾ ಆರೋಗ್ಯದಲ್ಲಿರಿಸುತ್ತದೆ. ಒಳ್ಳೆಯ ತಿರುಗಾಟವು ಮನುಷ್ಯನ ಮನಸ್ಸಿಗೆ ನೆಮ್ಮದಿ ಒದಗಿಸುತ್ತದೆ. ಒಳ್ಳೆಯ ಆಹಾರವೆಂದರೆ ಸಹಜವಾದ, ಪ್ರಕೃತಿಯಲ್ಲಿ ಪಕ್ವವಾದ, ಯಾವುದೇ ಮಸಾಲೆ ಪದಾರ್ಥಗಳನ್ನು ಬಳಸದ ಆಹಾರವಾಗಿದೆ. ಈ ಮೂರೂ ಇದ್ದಾಗ ಒಬ್ಬ ವ್ಯಕ್ತಿಯ ಆಹಾರ, ಅಂತಸ್ತು ಮತ್ತು ನಿದ್ದೆ ಸ್ಥಿರವಾಗಿರುತ್ತದೆ. ಮೆದುಳಿನ ಮೇಲೆ ಅತಿಯಾದ ಒತ್ತಡ ಬೀಳುವುದರಿಂದ ನಿದ್ದೆ ಹಾಳಾಗುತ್ತದೆ. ಒಂದು ಮಗು ಹುಟ್ಟಿದ ನಂತರ ಅದರ ಭವಿಷ್ಯದ ಬಗ್ಗೆ ಚಿಂತಿಸುವುದಕ್ಕಿಂತ ಆ ಮಗುವಿನ ಭವಿಷ್ಯಕ್ಕೆ ಈಗಿಂದಲೇ ಹಣ ಕೂಡಿಟ್ಟರೆ ಒಬ್ಬ ತಂದೆಗೆ ಚಿಂತೆಯೇ ಇರುವುದಿಲ್ಲ ಇದನ್ನು ಗಾಂಧೀ ತತ್ವ ಹೇಳಿಕೊಡುತ್ತದೆ. ಸರಿಯಾದ ಯೋಜನೆಗಳನ್ನು ಹಾಕಿಕೊಳ್ಳದೆ ಜೀವನ ನಿರ್ವಹಿಸುವುದರಿಂದ ಅದು ಅತಿಯಾದ ಒತ್ತಡಕ್ಕೆ ದಾರಿಯಾಗುತ್ತದೆ. ಮನುಷ್ಯ ಹುಟ್ಟಿದ ನಂತರ ಜರಾ, ಮುಪ್ಪು ಮತ್ತು ಮೃತ್ಯುವನ್ನು ನೋಡಲೇಬೇಕು. ವ್ಯವಸ್ಥಿತ ದೃಷ್ಟಿಯಿಂದ ಜೀವನ ಮಾಡದೇ ಇದ್ದಾಗ ಇಂತಹಾ ಸಮಸ್ಯೆಗಳು ಉದ್ಭವಿಸುತ್ತದೆ. ಜಪಾನ್ ದೇಶ ಬೆಳವಣಿಗೆ ಹೊಂದಲು ಅವರ ವೃತ್ತಿಪ್ರೇಮ ಮತ್ತು ದೇಶಪ್ರೇಮ ಕಾರಣ. ಭಾರತದಲ್ಲಿ ಇತರರ ಕಾಲೆಳೆಯುವ ಆಲೋಚನೆಯೇ ತುಂಬಿರುವುದರಿಂದ ಬೆಳವಣಿಗೆಯ ತೂಕ ಕಡಮೆಯೇ ಆಗಿರುತ್ತದೆ. ಒಬ್ಬ ವ್ಯಕ್ತಿ ಸಾಧನೆ ಮಾಡಲು ಹೊರಟಾಗ ಕೊಂಕು ನುಡಿದು ಕಾಲೆಳೆಯುವ ಜನರ ಸಂಖ್ಯೆ ಹೆಚ್ಚಾಗೇ ಇದೆ. ಮನುಷ್ಯನಲ್ಲಿ ಪ್ರತಿಭೆಯನ್ನು ಕಂಡರೆ ಆ ಪ್ರತಿಭೆಯನ್ನು ಬೆಳೆಯಲು ಬಿಡಬೇಕು. ತನ್ನ ಮಕ್ಕಳು ಏನು ಎನ್ನುವುದನ್ನು ಇತರರ ಅಭಿಪ್ರಾಯ ಕೇಳಿ ತಿಳಿದುಕೊಳ್ಳುವುದು ಸಖ್ಯವಲ್ಲ. ನಾವು ಇತರರ ಪ್ರಶ್ನೆಗಳಿಗೆ ಉತ್ತರಿಸುವ ಗೋಜಿನಲ್ಲಿ ನಮ್ಮ ಜೀವನದ ಅಸ್ತಿತ್ವದ ಪ್ರಶ್ನೆಯನ್ನೇ ಮರೆಯುತ್ತೇವೆ. ಇಂತಹಾ ಚಿಂತನಾ ಪ್ರಕ್ರಿಯೆಯಲ್ಲಿ ಮನುಷ್ಯನಿಗೆ ಖಾಯಿಲೆಗಳು ಬರುತ್ತದೆ. ಸಮಯದ ಅಭಾವವೂ ಮನುಷ್ಯನ ಜೀವನವನ್ನು ಪ್ರಭಾವಿಸುತ್ತಿದೆ. ಸ್ವಂತ ಆಲೋಚನೆಯಿಂದ ತನ್ನ ಬದುಕನ್ನು ರೂಪಿಸಿಕೊಳ್ಳುವ ಆಧ್ಯಯನ ಮಾಡುವುದರಿಂದ ಮನುಷ್ಯನು ಸದಾ ಆರೋಗ್ಯವಂತನಾಗಿರುತ್ತಾನೆ. ಪ್ರಕೃತಿಯಲ್ಲಿರುವ ಪ್ರಾಣಿ ಪಕ್ಷಿ, ಗಿಡ ಮರಗಳೇ ನಮಗಿಂತ ಚೆನ್ನಾಗಿ ಬದುಕನ್ನು ಬದುಕುತ್ತದೆ. ಪ್ರಾಯೋಗಿಕವಾಗಿ ಬದುಕನ್ನು ಬದುಕಲು ಸ್ವ ಅಧ್ಯಯನ ಅತೀ ಅಗತ್ಯ. ಆಧ್ಯಾತ್ಮ ಎಂದರೆ ಧ್ಯಾನದ ಒಂದು ಸ್ಥಿತಿ. ಆ ಸ್ಥಿತಿಯಲ್ಲಿ ಯಾವ ಆಹಾರ ನಿಬಂಧನೆಗಳು ಅಡ್ಡಿಯಾಗುವುದಿಲ್ಲ. ಆದ್ದರಿಂದ ಅರಿವೇ ಗುರು ಎನ್ನುವುದು ಸ್ಪಷ್ಟವಾಗುತ್ತದೆ. For More Videos: ತಿರುಪತಿಯಲ್ಲಿ ಜೀವಂತವಾಗಿರುವ ಶ್ರೀನಿವಾಸನ ಮಹಾರಹಸ್ಯ! | ಅವಧೂತ ಶ್ರೀ ವಿನಯ್ ಗುರೂಜಿ    • ತಿರುಪತಿಯಲ್ಲಿ ಜೀವಂತವಾಗಿರುವ ಶ್ರೀನಿವಾಸನ ...   ಈ ವಿಧಾನದಿಂದ 99 ಶೇಕಡಾ ಖಾಯಿಲೆಗಳು ಕೊನೆಯಾಗುತ್ತವೆ! | ಅವಧೂತ ಶ್ರೀ ವಿನಯ್ ಗುರೂಜಿ    • ಈ ವಿಧಾನದಿಂದ 99 ಶೇಕಡಾ ಖಾಯಿಲೆಗಳು ಕೊನೆಯಾ...   ಆತ್ಮಹತ್ಯೆಯ ಚಿಂತನೆ ಬಲವಾಗಿ ಕಾಡಲು ಈ ಮೂರು ವಿಷಯಗಳೇ ಕಾರಣ! | ಅವಧೂತ ಶ್ರೀ ವಿನಯ್ ಗುರೂಜಿ    • ಆತ್ಮಹತ್ಯೆಯ ಚಿಂತನೆ ಬಲವಾಗಿ ಕಾಡಲು ಈ ಮೂರು...   ಮನಸ್ಸಿನ ಭಯವನ್ನು ಓಡಿಸಲು ಈ ಒಂದು ಅಭ್ಯಾಸವನ್ನು ಬಿಟ್ಟುಬಿಡಿ | ಅವಧೂತ ಶ್ರೀ ವಿನಯ್ ಗುರೂಜಿ    • ಮನಸ್ಸಿನ ಭಯವನ್ನು ಓಡಿಸಲು ಈ ಒಂದು ಅಭ್ಯಾಸವ...   ಹೀಗೆ ಮಾಡಿದರೆ ಆಯಸ್ಸು ಹೆಚ್ಚುವುದು ನಿಶ್ಚಿತ! | ಅವಧೂತ ಶ್ರೀ ವಿನಯ್ ಗುರೂಜಿ    • ಹೀಗೆ ಮಾಡಿದರೆ ಆಯಸ್ಸು ಹೆಚ್ಚುವುದು ನಿಶ್ಚಿ...   #AvadhoothaSriVinayGuruji #trending #blessings #srivinayguruji #vinayguruji #guruji #youtube #youtubeislife #youtubeguru #youtubecontent #newvideo #subscribers #youtubevideo #youtuber #youtubevideos #india #gurujispeech #shivaspeech #shivaratri #shivaratripuja #aradhana #lordshiva #Nonvegetarianism #idolatry #eating #idolsofgods #Buddha #BhagavadGita #itjobs #informationtechnology #Jobs #social #networking #society #Deadly #social #socialmedia #success #life #healthyfood #Health #healthtips

Comments