Русские видео

Сейчас в тренде

Иностранные видео


Скачать с ютуб ಶ್ರೀ ಧನ್ವನಂತರಿ ಸಹಸ್ರನಾಮ в хорошем качестве

ಶ್ರೀ ಧನ್ವನಂತರಿ ಸಹಸ್ರನಾಮ 4 года назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



ಶ್ರೀ ಧನ್ವನಂತರಿ ಸಹಸ್ರನಾಮ

ಶ್ರೀ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ ಉತ್ತರ ಕನ್ನಡ ಜಿಲ್ಲೆಯ ಸಿರಸಿ ತಾಲೂಕಿನ ಶಾಲ್ಮಲಾ ನದಿಯ ತೀರದಲ್ಲಿ, ನಿಸರ್ಗ ಸ್ವರ್ಗದ ಮಡಿಲಲ್ಲಿ ನೆಲೆಗೊಂಡಿರುವ ಶ್ರೀ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನವು ಭಕ್ತಜನರ ಶ್ರದ್ಧಾ ಕೇಂದ್ರವಾಗಿ ಶೋಭಿಸುತ್ತಿದೆ. ಇಲ್ಲಿನ ಪೀಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ಮಹಾತಪಸ್ವಿಗಳಾಗಿದ್ದು, ಆಧ್ಯಾತ್ಮಸಾಧನೆಯ ಜೊತೆಯಲ್ಲಿ ಸಮಾಜದ ಕ್ಷೇಮಕ್ಕಾಗಿ ಅವಿಶ್ರಾಂತ ಪರಿಶ್ರಮಗೈಯ್ಯುತ್ತಿದ್ದಾರೆ. ಪ್ರಸ್ತುತ ಸಮಗ್ರ ವಿಶ್ವವನ್ನೇ ವಿಭ್ರಮಗೊಳಿಸಿ, ಮರಣ ಮೃದಂಗವನ್ನು ಬಾರಿಸುತ್ತಿರುವ ಕರೋನಾ ವೈರಸ್ ಸೇರಿದಂತೆ ಅನೇಕ ರೋಗಗಳು ಹಾಗೂ ಮಲೆನಾಡುಪ್ರದೇಶದಲ್ಲಿನ ಮಂಗನಕಾಯಿಲೆಯಂಥಹ ರೋಗಗಳ ಕಬಂಧಬಾಹುಗಳನ್ನು ಕತ್ತರಿಸುವುದಕ್ಕಾಗಿ ಪರಮಪೂಜ್ಯ ಶ್ರೀ ಶ್ರೀಗಳವರ ಮಾರ್ಗದರ್ಶನದಲ್ಲಿ ಶ್ರೀಮಠದಲ್ಲಿ ಅನೇಕ ಧಾರ್ಮಿಕ ಕಾರ್ಯಕ್ರಮಗಳು ಯಶಸ್ವಿಯಾಗಿ ನೆರವೇರಿದೆ. ಅದರಿಂದ ಉತ್ತಮ ಪರಿಣಾಮವೂ ಕಂಡುಬಂದಿದೆ. ಇದೀಗ ಮನೆ-ಮನೆಯಲ್ಲೂ ಧಾರ್ಮಿಕ ಶಕ್ತಿ ಹೊರಹೊಮ್ಮಬೇಕಾಗಿದೆ. ಅದಕ್ಕಾಗಿ ಹಿಂದೆ ಹೇಳಿದಂತೆ ಹಲವು ಸ್ತೋತ್ರಗಳ(ಮಹಾಮೃತ್ಯುಂಜಯ ಸ್ತೋತ್ರ, ಶೀತಲಾಷ್ಟಕ, ನೃಸಿಂಹ ಅಷ್ಟಕ) ಜೊತೆಜೊತೆಗೆ ಸಕಲವಿಧವಾದ ರೋಗ ನಿವಾರಣೆಗೆ ರಾಮಬಾಣವೆನಿಸಿದ ಶ್ರೀ ಧನ್ವಂತರಿ ವಿಷ್ಣುಸಹಸ್ರನಾಮದ ಸ್ತೋತ್ರ ಪಾರಾಯಣವನ್ನು ಮಾಡಬೇಕು ಎಂಬುದು ಪ.ಪೂ ಶ್ರೀಗಳವರ ಆಶಯವಾಗಿದೆ. "ಅನ್ಯಥಾ ಶರಣಂ ನಾಸ್ತಿ ತ್ವಮೇವ ಶರಣಂ ಮಮ" ಎಂಬ ಭಾವನೆಯಿಂದ ಭಕ್ತಿ ಪುರಸ್ಸರವಾಗಿ ಎಲ್ಲ ಭಕ್ತ ಜನರೂ ಒಂದು ತಿಂಗಳ ಕಾಲ(ಜೂನ್ ೩೦ ರವರೆಗೆ) ಧನ್ವಂತರೀ ಸಹಸ್ರನಾಮವನ್ನು ಪಠಿಸುವಂತಾಗಬೇಕು. ಪ್ರತಿಯೊಬ್ಬರು ಕನಿಷ್ಠ ೧ ನೂರು ಸಲವಾದರೂ ಇದನ್ನು ಪಠಿಸುವಂತಾಗಬೇಕು. ಪ್ರತಿಯೋರ್ವ ವ್ಯಕ್ತಿ ಒಂದು ದಿನಕ್ಕೆ ಕನಿಷ್ಠ ಎರಡು ಅಥವಾ ಮೂರುಸಲ ಪಾರಾಯಣ ಮಾಡಿದರೆ ಉತ್ತಮ. ಸಾಧ್ಯವಿರುವವರು ಅದಕ್ಕಿಂತಲೂ ಹೆಚ್ಚು ಮಾಡಬಹುದು ಎಂಬುದಾಗಿ ಶ್ರೀ ಗುರುಗಳು ಆದೇಶಿಸಿದ್ದಾರೆ. ಅದಕ್ಕೆ ಅನುಕೂಲವಾಗುವಂತೆ ಸಹಸ್ರನಾಮಸ್ತೋತ್ರದ ಧ್ವನಿಮುದ್ರಣ ಮತ್ತು ಪಠ್ಯವನ್ನು ಒದಗಿಸಲಾಗದೆ. ಎಲ್ಲ ಭಕ್ತರೂ ಈ ಮಹತ್ಕಾರ್ಯವನ್ನು ಭಕ್ತಿಯಿಂದ ಪೂರೈಸಿ ಶ್ರೀದೇವರ ಹಾಗೂ ಶ್ರೀಗುರುಗಳ ಅನುಗ್ರಹಕ್ಕೆ ಪಾತ್ರರಾಗಿ ಆರೋಗ್ಯ ಭಾಗ್ಯವನ್ನು ಪಡೆಯಿರಿ. ಸೂಚನೆ: ೧] ಯಾರುಬೇಕಾದರೂ ಮಾಡಬಹುದಾದ ಈ ಸ್ತೋತ್ರ ಪಠಣವನ್ನು ಶುಚಿಯಾಗಿ ಒಂದೇ ಸ್ಥಳದಲ್ಲಿ ಕುಳಿತು ಮಾಡಬೇಕು. ೨] ಸ್ತೋತ್ರವನ್ನು ಮೊಬೈಲ್‌ನಲ್ಲಿ ಪಡೆಯಲು 8105733655 ಅಥವಾ 9483998443 ವಾಟ್ಸಪ್ ಸಂಖ್ಯೆಯನ್ನು ಸಂಪರ್ಕಿಸಿ. ೩] ನೀವು ಮಾಡಿದ ಸಹಸ್ರನಾಮದ ಪಾರಾಯಣ ಸಂಖ್ಯೆಯನ್ನು ಪ್ರತಿನಿತ್ಯ 8105733655 ಈ ನಂಬರ್‌ಗೆ ವಾಟ್ಸಪ್ ಮೂಲಕ ತಿಳಿಸಿರಿ. (ಧನ್ವಂತರೀ ಸಹಸ್ರನಾಮದ ಆಡಿಯೋ/pdf ಈ ಕೆಳಗಿನ ಗೂಗಲ್ ಲಿಂಕ್ ನಿಂದ ಪಡೆಯಬಹುದು) PDF format https://drive.google.com/file/d/1ZiI1... Audio format https://drive.google.com/file/d/1Z6AK...

Comments