У нас вы можете посмотреть бесплатно 02 ಸಿದ್ಧಾರೂಢನ ಚರಿತ್ರೆ ಹೇಳುವೆ ಭಕ್ತಿಯಿಂದ ಕೇಳಿ- ಭಕ್ತಿ ಗೀತೆ- SIDDHARUDHANA CHARITRE HELUVE BHAKTINDAKELI или скачать в максимальном доступном качестве, которое было загружено на ютуб. Для скачивания выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу
страницы.
Спасибо за использование сервиса savevideohd.ru
VCS - PA 6180 - VACD 1008 YTV-109 #song #lyrics ಸಿದ್ಧಾರೂಢರ ಚರಿತೆ ಹೇಳುವೆ ಭಕ್ತಿಯಿಂದ ಕೇಳಿ || ಎದ್ದು ಕೂಡಲೇ ನಿತ್ಯ ನೆನೆದರೆ ದು:ಖವಿಲ್ಲ ನೋಡಿ || ಸಿದ್ಧಾರೂಢರ ಚರಿತೆ ಹೇಳುವೆ ಭಕ್ತಿಯಿಂದ ಕೇಳಿ | ಎದ್ದು ಕೂಡಲೇ ನಿತ್ಯ ನೆನೆದರೆ ದು:ಖವಿಲ್ಲ ನೋಡಿ || ಬಿದರ ಕೋಟಿ ಜಿಲ್ಲೆ, ವಂಶದುರ್ಗವೆಂಬ ಹಳ್ಳಿ ಐತಿ ಒಂದ|| ಚದುರೆ ಮಲ್ಲಮ್ಮ, ಗುರುಶಾಂತರೆಂಬ ಸತಿಯು-ಪತಿಯು ಚಂದ|| ಸದಾ ಹ್ರದಯದಲಿ ಶಿವನ ನೆನೆಯುತ್ತ ಇದ್ದರು ಆನಂದ || ಸದಮಲಾತ್ಮ ಶಿವ ಜನಿಸಿ ಬಂದನು ಪುಣ್ಯ ಗರ್ಭದಿಂದ ಇವರ ಪುಣ್ಯ ಗರ್ಭದಿಂದ|| ಸಿದ್ಧಾರೂಢರ ಚರಿತೆ ಹೇಳುವೆ ಭಕ್ತಿಯಿಂದ ಕೇಳಿ | ಎದ್ದು ಕೂಡಲೇ ನಿತ್ಯ ನೆನೆದರೆ ದು:ಖವಿಲ್ಲ ನೋಡಿ || ಚಿಕ್ಕವಯಸಿನಲಿ ಘಣಮಹಿಮೆಯನು ತೋರುತ್ತಲಿ ಬೆಳೆದ|| ಚಿಕ್ಕ ಪಾತ್ರೆಯ ಒಡೆದು ಎಳ್ಳಿನ ರಾಶಿ ತೋರಿಸಿದ || ಅಕ್ಕರೆ ಆಟಕ್ಕೆ ಎಮ್ಮೆ ಅಡ್ಡ ಬರೆ ಸತ್ತು ಹೋಗಲೆಂದ|| ಬಿಕ್ಕಿ ಬಿಕ್ಕಿ ದು:ಖಿಸವ ತಾಯಿಗಾಗಿ ಮತ್ತೆ ಜೀವ ನೀಡಿದ ಸತ್ತ ಎಮ್ಮೆ ಬದುಕಿಸಿದ || ಸಿದ್ಧಾರೂಢರ ಚರಿತೆ ಹೇಳುವೆ ಭಕ್ತಿಯಿಂದ ಕೇಳಿ | ಎದ್ದು ಕೂಡಲೇ ನಿತ್ಯ ನೆನೆದರೆ ದು:ಖವಿಲ್ಲ ನೋಡಿ || ವರ ಗುರುವಿನ ಶೋಧಮಾಡಲು ಹಿಡಿದು ಹೊರಟ ದಾರಿ || ಹಿರಿಯರೆನಿಸಿದ ಸೋಮ-ಭೀಮರು ತಿರುಗಿದರ್ ಹೌಹಾರಿ|| ಶರಿರಕೆ ಎಷ್ಟೇ ಕಷ್ಟ ಬಂದರೂ ಬಿಡಲಿಲ್ಲ ತನ್ನ ಗುರಿ || ಪರಮ ಸದ್ಗುರು ಗಜದಂಡಯೋಗಿಯ ಕಂಡನಾತ ಹೋಗಿ ಅಲ್ಲಿ ವಿನಯದಿಂದ ಬಾಗಿ|| ಸಿದ್ಧಾರೂಢರ ಚರಿತೆ ಹೇಳುವೆ ಭಕ್ತಿಯಿಂದ ಕೇಳಿ | ಎದ್ದು ಕೂಡಲೇ ನಿತ್ಯ ನೆನೆದರೆ ದು:ಖವಿಲ್ಲ ನೋಡಿ || ಮೇಲು ಕೀಳೆಂಬ ಭೇದವಿಲ್ಲದೆ ಎಲ್ಲ ಸೇವೆಗೈದ|| ಶಾಲೆ ಕಲಿಯದೆ ವೇದ ಶಾಸ್ತ್ರವ ಕೇಳಿ ನಿಪುಣನಾದ || ಮೇಲಾಗಿ ಸುಬ್ಬಯ್ಯ ಶಾಸ್ತ್ರಿಗಳಿಗೆ ಸರಿಯಾಗಿ ಉತ್ತರ ನೀಡಿದ || ಕಾಲಕಳೆಯದೆ ಗುರುವಿನಾಙ್ನೆಯಂತೆ ದೇಶ ಸಂಚಾರಿಯಾದ ಜಗದ ಉದ್ದಾರಕೆ ನಡೆದ || ಸಿದ್ಧಾರೂಢರ ಚರಿತೆ ಹೇಳುವೆ ಭಕ್ತಿಯಿಂದ ಕೇಳಿ | ಎದ್ದು ಕೂಡಲೇ ನಿತ್ಯ ನೆನೆದರೆ ದು:ಖವಿಲ್ಲ ನೋಡಿ || ಒಳ್ಳೆ ಒಳ್ಳೆಯ ತೀರ್ಥಕ್ಷೇತ್ರಗಳ ದರ್ಶನಗೈಯುತ್ತಾ || ಕಲ್ಲು ಮನಸಿನ ಕೆಟ್ಟ ಜನರಿಗೆ ಸನ್ಮಾರ್ಗ ತೋರುತ್ತಾ || ಎಲ್ಲಿ ನೋಡಲು ನಮಃ: ಶಿವಾಯ ಎಂಬ ಮಂತ್ರವ ಬೀರುತ್ತಾ|| ಬಲ್ಲ ಮಹಾತ್ಮರ ಬಳಗದೊಂದಿಗೆ ನಿರುತದಲ್ಲಿ ಇರುತಾ || ಸತ್ಯ ಶಾಸ್ತ್ರವ ಹೇಳುತ್ತಾ|| ಸಿದ್ಧಾರೂಢರ ಚರಿತೆ ಹೇಳುವೆ ಭಕ್ತಿಯಿಂದ ಕೇಳಿ | ಎದ್ದು ಕೂಡಲೇ ನಿತ್ಯ ನೆನೆದರೆ ದು:ಖವಿಲ್ಲ ನೋಡಿ || ಸಂಚಾರ ಮಾಡುತ್ತಾ, ಗರಗದ ಶ್ರೀ ಮಡಿವಾಳ ಯೋಗಿಯ ಕಂಡ || ಹಂಚಿಕೆಯಿಂದಲಿ ಅವರ ಹತ್ತಿರನುಭವದ ಊಟ ಉಂಡ|| ಮುಂದೆ ಹುಬ್ಬಳ್ಳಿ ಪಟ್ಟಣಕೋಗಲು ಅಪ್ಪಣೆ ಪಡಕೊಂಡ|| ಕೊಂಚ ಸಂಶಯವಿಲ್ಲದೆ ಅಲ್ಲಿ ಸ್ಥಾನ ನೋಡಿಕೊಂಡ || ದಿವ್ಯ ಕ್ಷೇತ್ರ ಮಾಡಿಕೊಂಡ || ಸಿದ್ಧಾರೂಢರ ಚರಿತೆ ಹೇಳುವೆ ಭಕ್ತಿಯಿಂದ ಕೇಳಿ | ಎದ್ದು ಕೂಡಲೇ ನಿತ್ಯ ನೆನೆದರೆ ದು:ಖವಿಲ್ಲ ನೋಡಿ || ಪಾಪಿಯೊಬ್ಬನು ಬೆಂಕಿ ತಲೆಯ ಮೇಲೆ ಇಟ್ಪರು ಸುಮ್ಮನಾದ || ಕೋಪವಿಲ್ಲದೆ ಶರಿರ ಕರ್ಮವಿದು ಎಂದು ವರವ ನೀಡಿದ || ಆಪತ್ತು ಕಳೆದು ನಿನ್ನ ಮನೆಯಲ್ಲಿ ಸಿರಿಯು ಹೆಚ್ಚಲೆಂದ || ದೀಪದಂತೆ ಮೈ ಸುಟ್ಟುಕೊಂಡು ಜಗವೆಲ್ಲ ತಾ ಬೆಳಗಿದ || ಜಗದ ದಿವ್ಯ ಜ್ಯೋತಿಯಾದ || ಸಿದ್ಧಾರೂಢರ ಚರಿತೆ ಹೇಳುವೆ ಭಕ್ತಿಯಿಂದ ಕೇಳಿ | ಎದ್ದು ಕೂಡಲೇ ನಿತ್ಯ ನೆನೆದರೆ ದು:ಖವಿಲ್ಲ ನೋಡಿ || ಶರಣನಾದ ತುಕ್ಕಪ್ಪನ ಮಗನ ರೋಗ ಕಳೆದು ಬಿಟ್ಟ|| ಹೀರು ಬಾಯಿಗೆ ಬಂದ ಯಮನ ಪಾಶ ಹರಿದು ಬಿಟ್ಟ || ಮುರಕಿಭಾವಿಯೆಂಬ ಗ್ರಾಮದಲ್ಲಿ ಪ್ರತ್ಯಕ್ಷ ಭೆಟ್ಟಿ ಕೊಟ್ಟ|| ಕರುಣಾಮುರ್ತಿ ಭಕ್ತರಿಗಾಗಿ ಹಲವು ರೂಪ ತೊಟ್ಟ|| ತಾನೇ ಹಲವು ರೂಪ ತೊಟ್ಟ|| ಸಿದ್ಧಾರೂಢರ ಚರಿತೆ ಹೇಳುವೆ ಭಕ್ತಿಯಿಂದ ಕೇಳಿ | ಎದ್ದು ಕೂಡಲೇ ನಿತ್ಯ ನೆನೆದರೆ ದು:ಖವಿಲ್ಲ ನೋಡಿ || ಮೌನಯೋಗಿ ಗುರುನಾಥಾರೂಢರ ಸ್ಥಿತಿಗೆ ಕಾರಣಾದ|| ಜ್ಞಾನವ ನೀಡಿ ಕಬೀರದಾಸರ ಜೀವ ಭಾವನಳಿದ || ಆನಂದದಿಂದ ಅಕ್ಕಲಕೋಟೆಯ ಶರಣರಿಗೆ ಒಲಿದ || ಮಾನನಿಧಿ ಶಿವಪುತ್ರ ಸ್ವಾಮಿಗೆ ವಿದ್ಯೆಯ ಕರುಣಿಸಿದ || ಬ್ರಹ್ಮ ವಿದ್ಯೆಯ ಕರುಣಿಸಿದ|| ಸಿದ್ಧಾರೂಢರ ಚರಿತೆ ಹೇಳುವೆ ಭಕ್ತಿಯಿಂದ ಕೇಳಿ | ಎದ್ದು ಕೂಡಲೇ ನಿತ್ಯ ನೆನೆದರೆ ದು:ಖವಿಲ್ಲ ನೋಡಿ || ತಿರುಕನಂತೆ ಕಂಡರೂ ಆತ ಮಹಾರಾಜ ಯೋಗಿ ಇದ್ದ || ಹರುಷದಿಂದಲಿ ಸರ್ವರನ್ನು ಸಮ ದ್ರಷ್ಟಿಲಿ ನೋಡಿದ್ದ || ಶರಣೆಂದು ಶಿಷ್ಯರು ಬಂದರೆ ಬೇಡಿದ್ದು ಕೊಡುತ್ತಿದ್ದ|| ನಿರುತ ನಿಜಗುಣ ದೇವರಿಗೆ ತಾ ಕರುಣೆ ತೋರಿದ್ದ|| ಕೈಯಲಿ ಲೇಖನಿ ಹಿಡಿಸಿದ್ದ|| ಸಿದ್ಧಾರೂಢರ ಚರಿತೆ ಹೇಳುವೆ ಭಕ್ತಿಯಿಂದ ಕೇಳಿ || ಎದ್ದು ಕೂಡಲೇ ನಿತ್ಯ ನೆನೆದರೆ ದು:ಖವಿಲ್ಲ ನೋಡಿ ||| ☆ ಆರೂಢ ಕೈಲಾಸ - ಭಕ್ತಿ ಗೀತೆಗಳು ☆ #ಶ್ರೀಸಿದ್ಧಾರೂಢ ಸ್ವಾಮಿಜಿಗಳ ಬಗ್ಗೆ ಧ್ವನಿಮುದ್ರಣಗೊಂಡು ಬಿಡುಗಡೆಯಾದ ಪ್ರಪ್ರಥಮ ಕ್ಯಾಸೆಟ್ ☆ ಗಾಯಕರು :ಮಂಜುಳಾ ಗುರುರಾಜ , ಬಿ.ಆರ್.ಛಾಯಾ , ಶಂಕರ ಶಾನಭಾಗ , ಶ್ರೀನಿಜಗುಣದೇವರು ☆ ಸಾಹಿತ್ಯ , ರಾಗ ಸಂಯೋಜನೆ : ಶ್ರೀ ನಿಜಗುಣದೇವರು ☆ ಸಂಗೀತ : ಎ.ಸುಂದರಮೂರ್ತಿ ☆ ಸಂಯೋಜನೆ , ಸಂಕಲನ : ವಿಶ್ವನಾಥ ಇರಕಲ್ಲ ☆ ಡಿಜಿಟಲೀಕರಣ : ಶ್ರೀನಿವಾಸ ಇರಕಲ್ಲ ☆ AARUDHA KAILASA - DEVOTIONAL SONGS ☆ SHRI #SIDDHAROODHA #SWAMI #HUBLI #MATH SONG ☆ SUNG BY : MANJULA GURURAJ , B.R.CHAYA , SHANKAR SHANBHAG , NIJAGUNADEVARU ☆ LYRICS , TUNES : SHR NIJAGUNADEVARU ☆ MUSIC : A.SUNDERMURTHY ☆ ORGANISED , EDITED : VISHWANATH IRKAL ☆ DIGITAL CONVERTION : SHRINIVAS IRKAL ಕರ್ನಾಟಕದ ಪ್ರಪ್ರಥಮ ಲೈಸೆನ್ಸ್ಡ್ ಪಡೆದ ಕ್ಯಾಸ್ಸೆಟ್ಸ್ ತಯಾರಿಕಾ ಸಂಸ್ಥೆ , ವಿಜಯ ರೆಕಾರ್ಡಿಂಗ್ ಸರ್ವಿಸಸ್ ,1981 ರಿಂದ ಉತ್ತರ ಕರ್ನಾಟಕದ ಪ್ರಸಿದ್ಧ , ಹೆಸರಾಂತ ದೇವಸ್ಥಾನಗಳ ,ಮಠ , ಮಾನ್ಯರ, ಪಾರಂಪರಿಕ ಗೀತೆಗಳನ್ನು ,ವಾದ್ಯಗಳನ್ನು , ಕಲೆಗಳನ್ನು,ಕಲಾಕಾರರನ್ನು ಮೊಟ್ಟು ಮೊದುಲು ಕ್ಯಾಸ್ಸೆಟ್ಟ್ ಮೂಲಕ ಪರಿಚಿಯಿಸಿದ ಸಂಸ್ಥೆ "ವಿಜಯ" ಕ್ಯಾಸೆಟ್ಸರವರ - ಸುಪ್ರಸಿದ್ಧ - #ಕನ್ನಡಭಕ್ತಿಗೀತೆಗಳು #ಸುಪ್ರಭಾತ #ನಾಮಾವಳಿ #ದಾಸರಪದಗಳು #ಜಾನಪದಗೀತೆಗಳು #ಭಜನಾಪದಗಳು #ತತ್ಟಭಜನಾಪದಗಳು #ಕೈವಲ್ಯಪದಗಳು #ಡೊಳ್ಳಿನಪದಗಳು #ಚೌಡಕಿಪದಗಳು #ಗೀಗೀಪದಗಳು #ಎಕಧಾರಿಪದಗಳು #ಸೊಬಾನಪದಗಳು #ಕೀರ್ತನೆ #ಪ್ರವಚನ #ಅಮೃತವಾಣಿ #ನಾಟಕ #ಬಯಲಾಟ #ದೊಡ್ಡಾಟ #ಸಣ್ಣಾಟ #ಯಕ್ಷಗಾನ #ಹಿಂದೂಸ್ತಾನಿಕರ್ನಾಟಕಿಶಾಸ್ತ್ರೀಯಗಾಯನ #ಹಿಂದೂಸ್ತಾನಿಕರ್ನಾಟಕಿವಾದ್ಯಗಳು ಅಲ್ಲದೆ #ತುಳು #ತೆಲಗು #ಮರಾಠಿ #ಕ್ಷಾತ್ರಭಾಷಾSSKಸಾವಜಿ #ಉರ್ದು ಭಾಷೆಯ ಕಾರ್ಯಕ್ರಮಗಳನ್ನು ಕೇಳಿ ಆನಂದಿಸಿರಿ ,ಹೆಚ್ಚಿನ ವಿಜಯ ಕಾರ್ಯಕ್ರಮಗಳಿಗಾಗಿ ಹಾಗೂ ವಿಶೇಷವಾಗಿ ಉತ್ತರ ಕರ್ನಾಟಕದ ಶೈಲಿಯ ಹಾಡುಗಳಿಗಾಗಿ , ಈ ಧ್ವನಿ ಹಾಗೂ ಚಿತ್ರೀಕರಣದ ಹಕ್ಕುದಾರರು FIRST LICENSED CASSETTES PRODUCERS IN KARNATAKA -SINCE 1981 PRODUCED AND MARKETED - MOST FAMOUS AND POPULAR LIKE,SUBSCRIBE. THIS AUDIO AND VIDEO ALL COPY RIGHTS RESERVED BY VIJAI RECORDING SERVICES , # 7 , S.S.K COMPLEX , DAJIBANPETH , HUBLI -580028 CELL NO - +91 9448113141 , 9980240325 . PLEASE SUBSCRIBE / LIKE / SHARE / COMMENTS TO OUR CHANNELS ( 3 ) VIJAI RECORDING SERVICES ! VISHWANATH IRKAL ! SHRINIVAS V IRKAL