Русские видео

Сейчас в тренде

Иностранные видео


Скачать с ютуб ಕೃಷ್ಣಾನದಿದಂಡೆಯಗ್ರಾಮಅಯ್ಯನಗುಡಿಹತ್ತಿರದಲ್ಲಿಶ್ರಾವಣಮಾಸದಕೊನೆಯಮಂಗಳವಾರಜರುವತೆಪ್ಪೋತ್ಸವಅತೀವಿಜೃಂಭಣೆಯಿಂದಜರುಗಿತು в хорошем качестве

ಕೃಷ್ಣಾನದಿದಂಡೆಯಗ್ರಾಮಅಯ್ಯನಗುಡಿಹತ್ತಿರದಲ್ಲಿಶ್ರಾವಣಮಾಸದಕೊನೆಯಮಂಗಳವಾರಜರುವತೆಪ್ಪೋತ್ಸವಅತೀವಿಜೃಂಭಣೆಯಿಂದಜರುಗಿತು 3 недели назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



ಕೃಷ್ಣಾನದಿದಂಡೆಯಗ್ರಾಮಅಯ್ಯನಗುಡಿಹತ್ತಿರದಲ್ಲಿಶ್ರಾವಣಮಾಸದಕೊನೆಯಮಂಗಳವಾರಜರುವತೆಪ್ಪೋತ್ಸವಅತೀವಿಜೃಂಭಣೆಯಿಂದಜರುಗಿತು

ನಾಲತವಾಡ: ಇಲ್ಲಿಗೆ ಸಮೀಪದ ಕೃಷ್ಣಾ ನದಿ ದಂಡೆಯ ಗ್ರಾಮ ಅಯ್ಯನಗುಡಿ ಹತ್ತಿರದಲ್ಲಿ ಶ್ರಾವಣ ಮಾಸದ ಕೊನೆಯ ಮಂಗಳವಾರ ಜರುವ ತೆಪ್ಪೋತ್ಸವ ಅತೀ ವಿಜೃಂಭಣೆಯಿಂದ ಜರುಗಿತು. ಬಲದಿನ್ನಿ ಧಣಿಗಳು ಪ್ರತಿ ವರ್ಷ ಶ್ರಾವಣ ಮಾಸದಲ್ಲಿ ನಡೆಸಿಕೊಂಡು ಬರುತ್ತಿರುವ ತೆಪ್ಪೋತ್ಸವಕ್ಕೆ ಶಾಸಕರು ಹಾಗೂ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ.ಎಸ್. ನಾಡಗೌಡ್ರ ಅಪ್ಪಾಜಿ ನೇತೃತ್ವ ವಹಿಸಿಕೊಂಡಿದ್ದರು.ಅಯ್ಯನಗುಡಿ ಶ್ರೀ ಗಂಗಾಧರನು ಜನಿಸುತ್ತಲೇ ಅವನನ್ನು ತುಂಬಿ ಹರಿಯುತ್ತಿರುವ ಕೃಷ್ಣಾ ನದಿಯ ತೆಪ್ಪದಲ್ಲಿ ಜನ್ಮ ದಾತರು ಬಿಟ್ಟು ಹೋದರು , ತಿಂಥಣಿಯ ಮೌನೇಶ್ವರರು ಮಗುವನ್ನು ರಕ್ಷಿಸಿ ಆಶಿರ್ವದಿಸಿದರು,ಮಹಾ ಸಾತ್ವಿಕ ಶರಣನಾದ ಗಂಗಾಧರರು ತುಂಬಿದ ನದಿಯನ್ನು ದಾಟಲು ಹರಿಗೋಲು ಇಲ್ಲದೆಯೇ ತಮ್ಮ ಕಂಬಳಿಯನ್ನು ಹಾಸಿ ನದಿ ದಾಟಿದರು ಎಂಬ ಪವಾಡಗಳ ಹಿನ್ನೆಲೆಯಲ್ಲಿ ಈ ತೆಪ್ಪೋತ್ಸವ ಆಚರಿಸಲಾಗುತ್ತಿದೆ ಎಂದು ಶಾಸಕ ಅಪ್ಪಾಜಿ ನಾಡಗೌಡ ಹೇಳಿದರು. ಹೂ ಬಳ್ಳಿ,ಅಂಬರಿ ಗಿಡಗಳು, ವಿವಿಧ ಪುಷ್ಪಗಳಿಂದ ಅಲಂಕೃತಗೊಂಡ ತೆಪ್ಪಕ್ಕೆ ನಾಲತವಾಡದ ವಿಶ್ವಕರ್ಮ ಸಮಾಜದ ಸಂಗಣ್ಣ ಪತ್ತಾರ (ಮುರಾಳ) ಇವರ ನೇತೃತ್ವದಲ್ಲಿ ಪೂಜಾ ಕೈಂಕರ್ಯ ನೆರವೇರಿಸಿದರು,ತೆಪ್ಪದಲ್ಲಿ ಪೂಜಾ ಸಾಮಗ್ರಿಗಳು,ಮಂಗಲಕರ ವಸ್ತುಗಳು, ಪ್ರಸಾದ,ಹುಗ್ಗಿ ಪಾಯಸ,ಬೃಹತ್ತಾದ ದೀಪ ಸೇರಿದಂತೆ ಹೂವುಗಳನ್ನು ಒಳಗೊಂಡ ತೆಪ್ಪ ವನ್ನು ಕೃಷ್ಣಾ ನದಿಗೆ ಬಿಡುತ್ತಲೇ ಭಕ್ತಾದಿಗಳು ಜಯಘೋಷ ಕೂಗಿದರು. ಈ ವೇಳೆ ನದಿ ದಂಡೆಯ ಐಯ್ಯನಗುಡಿ, ಕಾನೀಕೇರಿ,ಖಾನಾಪೂರ,ಬಿಜ್ಜೂರ,ಘಾಳಪೂಜಿ ಗ್ರಾಮದ ಈಜುಗಾರರು, ಮೀನುಗಾರರು ತೆಪ್ಪವನ್ನು ನದಿಯ ಮಧ್ಯದ ವರೆಗೂ ಕೊಂಡೊಯ್ದರು. ಸಿ.ಎಸ್.ನಾಡಗೌಡ, ರಾಹುಲ್ ನಾಡಗೌಡ್ರ,ಅಕ್ಷಯ ನಾಡಗೌಡ,ಬಸರಕೋಡದ ಚಿನ್ನು ನಾಡಗೌಡ,ಬಲವಂತ ಉಣ್ಣಿಭಾವಿ,ಚಿನ್ನು ನಾಡಗೌಡ,ಮುನ್ನಾಧಣಿ ನಾಡಗೌಡ,ಪೃಥ್ವಿರಾಜ ನಾಡಗೌಡ್ರ, ಬಾಲಚಂದ್ರ ಗದಗಿನ,ಲೊಟಗೇರಿಯ ಗುರುಮೂರ್ತಿ ಕಣಕಾಲಮಠ,ಸಂಗಣ್ಣ ಮುರಾಳ,ಅಶೋಕ ಇಲಕಲ್ಲ ಅಲ್ಲಾಭಕ್ಷ. ಮೂಲಿಮನಿ. ದವಲ್ ಸಾಬ್. ಸುಲ್ತಾನ್ ಪುರ. ಸೇರಿದಂತೆ ನಾಲತವಾಡ,, ಬಲದಿನ್ನಿ,ಕಾರಕೂರ,ನಾಲತವಾಡ,ರಕ್ಕಸಗಿ,ಲೊಟಗೇರಿ,ಬಿಜ್ಜೂರದ ಜನತೆ ಇದ್ದರು. ವರದಿ ಅಬ್ದುಲ್ ರಜಾಕ್ ರಕ್ಕಸಗಿ ಎಂಡಿ ಯುಟ್ಯೂಬ್ ಚಾನೆಲ್ನಾಲತವಾಡ

Comments