Русские видео

Сейчас в тренде

Иностранные видео


Скачать с ютуб ಇಂದಿನ ಹಿಂದೂ ಸಮಾಜಕ್ಕೆ ಸಾವರ್ಕರ್ ಜೀವನ ಪ್ರೇರಣೆಯಾಗಲಿ - ಶ್ರೀ ಚಕ್ರವರ್ತಿ ಸೂಲಿಬೆಲೆ Chakravarthy Sulibele в хорошем качестве

ಇಂದಿನ ಹಿಂದೂ ಸಮಾಜಕ್ಕೆ ಸಾವರ್ಕರ್ ಜೀವನ ಪ್ರೇರಣೆಯಾಗಲಿ - ಶ್ರೀ ಚಕ್ರವರ್ತಿ ಸೂಲಿಬೆಲೆ Chakravarthy Sulibele 3 дня назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



ಇಂದಿನ ಹಿಂದೂ ಸಮಾಜಕ್ಕೆ ಸಾವರ್ಕರ್ ಜೀವನ ಪ್ರೇರಣೆಯಾಗಲಿ - ಶ್ರೀ ಚಕ್ರವರ್ತಿ ಸೂಲಿಬೆಲೆ Chakravarthy Sulibele

ಇಂದಿನ ಹಿಂದೂ ಸಮಾಜಕ್ಕೆ ಸಾವರ್ಕರ್ ಜೀವನ ಪ್ರೇರಣೆಯಾಗಲಿ ಇವತ್ತಿನ ಕಾರ್ಯಕ್ರಮ ಬಹಳ ವಿಜೃಂಭಣೆಯಿಂದ ನಡೆದಿದ್ದು ವಿಶೇಷ.... ಕಾರ್ಯಕ್ರಮ ಸಾವರ್ಕರ್ ಅವರ ಚಿತ್ರಕ್ಕೆ ಪುಷ್ಪಾರ್ಚನೆ ಮೂಲಕ ಆರಂಭವಾಯಿತು. ದಿ. ಶಿವರಾಮು ಅವರು ಬರೆದ ಸಾವರ್ಕರ್ ಕುರಿತ ಗೀತೆಯನ್ನು ಉಮಾದೇವಿಯವರು ಹಾಡಿದರು ನಂತರ ಸಮೃದ್ಧ ಸಾಹಿತ್ಯದ ಏಳುಬೀಳುಗಳು ನಡೆದು ಬಂದ ಹಾದಿ ಇವೆಲ್ಲವನ್ನು ಸುವಿಸ್ತಾರವಾಗಿ ಸಮೃದ್ಧ ಸಾಹಿತ್ಯದ ಹರ್ಷ ಅವರು ಸಭಿಕರನ್ನು ಉದ್ದೇಶಿಸಿ ವಿವರಿಸಿದರು.. ಇದು ಸಮೃದ್ಧ ಸಾಹಿತ್ಯ 100ನೇ ಕೃತಿ ಆದ್ದರಿಂದ ಕಾರ್ಯಕ್ರಮ ವಿಶೇಷವಾಗಿತ್ತು ನಂತರ ಹಿಂದುತ್ವ 25ನೇ ಮುದ್ರಣ ಮತ್ತು ವೀರ ಸಾವರ್ಕರ್ ಕೃತಿಯ ಲೋಕಾರ್ಪಣೆ ಯನ್ನು ಬೆಂಗಳೂರು ಇತಿಹಾಸ ತಜ್ಞರಾದ ಶ್ರೀ ಸುರೇಶ ಮೂನ ಖ್ಯಾತ ವಾಗ್ಮಿಗಳಾದ ಶ್ರೀ ಚಕ್ರವರ್ತಿ ಸೂಲಿಬೆಲೆ ಮತ್ತು ಲೇಖಕರಾದ ಡಾ. ಜಿ ಬಿ ಹರೀಶ ಎಲ್ಲರೂ ಸೇರಿ ಪುಸ್ತಕವನ್ನು ಲೋಕಕ್ಕೆ ಅರ್ಪಿಸಿದರು.... ನಂತರ ಸುರೇಶ್ ಮೂನ ಅವರು ಸಮೃದ್ಧ ಸಾಹಿತ್ಯ ಹೇಗೆ ಬೆಳೆದು ಬಂತು ಮತ್ತು ಸಾವರ್ಕರ್ ಮತ್ತು ಬೆಂಗಳೂರಿನ ಸಂಬಂಧದ ಕುರಿತು ಕೆಲವು ವಿಚಾರಗಳನ್ನು ತಿಳಿಸಿದರು ತದನಂತರ ಸಮೃದ್ಧ ಸಾಹಿತ್ಯದ ಲೇಖಕರ ಬಳಗಕ್ಕೆ ಕಿರು ಸನ್ಮಾನ ಕಾರ್ಯಕ್ರಮ ನೆರವೇರಿದ ನಂತರ ಖ್ಯಾತ ವಾಜ್ಞಮಿಗಳಾದ ಶ್ರೀ ಚಕ್ರವರ್ತಿ ಸೂಲಿಬೆಲೆ ಅವರು ಮಾತನಾಡುತ್ತಾ ಸಾವರ್ಕರ್ ಅವರ ಅಗ್ನಿಶಿಕೆಯ ಕವನಗಳು ಮಾತುಗಳು ಮತ್ತು ಹೋರಾಟದ ವಿಸ್ತಾರದ ನುಡಿಗಳನ್ನು ಹಾಡಿದರು ಹಾಗೂ ರಾಷ್ಟ್ರೀಯ ಪುಸ್ತಕಗಳ ಪ್ರಕಾಶಕರ ಅವಶ್ಯಕತೆ ಜವಾಬ್ದಾರಿಗಳ ಬಗ್ಗೆ ಮಾಹಿತಿಯನ್ನು ಸಭಿಕರ ಮುಂದೆ ವಿವರಿಸಿದರು...‌ ನಂತರ ಪುಸ್ತಕದ ಅನುವಾದಕರು ಮತ್ತು ಇತಿಹಾಸ ತಜ್ಞರಾದ ಡಾ ಜಿ ಬಿ ಹರೀಶ ಅವರು ಮಾತನಾಡುತ್ತಾ ಸಾವರ್ಕರ್ ಅವರ ಆಳ ಮತ್ತು ಅಗಲ ಇವರ ವಿವರಗಳನ್ನು ನೀಡುತ್ತಾ ಇಂದಿನ ನರೇಷನ್ ಯಾವ ರೀತಿ ಇರುತ್ತದೆ ಮತ್ತು ಸಾವರ್ಕರ್ ವಿರುದ್ಧ ಯಾವ ರೀತಿಯ ನರೇಟಿವ್ ಹಿಂದೆ ಹೇಗೆ ಅದನ್ನು ಮಾಡಿದರು ಎಂಬ ವಿವರಿಸುತ್ತಾ ಇಂದಿನ ಹಿಂದೂ ಸಮಾಜದ ಯಾವ ರೀತಿ ನಡೆಯುತ್ತಿದೆ ಮತ್ತು ಹೇಗೆ ಅನ್ಯ ಸಂಘ-ಸಂಸ್ಥೆಗಳಿಗೆ ಮತ್ತು ವ್ಯಕ್ತಿಗಳಿಗೆ ಈ ಹಿಂದೂ ಸಮಾಜವನ್ನು ಗುತ್ತಿಗೆ ಆಧಾರದ ಮೇಲೆ ಕೊಟ್ಟು ತಾನು ಕೈ ಕಟ್ಟಿಕೊಂಡು ಕುಳಿತಿರುವ ಅಪಾಯದ ಮಾತುಗಳನ್ನು ಹರೀಶ ಅವರು ಅಮೋಘವಾಗಿ ವಿವರಿಸಿದರು... ಕಾರ್ಯಕ್ರಮವನ್ನು ಶ್ರೀಮತಿ ಮಂಜು ಗುಬ್ಬಚ್ಚಿ ಅವರು ಸೊಗಸಾಗಿ ನೆರವೇರಿಸಿದರು..‌ 780ಕ್ಕೂ ಹೆಚ್ಚು ಪುಟಗಳಿರುವ ಈ ಕೃತಿ ಮುಖಬೆಲೆ 750 ಇದೆ. ಲೋಕಾರ್ಪಣೆಯ ಸಮಯಕ್ಕೆಂದು ವಿಶೇಷ ರಿಯಾಯಿತಿಯಲ್ಲಿ ಪುಸ್ತಕಗಳನ್ನು ನೀಡಿತು. ಸಭಿಕರು ತಾ ಮುಂದು ನಾ ಮುಂದು ಎಂದು ದಪ್ಪ ಗಾತ್ರದ ಪುಸ್ತಕವನ್ನು ಕೊಂಡಿದ್ದು ಆಶ್ಚರ್ಯವಾಯಿತು.. ಸೆಲ್ಫಿಗೆ ಮತ್ತು ಆಟೋಗ್ರಾಫಿಗಳಿಗೆ ಭಾರಿ ಡಿಮ್ಯಾಂಡ್ ಇತ್ತು, ಕಾರ್ಯಕ್ರಮದ ನಂತರ ಪುಷ್ಕಳವಾದ ಹೋಳಿಗೆ ಊಟದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು. ಹೀಗೆ ಒಂದು ಪ್ರಕಾಶನ ಸಂಸ್ಥೆ ಸೆಂಚುರಿಯ ಸಂಭ್ರಮ ವಿಜೃಂಭಣೆಯಿಂದ ಅದ್ದೂರಿಯಾಗಿ ನೆರೆದಿದ್ದ ಜನಸ್ತೋಮದಿಂದ ಕಾರ್ಯಕ್ರಮ ಯಶಸ್ವಿಯಾಯಿತು.. #chakravarthysulibele #gbharisha #booksamskruthi #kannadabooks #VeerSavarkar

Comments