Русские видео

Сейчас в тренде

Иностранные видео


Скачать с ютуб Havyaka haadu_Akshate kalesiddu 2 ಹವ್ಯಕ ಹಾಡು ಅಕ್ಷತೆ ಕಲೆಸಿದ್ದು_2 (ತಾಯಿ ದೇವಕಿ ತನ್ನ) в хорошем качестве

Havyaka haadu_Akshate kalesiddu 2 ಹವ್ಯಕ ಹಾಡು ಅಕ್ಷತೆ ಕಲೆಸಿದ್ದು_2 (ತಾಯಿ ದೇವಕಿ ತನ್ನ) 3 года назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



Havyaka haadu_Akshate kalesiddu 2 ಹವ್ಯಕ ಹಾಡು ಅಕ್ಷತೆ ಕಲೆಸಿದ್ದು_2 (ತಾಯಿ ದೇವಕಿ ತನ್ನ)

ಹಾಡಿದವರು_ಸುತೇಜಾ ಮೋಹನ ಹೆಗಡೆ ಅಳವಳ್ಳಿ ಹಾಡಿನ ಪೂರ್ತಿ‌‌ ಸಾಹಿತ್ಯ ತಾಯಿ ದೇವಕಿ ತನ್ನ ಮಗಳನ್ನೇ ಕರೆದಾಳೆ ಶ್ರೀಹರಿಯ ವಿವಾಹಕ್ಕೆನುತಾಲೆ|ಎನುತಾಲೆ ಅಕ್ಷತವ ಕಲಸುವ ಪದನ ವರಿವೆನಾ||೧|| ಮಾತೆಯ ನುಡಿ ಕೇಳಿ ಈಗ ಬಲರಾಮನು ನಗುತ ಸೌಭದ್ರೆ ಕರೆದಾನೆ|ಕರೆದು ತಾ ಪೇಳಿದ ಶುಭದಿಂದಕ್ಷತವ ಕಲಸೆಂದು||೨|| ಆಡಿದ ಮಾತನು ಕೇಳಿ ತಂಗಿ ಸೌಭದ್ರೆಯು ಮಾತೆಯರನೆಲ್ಲ ಕರೆದಾಳೆ|ಕರೆದು ತಾ ಹೇಳಿದ ಮುತ್ತಿನ ಅಕ್ಷತವಾ ಕಲಸೆಂದು||೩|| ಅಕ್ಷತವ ಕಲಸುವಲೆ ಹೊತ್ತು ಬಹಳಾಯಿತು|ಹೆತ್ತಮ್ಮನ ಬೇಗ ಕರೆದಾಳೆ|ಕರೆದು ತಾ ಹೇಳಿದ ಮುತ್ತಿನ ಅಕ್ಷತವಾ ಕಲಸುವ||೪|| ಮನೆದೇವರಿಗೊಂದಿಸಿ ಕುಲದೇವರಿಗೆರಗೀಯೆ|ಮಾತಾ_ಪಿತೃಗಳಿಗೆ ಅಭಿನಮಿಸಿ|ಅಭಿನಮಿಸಿ ಸೌಭದ್ರೆ ಅಕ್ಷತ ಕಲಸುವಲೆ ಅನುವಾದ||೫|| ಸಣ್ಣಕ್ಕಿ ಹೇರುಗಳ ತರಿಸಿದನೆ ಬಲರಾಮ ತೆಂಗಿನಕಾಯ ತರಿಸಿದ|ತರಿಸಿ ತಾ ಹೇಳಿದ ಬೇಗ ಅಕ್ಷತವಾ ಕಲಸೆಂದು||೬|| ಎಳ್ಳುಂಡೆ ಲಡ್ಡಿಗೆ ಅರ್ಪಿಸಿ ಗಣಪತಿಗೆ ಮುದ್ದು ಅಣ್ಣಯ್ಯನ ವಿವಾಹಕ್ಕೆ|ವಿವಾಹಕ್ಕೆ ಅಕ್ಷತವಾ ನಾರಿಯರೊಂದಾಗಿ ಕಲೆಸಿದ||೭|| ಮುತ್ತಿನ್ಹರಿವಾಣದಲಿ ನೆಟ್ಟಕ್ಕಿಗಳ ತುಂಬಿ ತಾಯಿ_ತಂಗಿಯರ ಒಡಗೂಡಿ|ಒಡಗೂಡಿ ಸೌಭದ್ರೆ ಚಂದದಿ ಅಕ್ಷತವಾ ಕಲಸಿದ||೮|| ರಂಜಿಸುವ ಅರಿಸಿನವು ಶೋಭಿಸುವ ಕುಂಕುಮವು|ಇಂದ್ರಮಾಣಿಕದ ಹರಿವಾಣ|ಹರಿವಾಣದೊಳಗಿಟ್ಟು ರಂಭೆಯರಕ್ಷತವಾ ಕಲಸಿದ||೯|| ಮುದ್ದು ಸೌಭದ್ರೆಯು ಗಜ್ಜೆ ಗಗ್ಗರವಿಟ್ಟು ಹರಳಿನ ಹೊನ್ವಾಲೆ ಹೊಳೆಯುತ್ತ|ಹೊಳೆಯುತ್ತ ಸೌಭದ್ರೆ ನಗುತಲಕ್ಷತವಾ ಕಲಸಿದ||೧೦|| ಹಸ್ತ ಕಡಗವನಿಟ್ಟು ಕಸ್ತೂರಿ ಬಳೆ ಇಟ್ಟು|ಮಿತ್ರೆಯರನೆಲ್ಲ ಒಡಗೊಂಡು| ಒಡಗೊಂಡು ಸೌಭದ್ರೆ ಚಂದದಿ ಅಕ್ಷತವಾ ಕಲಸಿದ||೧೧|| ಮುದ್ದು ಸೌಭದ್ರೆಯು ಅಣ್ಣನ ವಿವಾಹಕ್ಕೆ| ಬಂಧು_ಬಳಗವನೆ ಒಡಗೊಂಡು|ಒಡಗೊಂಡು ಸೌಭದ್ರೆ ಅಕ್ಷತವಾ ಕಲಸಿ ನಮೋ ಎಂದು||೧೨|| ಅಕ್ಷತದಾ ಬಟ್ಟಲಲಿ ಬಿಳಿಯ ಹೂವನೆ ಇಟ್ಟು|ಅರಿಸಿನ_ಕುಂಕುಮದಾ ಸಹಿತಲೆ|ಸಹಿತಲೆ ನಾರಿಯರು ಫಲವಸ್ತು ಇಟ್ಟು ನಮೋ ಎಂದು||೧೩|| 🌹🌹🌹🌹🌹🌹🌹🌹🌹🌹🌹🌹🌹🌹🌹🌹🌹 ಅಕ್ಷತೆ ಕಲೆಸಿದ ಹಾಡು_೧ (ಅಕ್ಷತವ ಕಲಸಿದರು ಶುಭದಾ)    • #Havyaka haadu_Akshate kalesiddu 1 #ಹ...  

Comments