Русские видео

Сейчас в тренде

Иностранные видео


Скачать с ютуб 2019 Interim Budget Analysis With HR Ranganath в хорошем качестве

2019 Interim Budget Analysis With HR Ranganath 5 лет назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



2019 Interim Budget Analysis With HR Ranganath

ಮಧ್ಯಮ ವರ್ಗ ಕುತೂಹಲದಿಂದ ಬೆರಗುಗಣ್ಣಿನಿಂದ ಕಾದು ಕುಳಿತಿದ್ದ ತೆರಿಗೆ ವಿಷಯದಲ್ಲಿ ಕೇಂದ್ರ ಸರ್ಕಾರ ಕೊಂಚ ರಿಲೀಫ್ ನೀಡಿದೆ. 5 ಲಕ್ಷದವರೆಗೆ ಆದಾಯ ಇರುವವರು ಯಾವುದೇ ತೆರಿಗೆ ಕಟ್ಟುವ ಅಗತ್ಯವಿಲ್ಲ. ಆದರೆ 5 ಲಕ್ಷಕ್ಕಿಂತಲೂ ಒಂದು ರೂ. ಜಾಸ್ತಿ ಆದಾಯ ಇದ್ದರೂ ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಈ ಹಿಂದೆ 2.50 ಲಕ್ಷ ರೂ. ನಿಂದ 5 ಲಕ್ಷ ರೂ. ಆದಾಯ ಇದ್ದವರಿಗೆ 5% ರಷ್ಟು ತೆರಿಗೆ ವಿಧಿಸಲಾಗುತಿತ್ತು. ಆದರೆ ಈಗ ಈ ತೆರಿಗೆ ವಿನಾಯಿತಿ ಮಿತಿಯನ್ನು ಕಿತ್ತು ಹಾಕಿಲ್ಲ. ಈ ಹಿಂದೆ 3 ಲಕ್ಷ ಆದಾಯವುಳ್ಳವರು ತೆರಿಗೆ ವ್ಯಾಪ್ತಿಗೂ ಬಂದರೂ ಅನ್ವಯವಾಗುತ್ತಿದ್ದ 2,500 ರಿಬೇಟ್ ಮೂಲಕ ಮನ್ನಾ ಆಗುತ್ತಿತ್ತು. ಈಗ 5 ಲಕ್ಷ ರೂ.ವರೆಗೆ ಆದಾಯವುಳ್ಳವರಿಗೆ ಅನ್ವಯವಾಗುವ 12,500ವರೆಗಿನ ತೆರಿಗೆ ರಿಬೇಟ್ ಮೂಲಕ ಮನ್ನಾ ಆಗಲಿದೆ. ಮೋದಿ ತೆರಿಗೆ ಲೆಕ್ಕಾಚಾರ ಹೀಗಿದೆ ನೋಡಿ: 5 ಲಕ್ಷವರೆಗೆ 2018ರ ವರೆಗೆ 2,500 ರೂ. ರಿಬೇಟ್ ಇತ್ತು. ಈಗ ರಿಬೇಟ್ 12,500 ರೂಪಾಯಿಗೆ ಹೆಚ್ಚಳ ಮಾಡಲಾಗಿದೆ. ಈ ಹಿಂದೆ 3 ಲಕ್ಷ ರೂ. ಆದಾಯವುಳ್ಳವರು ತೆರಿಗೆ ವ್ಯಾಪ್ತಿಗೂ ಬಂದರೂ ಅನ್ವಯವಾಗುತ್ತಿದ್ದ 2,500 ರಿಬೇಟ್ ಮನ್ನಾ ಆಗುತ್ತಿತ್ತು. ಈಗ 5 ಲಕ್ಷ ರೂ.ವರೆಗೆ ಆದಾಯವುಳ್ಳವರಿಗೆ ಅನ್ವಯವಾಗುವ 12,500ರವರೆಗಿನ ರಿಬೇಟ್ ಮನ್ನಾ ಆಗಲಿದೆ. 5 ಲಕ್ಷಕ್ಕಿಂತ ಒಂದು ರೂಪಾಯಿ ಮೇಲ್ಪಟ್ಟರೂ ರಿಬೇಟ್ ಅನ್ವಯವಾಗುದಿಲ್ಲ. ಸ್ಟ್ಯಾಂಡರ್ಡ್ ಡಿಡಕ್ಷನ್ 40 ಸಾವಿರದಿಂದ 50 ಸಾವಿರ ರೂ. ಏರಿಕೆ ಮಾಡಿದ್ದು, ಗೃಹ ಸಾಲ 2 ಲಕ್ಷದವರೆಗೆ ತೆರಿಗೆ ವಿನಾಯ್ತಿ ನೀಡಲಾಗಿದೆ. ಪಿಎಫ್, ಪಿಪಿಎಫ್ ಸೇರಿದಂತೆ ನಿಗದಿತ ಹೂಡಿಕೆಗೆ 6.50 ಲಕ್ಷದವರೆಗೆ ತೆರಿಗೆ ಭರಿಸಬೇಕಿಲ್ಲ. ಬ್ಯಾಂಕ್, ಅಂಚೆಯಂತ ಉಳಿತಾಯ ಯೋಜನೆಗಳ ಮೇಲೆ 1.5 ಲಕ್ಷದವರೆಗೆ ತೆರಿಗೆ ವಿನಾಯ್ತಿ ಘೋಷಿಸಲಾಗಿದೆ. 40 ಸಾವಿರದವರೆಗಿನ ಬಡ್ಡಿ ಆದಾಯಕ್ಕೆ ಟಿಡಿಎಸ್ ಇಲ್ಲ. ಟಿಡಿಎಸ್‍ನ ಬಡ್ಡಿ ಮಿತಿ ವಿನಾಯಿತಿಯನ್ನು 10 ಸಾವಿರದಿಂದ 40 ಸಾವಿರದವರೆಗೆ ಏರಿಸಲಾಗಿದೆ. ಸ್ಟಾಂಡರ್ಡ್ ಡಿಡಕ್ಷನ್ ಎಲ್ಲವನ್ನು ಕಳೆದು 5 ಲಕ್ಷ ರೂ. ಒಳಗಡೆ ಆದಾಯ ಇದ್ದರೆ ತೆರಿಗೆ ಕಟ್ಟಬೇಕಿಲ್ಲ. ಎಲ್ಲವನ್ನು ಕಳೆದು 1 ರೂಪಾಯಿ ಜಾಸ್ತಿಯಾದರೆ ಅದಕ್ಕೆ ತೆರಿಗೆ ಕಟ್ಟಬೇಕಾಗುತ್ತದೆ. ಯಾರಿಗೆ ಎಷ್ಟೆಷ್ಟು ತೆರಿಗೆ? ಆದಾಯ ತೆರಿಗೆ ಸ್ಲಾಬ್‍ಗಳಲ್ಲಿ ಯಾವುದೇ ಬದಲಾವಣೆ ಆಗಿಲ್ಲ. 2018-19ರ ಹಣಕಾಸು ವರ್ಷದಲ್ಲಿ ಇರುವಂತೆ 2019-20 ರಲ್ಲಿ ತೆರಿಗೆ ಕಟ್ಟಬೇಕು. 2.5 ಲಕ್ಷದ ವರೆಗೆ ಯಾವುದೇ ತೆರಿಗೆ ಇಲ್ಲ. 2.5 ಲಕ್ಷದಿಂದ 5 ಲಕ್ಷದ ವರೆಗೆ 5%, 5 ಲಕ್ಷಕ್ಕಿಂತ ಮೇಲ್ಪಟ್ಟು 10 ಲಕ್ಷದ ಒಳಗಡೆ ಇದ್ದರೆ 20%, 10 ಲಕ್ಷಕ್ಕೂ ಮೇಲ್ಪಟ್ಟು 30% ತೆರಿಗೆಯನ್ನು ಕಟ್ಟಬೇಕು. ಎಷ್ಟು ಆದಾಯ ಇರುವವರಿಗೆ ಎಷ್ಟು ತೆರಿಗೆ? 5 ಲಕ್ಷ ರೂ. ಒಳಗಡೆ (ಸ್ಟ್ಯಾಂಡರ್ಡ್ ಡಿಡಕ್ಷನ್ ಕಳೆದು ಸಿಗುವ ಆದಾಯ) ಇರುವ ಆದಾಯಕ್ಕೆ ಯಾವುದೇ ತೆರಿಗೆ ಇಲ್ಲ. 5 ಲಕ್ಷದ ಮೇಲೆ 1 ರೂಪಾಯಿ ಆದಾಯ ಹೆಚ್ಚಾದರೂ 12,500 ಟ್ಯಾಕ್ಸ್ ಕಟ್ಟಬೇಕಾಗುತ್ತದೆ. ಇದಕ್ಕೆ ರಿಬೇಟ್ ಇರುವುದಿಲ್ಲ. 7.5 ಲಕ್ಷಕ್ಕೆ 62,500 ರೂ., 10 ಲಕ್ಷಕ್ಕೆ 1,12,500 ರೂ., 15 ಲಕ್ಷಕ್ಕೆ 2,62,500 ರೂ., 20 ಲಕ್ಷಕ್ಕೆ 4,12,500 ರೂ. ತೆರಿಗೆ ಕಟ್ಟಬೇಕು. (ಗಮನಿಸಿ: 5 ಲಕ್ಷದ 1 ರೂಪಾಯಿ ಮೀರಿದ ಎಲ್ಲಾ ಮೊತ್ತದ ಟ್ಯಾಕ್ಸ್ ಮೇಲೆ 3% ರಷ್ಟು ಸೆಸ್ ಅನ್ವಯ ಆಗಲಿದೆ) Read detail news at www.publictv.in Subscribe on YouTube: https://www.youtube.com/user/publictv... Follow us on Google+ @ https://plus.google.com/+publictv Like us @   / publictv   Follow us on twitter @   / publictvnews  

Comments