Русские видео

Сейчас в тренде

Иностранные видео


Скачать с ютуб ಶ್ರೀ ವಾದಿರಾಜ ವಿರಚಿತ ಸುಂದರಕಾಂಡ...... Sundarakaanda...... в хорошем качестве

ಶ್ರೀ ವಾದಿರಾಜ ವಿರಚಿತ ಸುಂದರಕಾಂಡ...... Sundarakaanda...... 4 месяца назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



ಶ್ರೀ ವಾದಿರಾಜ ವಿರಚಿತ ಸುಂದರಕಾಂಡ...... Sundarakaanda......

ಶ್ರೀ ವಾದಿರಾಜ ವಿರಚಿತ ಸುಂದರಕಾಂಡ ಎಷ್ಟು ಸಾಹಸವಂತ ನೀನೇ ಬಲವಂತ  |  ದಿಟ್ಟ ಮೂರುತಿ  ಭಳಿ ಭಳಿರೇ ಹನುಮಂತ  ||  ಅಟ್ಟುವ  ಖಳರೆ ದೆ   ಮೆಟ್ಟಿ ತುಳಿದುತಲೆ    |   ಕುಟ್ಟಿ ಚಂಡಾಡಿದ ದಿಟ್ಟ  ನೀನಹುದೋ  ||ಪ|| ರಾಮರಪ್ಪಣೆಯಿಂದ  ಶರಧಿಯ ದಾ೦ಟಿ  |  ಆ  ಮಹಾ  ಲಂಕೆಯ ಕಂಡೆ ಕಿರೀಟಿ  | ಸ್ವಾಮಿಯ  ಕಾರ್ಯವ  ಪ್ರೇಮದಿ ನಡೆಸಿದಿ     |  ಈ ಮಹಿಯೊಳಗೆ ನಿನಗಾರೈ  ಸಾಟಿ  || ೧ || ದೂರದಿಂದಸುರನ ಪುರವನೆ  ನೋಡಿ  |  ಭರದಿ ಶ್ರೀ ರಾಮರ  ಸ್ಮರಣೆಯ ಮಾಡಿ  |  ಹಾರಿದೆ  ಹರುಷದಿ ಹರಿಸಿ ಲಂಕಿಣಿಯನು  |  ವಾರಿಜ ಮುಖಿಯನು  ಕಂಡು ಮಾತಾಡಿ || ೨ || ರಾಮರ ಕ್ಷೇಮವ ರಮಣಿಗೆ ಪೇಳಿ  |  ತಾಮಸ ಮಾಡದೆ ಮುದ್ರಿಕೆ ನೀಡಿ | ಪ್ರೇಮದಿ  ಜಾನಕಿ ಕುರುಹನು  ಕೊಡಲಾಗ  |  ಆ ಮಹಾವನದೊಳು ಫಲವನು ಬೇಡಿ|| ೩ || ಕಣ್ಣಿಗೆ ಪ್ರಿಯವಾದ ದ ಹಣ್ಣನು ಕೊಯ್ದು   |  ಹಣ್ಣಿನ ನೆವದಲಿ ಅಸುರರ ಹೊಯ್ದು  | ಪಣ್ಣ ಪಣ್ಣನೆ ಹಾರಿ  ನೆಗೆ ನೆಗೆದಾಡುತ  |  ಬಣ್ಣಿಸಿ ಅಸುರರ ಬಲವನು  ಮುರಿದು || ೪ || ಶ್ರುಂಗಾರ ವನದೊಳಗೆ  ಇದ್ದ ರಾಕ್ಷಸರ  |  ಅಂಗವನಳಿಸಿದೆ  ಅತಿರಣಶೂರಾ | ನುಂಗಿ ಅಸ್ತ್ರಗಳ   ಅಕ್ಷಯ ಕುವರನ  |  ಭಂಗಿಸಿ ಬಿಸುಟಿದ್ಯೋ ಬಂದ ರಕ್ಕಸರಾ|| ೫ || ದೂರು  ಪೇಳಿದರೆಲ್ಲ ರಾವಣನೊಡನೆ  |  ಚೀರುತ್ತ ಕರೆಸಿದ ಇಂದ್ರಜಿತ್ತುವನೆ  | ಚೋರ ಕಪಿಯನು ಹಿಡಿತಾಹುದೆನ್ನುತ  |  ಶೂರರ ಕಳುಹಿದ ನಿಜಸುತನೊಡನೆ || ೬  || ಪಿಡಿದನು ಇಂದ್ರಜಿತು ಕಡುಕೊಪದಿಂದ  |   ಹೆಡೆಮುರಿ ಕಟ್ಟಿದ ಬ್ರಹ್ಮಾಸ್ತ್ರದಿಂದ | ಗುಡುಗುಡುಗುಟ್ಟುತ ಕಿಡಿಕಿಡಿಯಾಗುತ  |  ನಡೆದನು ಲಂಕೆಯ ಒಡೆಯನಿದ್ದೆಡೆಗೆ || ೭ || ಕಂಡನು  ರಾವಣನು ಉದ್ದಂಡ ಕಪಿಯನು   |  ಮಂಡೆಯ ತೂಗುತ ಮಾತಾಡಿಸಿದನು  | ಭಂಡು ಮಾಡದೆ ಬಿಡೆನೋಡು ಕಪಿಯನೆ  |  ಗಂಡುಗಲಿಯನು ದುರುದುರಿಸಿ ನೋಡಿದನು || ೮ || ಛಲವ್ಯಾಕೋ ನಿನಗಿಷ್ಟು ಎಲವೋಕೊಡಗನೆ  |  ನೆಲೆಯಾವುದ್ಹೇಳೋ ನಿನ್ನೂಡೆಯನೆಸರನ್ನೆ | ಬಲವಂತ ರಾಮರ ಬಂಟ ಬಂದಿಹೆನೋ  |  ಹಲವು ಮಾತ್ಯಾಕೋ ಹನುಮನು  ನಾನೇ  || ೯ || ಬಡ ರಾವಣನೆ ನಿನ್ನ ಬಡಿದು ಹಾಕುವೆನೋ   | ಒಡೆಯನಪ್ಪನಣೆಯಿಲ್ಲ ಎಂದು ತಾಳಿದೆನೋ  | ಪುಡಿಏಳಿಸುವೆನು  ಪುಲ್ಲ ರಕ್ಕಸನೆ  |  ತೊಡೆವೆನೊ  ನಿನ್ನ ಪಣೆಯ ಅಕ್ಷರವ || ೧೦ || ನಿನ್ನಂತ ದೂತರು ರಾಮರ ಬಳಿಯೊಳು   |  ಇನ್ನೆಷ್ಟು ಮಂದಿ ವುಂಟು ಹೇಳೋ ನೀ ತ್ವರಿಯಾ | ನನ್ನಂತ ದೂತರು ನಿನ್ನಂತ ಪ್ರೇತರು  |  ಇನ್ನೂರು ಮುನ್ನೂರು ಕೋಟಿ ಕೇಳರಿಯಾ || ೧೧ || ಕಡುಕೋಪದಿಂದಲಿ ಖೂಳ ರಾವಣನು  |  ಸುಡಿರೆಂದ  ಬಾಲವ ಸುತ್ತಿ ವಸನವ | ಒಡೆಯನ ಮಾತಿಗೆ ತಡೆಬಡೆಯಿಲ್ಲದೆ  |  ಒಡನೆ ಮುತ್ತಿದ್ದರು ಗಡಿಮನೆಯವರು || ೧೨ || ತಂದರು ವಸನವ ತoಡ ತಂಡದಲಿ  |  ಒಂದೊಂದು ಮೂಟೆ ಎಂಭತ್ತು ಕೋಟಿಯಲಿ | ಛಂದದಿ ಹರಳಿನ ತೈಲದೊಳದ್ದಿಸಿ  |  ನಿಂದ ಹನುಮನು ಬಾಲವ ಬೆಳೆಸುತ || ೧೩ || ಶಾಲುಶಕಲಾತಿಯು ಸಾಲದೆಯಿರಲು  |  ಬಾಲೆರ ವಸ್ತ್ರವ ಸೆಳೆದು ತಾರೆನಲು | ಬಾಲವ ನಿಲ್ಲಿಸಿ ಬೆಂಕೆಯನಿಡುತಲಿ  |  ಕಾಲ ಮೃತ್ಯುವ ಕೆಣಕಿದರಲ್ಲಿ  || ೧೪ || ಕುಣಿಕುಣಿದಾಡುತ ಕೂಗಿ ಬೊಬ್ಬಿಡುತ  |  ಇಣುಕಿ ನೋಡುತ ಅಸುರರನಣಕಿಸುತ | ಝಣಝಣ ಝಣರೆನೆ ಬಾಲದ ಗಂಟೆಯು  |  ಮನದಿ ಶ್ರೀರಾಮರ ಪಾದವ ನೆನೆಯುತ || ೧೫ || ಮಂಗಳ೦ ಶ್ರೀರಮಚಂದ್ರ ಮೂರುತಿಗೆ  |  ಮಂಗಳಂ ಸೀತಾದೇವಿ ಚರಣoಗಳಿಗೆ |  ಮಂಗಳವೆನುತ ಲಂಕೆಯ ಸುಟ್ಟು  |  ಲಂಘಿಸಿ ಅಸುರನ ಗಡ್ದಕೆ ಹಿಡಿದ  || ೧೬ || ಹೊತ್ತಿತು ಅಸುರನ ಗಡ್ಡಮೀಸೆಗಳು  |  ಸುತ್ತಿತು ಹೊಗೆ ಬ್ರಹ್ಮಾಂಡ ಕೊಟಿಯೋಳು | ಚಿತ್ತದಿರಾಮರು ಕೋಪಿಸುವರು  |  ಎಂದು ಚಿತ್ರದಿ ನಡೆದನು ಅರಸನಿದ್ದೆಡೆಗೆ|| ೧೭ || ಸೀತೆಯ ಕ್ಷೇಮವ ರಾಮರಿಗೆ ಹೇಳಿ  |  ಪ್ರೀತಿಯಿಂಕೊಟ್ಟ ಕುರುಹ ಕರದಲ್ಲಿ | ಸೇತುವೆ ಕಟ್ಟಿ ಚದುರಂಗ ಬಲಸಹ  |  ಮುತ್ತಿತು ಲಂಕೆಯ ಸೂರೆಗೈಯುತಲಿ  || ೧೮ || ಹೆಗ್ಗಳವಾಯಿತು ರಾಮರ ದಂಡು  |  ಮುತ್ತಿತು ಲಂಕೆಯ ಕೋಟೆಯ ಕಂಡು |  ಹೆಗ್ಗದ ಕಾಯ್ವರ ನುಗ್ಗು ಮಾಡುತಿರೆ  |  ಝಗ್ಗನೆ ಪೇಳ್ವರು ರಾವಣಗಂದು || ೧೯ || ರಾವಣ ಮೊದಲಾದ ರಾಕ್ಷಸರ ಕೊಂದು  |  ಭಾವಶುದ್ಧದಲಿ ವಿಭೀಷಣಬಾಳೆಂದು | ದೇವಿ ಸೀತೆಯ ನೋಡಗೊಂಡು   ಅಯೋಧ್ಯದಿ  |  ದೇವ ಶ್ರೀರಾಮರು ರಾಜ್ಯವಾಳಿದರು || ೨೦ || ಶಂಖದೈತ್ಯನ ಕೊಂದೆ ಶರಣು ಶರಣಯ್ಯ  |  ಶಂಖಗಿರಿಯಲಿ ನಿಂದ ಹನುಮಂತರಾಯ | ಪಂಕಜಾಕ್ಷ ಹಯವದನ ಕಟಾಕ್ಷದಿ  |  ಬಿಂಕದಿ ಪಡೆದೆಯೋ ಅಜನಪದವಿಯ || ೨೧ ||

Comments