Русские видео

Сейчас в тренде

Иностранные видео


Скачать с ютуб ಮನೆತನಕ್ಕೆ ದಾರಿದ್ರ್ಯಬರಲು ಶಾಪ ಇರುತ್ತೆ ಇಷ್ಟು ಮಾಡಿ ಕಳೆದುಕೊಳ್ಳಿ ಒಂದು ಮುಷ್ಟಿ ಅವಲಕ್ಕಿ ಸುಧಾಮನ ಕಥೆ ಇಷ್ಟೇ в хорошем качестве

ಮನೆತನಕ್ಕೆ ದಾರಿದ್ರ್ಯಬರಲು ಶಾಪ ಇರುತ್ತೆ ಇಷ್ಟು ಮಾಡಿ ಕಳೆದುಕೊಳ್ಳಿ ಒಂದು ಮುಷ್ಟಿ ಅವಲಕ್ಕಿ ಸುಧಾಮನ ಕಥೆ ಇಷ್ಟೇ 5 месяцев назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



ಮನೆತನಕ್ಕೆ ದಾರಿದ್ರ್ಯಬರಲು ಶಾಪ ಇರುತ್ತೆ ಇಷ್ಟು ಮಾಡಿ ಕಳೆದುಕೊಳ್ಳಿ ಒಂದು ಮುಷ್ಟಿ ಅವಲಕ್ಕಿ ಸುಧಾಮನ ಕಥೆ ಇಷ್ಟೇ

#ಸುಧಾಮನ_ಹಾಡು ಪತಿಯ ಪಾದಕ್ಕೆರಗಿ ಮತಿ ಬೇಡಿ ಪಾರ್ವತಿ | ಸುತಗೆ ವಂದನೆಯ ಮಾಡಿದಳು || ಅತಿ ಭಕ್ತಿಯಿಂದಲಿ ಸ್ತುತಿಸುವ ಜನರಿಗೆ ಸ- | ದ್ಗತಿಯಾಗಲೆನುತ ಪೇಳಿದಳು || ೧ || ಸುಧಾಮನೆಂಬೋರ್ವ ಸೂಕ್ಷ್ಮದ ಬ್ರಾಹ್ಮಣ | ಹೊದಿಯಲಿಕ್ಕಿಲ್ಲ ಆಶನವಿಲ್ಲ || ಗದಗದ ನಡುಗುತ ಮಧುರ ಮಾತಾಡುತ | ಸದನದೊಳಿರುತಿದ್ದನಾಗ || ೨ || ಪ್ರಾತಃ ಕಾಲದಲ್ಲೆದ್ದು ನಿತ್ಯ ಕರ್ಮವ ಮುಗಿಸಿ | ನಾಥನ ಧ್ಯಾನ ಮಾಡುತಲಿ || ಪಾತ್ರರ ಮನೆಗ್ಹೋಗಿ ಯಾಚನೆಗಳ ಮಾಡಿ | ಗ್ರಾಸ ತರುವನು ಮುಷ್ಟಿ ತುಂಬ || ೩ || ಪತಿವೃತೆ ಹೆಂಡತಿ ಪತಿ ತಂದದ್ದೆ ಸಾಕೆಂದು | ಹಿತದಿಂದ ಪಾಕ ಮಾಡುವಳು || ಅತಿ ಭಕ್ತಿಯಿಂದಲಿ ಪತಿಗೆ ಭೋಜನ ಬಡಿಸಿ | ಮತಿವಂತಿ ಉಳಿದದ್ದುಂಬುವಳು || ೪ || ಹಸಿವೆ ತೃಷೆಗಳಿಂದ ಅತಿಕ್ಲೇಶವಾಗಿದ್ದು | ಪತಿಕೂಡೆ ಮಾತನಾಡಿದಳು || ಗತಿಯೇನು ನಮಗಿನ್ನು ಹಿತದವರ‍್ಯಾರಿಲ್ಲ ಸ- | ದ್ಗತಿಯೇನೆನುತ ಪೇಳಿದಳು || ೫ || ಪೊಡವಿಯೊಳಗೆ ನಿಮ್ಮ ಒಡಹುಟ್ಟಿದವರಿಲ್ಲೆ | ಒಡನೆ ಆಡಿದ ಗೆಳೆಯರಿಲ್ಲೆ || ಕರೆದು ಕೂಡಿಸಿಕೊಂಡು ಬಿರುಸು ಮಾತ್ಹೆಳುವ | ಹಿರಿಯರು ದಾರಿಲ್ಲೆ ನಿಮಗೆ || ೬ || ಚಿಕ್ಕಂದಿಲ್ಲೋದಿಲ್ಲೆ ಹೆತ್ತವರ‍್ಹೆಳಿಲ್ಲೆ | ಉತ್ತಮ ಗುರುಗೋಳಿಲ್ಲೆನು || ಹೊತ್ತು ವೇಳೆಗಾಗೋ ಮಿತ್ರರು ಯಾರಿಲ್ಲೆ ಮತ್ತೆ ಕೇಳಿದಳು ಕ್ಲೇಶದಲಿ || ೭ || ಮಡದಿ ಮಾತನು ಕೇಳಿ ಮನದಲಿ ಯೋಚಿಸಿ | ಹುಡುಗನಾಗಿರಲಿಕ್ಕೆ ಹೋಗಿ || ಗುರುಕುಲ ವಾಸದಲಿ ಹರಿ ನಾವು ಓದಿದ್ದು | ಹರಿ ಹೊರ್ತು ಮತ್ತೊಬ್ಬರಿಲ್ಲಾ || ೮ || ಇನ್ನೊಬ್ಬರೇತಕೆ ಅನ್ಯರಪೇಕ್ಷೇಕೆ | ಮನ್ನಿಸಿ ಹೋಗಿ ಬರ‍್ರೆಂದಳು || ಇನ್ನೇನು ಕೊಡತಿಯೆ ಹರಿ ಮುಂದೆ ಇಡಲಿಕ್ಕೆ | ಚೆನ್ನಾಗಿ ಕೇಳಿದನಾಗ || ೯ || ಗಾಬರಿಯಾದಳು ಸಾಗಿ ತಾ ನಡೆದಳು | ಬೇಗ ತಂದಳು ಅವಲಕ್ಕಿ || ಬಾಗಿ ವಸ್ತ್ರದೊಳು ಬೇಗ ಕಟ್ಟಿಕೊಟ್ಟು | ಹೋಗಿ ಬರ‍್ರೆನುತ ಪೇಳಿದಳು || ೧೦ || ಅಂಗಳವನು ಬಿಟ್ಟು ಮುಂದಕೆ ಬಂದನು | ಹಂಗ ಹಾರುವುದು ಎಡಕೆ || ಮಂಗಳವಾಗುವುದು ರಂಗನ ದರುಶನ | ಸಂದೇಹವಿಲ್ಲದಾಗುವುದು || ೧೧ || ಬಾಗಿಲವನು ಬಿಟ್ಟು ಸಾಗಿ ಮುಂದಕೆ ಬರಲು | ಕಾಗಿ ಹಾರ‍್ಹೋದವು ಬಲಕೆ || ಆಗುವುದು ನಮಗಿನ್ನು ಆಗುವುದು ಶುಭ ಚಿನ್ಹ | ಆಗುವುದು ಹರಿ ಕೃಪೆಯಿಂದ || ೧೨ || ಹೀಗೆಂದ ಬ್ರಾಹ್ಮಣ ಮುಂದಕೆ ನಡೆದನು | ಕಂಡನು ಕಮಲ ಪುಷ್ಪಗಳ || ರಂಗನ ಹೆಂಡರಿಗೆ ಹೆರಳಿಗೆ ಬೇಕೆಂದು | ತೆಗೆದುಕೊಂಡನು ಕಮಲ ಪುಷ್ಪಗಳ || ೧೩ || ಹರಿಯುವ ಜಲವೆಲ್ಲ ಹರಿಯಭಿಷೇಕವೆಂ- | ದ್ಹರುಷದಲಿ ತುಂಬಿಕೊಂಡು || ಕರದಲ್ಲಿ ಹಿಡಕೊಂಡು ಪುರದ ಬಾಗಿಲ ಮುಂದೆ | ಹರಿ ಹ್ಯಾಗೆ ದೊರಕುವ ನೆಂದ || ೧೪ || ನಿಂತನು ಬ್ರಾಹ್ಮಣನ ಅನಂತ ರೂಪದಿ ಧ್ಯಾನ | ಅಂತ ರಂಗದಲಿ ಮಾಡುತಲಿ || ಸಂತೋಷದಿಂದಲಿ ಧರಿಸಿದ ದಶರೂಪ- |ದಿಂದ ಬಂದೆನ್ನ ಕಾಯೆಂದ || ೧೫ || ಹರಕು ವಸ್ತ್ರವನುಟ್ಟು ಹರಿ ಧ್ಯಾನ ಮಾಡುವ | ವಿಪ್ರನ ಕಂಡು ಚಾರಕರು || ಬರಬೇಡಿರೊಳಗೆ ಹಿರಿಯರಪ್ಪಣೆಯಿಲ್ಲ | ತಿರುಗಿ ಹೋಗೆನುತ ಹೇಳಿದರು || ೧೬ || ಅಂದ ಮಾತನು ಕೇಳಿ ಅಂಜಿದ ಬ್ರಾಹ್ಮಣ | ಇಂದಿರಾರಮಣಗ್ಹೇಳೆಂದ || ಹೆಸರು ಸುಧಾಮನಂತೆ ಹಸಿದು ಬಂದಾರೆಂದು | ವಸುದೇವ ತನಯಗ್ಹೇಳಿದರು || ೧೭ || ಕೇಳಿದ ಹರಿಯೆದ್ದು ಬಹಳ ಹರುಷದಿಂದ | ಬೇಗನೆ ಕರೆತನ್ನಿರವನ || ಹೋಗು ಹೋಗೆಂದರೆ ಸಾಗಿ ಮುಂದಕೆ ಬರಲು | ಬಾಗಿಲಿಗೆ ಬಂದ ಸುಧಾಮ || ೧೮ || ಬಂದ ಭಕ್ತನ ನೋಡಿ ಆನಂದದಿಂದೆದ್ದು | ವಂದಿಸಿ ಆಸನವ ಹಾಕಿದರು || ಚಂದದಿಂದಲಿ ಕರವ ಹಿಡಿದು ಮಾತಾಡುತ | ಬಂದ ಕಾರಣವ ಕೇಳಿದರು || ೧೯ || ಮಂದಗಮನೆ ಸಹಿತ ತಂದ ಉದಕದಿಂದ | ಚಂದದಿಂದಲಿ ಪಾದ ತೊಳೆದು || ಗಂಧ ಕೇಶರ ಹಚ್ಚಿ ಚೆಂದ ಚಾಮರದಿಂದ | ಅಂದದಿ ಗಾಳಿ ಬೀಸಿದರು || ೨೦ || ಹಸಿದು ಬಂದಾರೆಂದು ಹಸಿವೆಗೆ ತಕ್ಕಂಥ | ಹಸನಾದ ಹಣ್ಣು ಸಕ್ಕರೆಯು || ಕುಸುಮ ನಾಭನು ತಾನು ಪನ್ನೀರು ತಂದೀಡೆ | ಉಂಡು ಕೈತೊಳೆದ ಸುಧಾಮ || ೨೧ || ಮಂದರಧರಗಿನ್ನು ಸುಂದರ ಸತಿಯರು | ತಂದರು ತಬಕ ವಿಳ್ಯವನು || ಇಂದಿರೆರಮಣನು ಬಂದ ಸುಧಾಮನು | ಚಂದದಿ ಮೆಲೆದರು ವಿಳ್ಯವನು || ೨೨ || ಶ್ರಮ ಬಹಳವಾಗಿದೆ ಶ್ರಮಿಸಿಕೊಳ್ಳಿರೆಂದು | ಸೆಳೆ ಮಂಚ ತಂದ್ಹಾಕಿದರು || ಶಾಲು ಸಕಲಾತಿಯು ಮೇಲಾದ ಹಾಸಿಗೆ | ಮೇಲೆ ಮಲಗಿದನು ಸುಧಾಮ || ೨೩ || ಅಂದಿನ ರಾತ್ರಿಯಲಿ ಮಂದಗಮನೇಯರ ಬಿಟ್ಟು | ಬಂದು ಮಲಗಿದನು ಶ್ರೀಹರಿಯು || ಹಿಂದಿನ ವೃತ್ತಾಂತ ಒಂದೊಂದು ಸ್ಮರಿಸುತ | ಆನಂದದಿ ಹರಿಯು ಸುಧಾಮ || ೨೪ || ಅಂದಿನ ಸ್ನೇಹವು ಇಂದೇಕೆ ನೆನಪಾಯ್ತು | ಬಂದೀರಿ ಬಹುದಿನಕೆಂದ || ಹೆಂಡತಿ ಮಕ್ಕಳು ಇಹರೇನು ನಿಮಗೆಂದು | ಇಂದಿರೆ ರಮಣ ಕೇಳಿದನು || ೨೫ || ಹೆಂಡತಿ ಕಳುಹಿದಳು ರಂಗನ ದರುಷನ | ಕೊಂಡು ಬಾರೆನುತ ಪೇಳಿದಳು || ತಂದದ್ದು ಕೊಡಲಿಕ್ಕೆ ಸಂದೇಹವೇತಕ್ಕೆ | ತಂಡುಲ ಹಿಡಿದು ಜಗ್ಗಿದನು || ೨೬ || ಮುಷ್ಟಿತುಂಬವಲಕ್ಕಿ ಮುಕ್ಕಿದ ಹರಿ ಬೇಗ | ನಕ್ಕರು ಸತಿಯರೆಲ್ಲ || ಇಷ್ಟೇ ಸಾಕು ಎಂದು ಗಟ್ಯಾಗಿ ಕೈ ಹಿಡಿಯೆ | ಕೊಟ್ಟನು ಭಕ್ತನಿಗೆ ಐಶ್ವರ್ಯ || ೨೭ || ಹದಿನಾರು ಸಾವಿರ ಚದುರೆಯರ ಕರೆಸಿದ | ಕೊಡಿಸಿದೆಲ್ಲರಿಗೆ ತಂಡುಲವ || ಉಳಿಸಿದ ಅವಲಕ್ಕಿ ಉಣಲಿಕ್ಕೆ ಮಾರ್ಗಕ್ಕೆ | ಬೇಕೆಂದು ಬಿಗಿದು ಕಟ್ಟಿದರು || ೨೮ || ರನ್ನದ ಬಾಗಿಲಿಗೆ ಚಿನ್ನದ ಚೌಕಟ್ಟು | ಹೊನ್ನ ಹೊಸ್ತಲವ ನಿರ್ಮಿಸಿದ || ರನ್ನ ಮಾಣಿಕ ಬಿಗಿದ ತೊಲಿ ಕಂಬ ಗಿಳಿಬೋದು | ಪನ್ನಗಶಯನ ನಿರ್ಮಿಸಿದ || ೨೯ || ಇರಿರಿ ನಾಲ್ಕುದಿವಸ ತ್ವರೆ ಯಾಕೆ ಮಾಡುವಿರಿ | ಇರಲಿಕ್ಕೆ ಬಾರದೆಯೆಂದಾ || ನೆರೆ ಹೊರೆ ಯಾರಿಲ್ಲ ತರುಣಿಯೊಬ್ಬಳಿಹಳು | ಇರಲಿ ನಾ ಹೇಗೆ ಪೇಳೆಂದ || ೩೦ || ಪಾದಕೆ ಎರಗಿ ತಾ ಸಾಗಿ ಮುಂದಕೆ ಬಂದ | ಬಾಗಿಲಿಗೆ ಬಂದ ಸುಧಾಮ || ಹೋಗಿರಿ ಹಿಂದಕೆ ಹೋಗಿ ಬರುತೇನೆನಲು | ಬಾಗಿ ಕೈ ಮುಗಿದ ಶ್ರೀಹರಿಯು || ೩೧ || ಮುಂದಕೆ ಬಂದನು ಇಂದೇನು ಕೊಡಲಿಲ್ಲ | ಹೆಂಡತಿಗೆ ಹೇಳಲೇನೆಂದ || ನಿಂತನು ಒಣಿಯಲಿ ಮಂದಿರ ಸಿಗಲಿಲ್ಲ | ಹೆಂಡತಿಯ ಕಂಡ ಸುಧಾಮ || ೩೨ || ಮಂದಿರವನ್ನೆಲ್ಲ ಕಂಡನು ಐಶ್ವರ್ಯ | ಚಂದದಿಂದಾಭರಣ ಕಂಡ || ಇಂದಿರಾಪತಿಯನ್ನು ಕಂಡು ಬಂದುದರಿಂದ | ಬಂದಿತು ಸಕಲ ಸಂಪತ್ತು || ೩೩ || ರವಿವಾರ ಹಾಡಿದರೆ ರಾಜಕಾರ್ಯವಾಗುವುದು | ಬಂಜೆಗೆ ಮಕ್ಕಳಾಗುವವು || ಬರಡೆಮ್ಮೆ ಕರೆಯೋದು ಬಡತನ ಹಿಂಗುವುದು | ಗುರುವಾರ ಹಾಡಿದವರಿಗೆ || ೩೪ || ಶ್ರೀನಿವಾಸನ ಧ್ಯಾನ ಮೌನದಿಂದಲಿ ಮಾಡಿ | ನಾನಾ ಸಂಪತ್ತು ಪಡೆದರು || ಅದರ ವಿಷಯ ತಿಳಿದು ಗತಿ ಮೋಕ್ಷ ಇರಲೆಂದು | ಶ್ರೀ ಹರಿ ಕೊಡು ದೇವ ಸಿರಿಯ || ೩೫ || ಇದು ಭಾಗವತವೆನ್ನಿ ಇದು ಭಾಗವತವೆನ್ನಿ | ಇದು ಭಾಗವತಕೆ ಕೀಲಗಳು | ಇದಕೆ ಪ್ರಿಯನು ನಮ್ಮ ಪುರಂದರವಿಠ್ಠಲ | ಇದರಿಂದ ಮುಕ್ತಿ ಕೊಡುವನು || ೩೬ ||

Comments