Русские видео

Сейчас в тренде

Иностранные видео


Скачать с ютуб ಮುರುಘಾ ಶ್ರೀಗಳು ಕರೆದಂತೆ ಮಠಕ್ಕೆ ಖಾಸಾಮಠ ಎನ್ನುವ ಹೆಸರು ಅವಾಗಿನ ನಾಣ್ಯದ ಪೂರ ಈಗಿನ ಗುರುಮಠಕಲ್ ಇದು ಇತಿಹಾಸ. в хорошем качестве

ಮುರುಘಾ ಶ್ರೀಗಳು ಕರೆದಂತೆ ಮಠಕ್ಕೆ ಖಾಸಾಮಠ ಎನ್ನುವ ಹೆಸರು ಅವಾಗಿನ ನಾಣ್ಯದ ಪೂರ ಈಗಿನ ಗುರುಮಠಕಲ್ ಇದು ಇತಿಹಾಸ. 14 часов назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



ಮುರುಘಾ ಶ್ರೀಗಳು ಕರೆದಂತೆ ಮಠಕ್ಕೆ ಖಾಸಾಮಠ ಎನ್ನುವ ಹೆಸರು ಅವಾಗಿನ ನಾಣ್ಯದ ಪೂರ ಈಗಿನ ಗುರುಮಠಕಲ್ ಇದು ಇತಿಹಾಸ.

ಭವ್ಯ ಪರಂಪರೆಯ ಖಾಸಾಮಠ; ಪೂರ್ವ ಪೀಠಾಧಿಪತಿ ಸಂಗಮೇಶ್ವರ ಸ್ವಾಮಿಜಿ ಪುಣ್ಯ ಸ್ಮರಣೆ ಇಂದು ‘ಗುರುಮಠ ಕಲ್ಲಿ’ನ ಮಠಕ್ಕಿದೆ ಆರು ಶತಮಾನಗಳ ಇತಿಹಾಸ ರವಿ ಬುರನೋಳ ಎಂ ಟಿ ಪಲ್ಲಿ ಗುರುಮಠಕಲ್ : ಕರ್ನಾಟಕ ವಿಧಾನಸಭೆಯ ಮತಕ್ಷೇತ್ರವಾಗಿ, ಪ್ರಸ್ತುತ ತಾಲ್ಲೂಕು ಕೇಂದ್ರವಾಗಿರುವ ಗುರುಮಠಕಲ್ ಪಟ್ಟಣಕ್ಕೆ ಈ ಹೆಸರು ತಂದದ್ದು ಇಲ್ಲಿ ಆರು ಶತಮಾನಗಳ ಇತಿಹಾಸವಿರುವ ಖಾಸಾಮಠ ಎನ್ನುವುದು ಪಟ್ಟಣದ ಸ್ಥಳ ನಾಮದ ಹಿನ್ನಲೆಯಾಗಿದೆ. ತೆಲಂಗಾಣ ಗಡಿಯನ್ನು ಹಂಚಿಕೊಂಡಿರುವ ಗುರುಮಠಕಲ್ ತಾಲ್ಲೂಕಿನಲ್ಲಿ ಈಗಲೂ ತೆಲುಗು, ಉರ್ದು ಪ್ರಭಾವವೇ ಹೆಚ್ಚು. ಹಿಂದೆ ನಿಜಾಮರ ಆಡಳಿತಕ್ಕೆ ಒಳಪಟ್ಟಿದ್ದ ಈ ಪ್ರದೇಶದ ಕಂದಾಯದ ದಾಖಲೆಗಳು (ಖಾಸರ ಪಹಣಿ) ಮೋಡಿ ಭಾಷೆಯಲ್ಲಿದ್ದುದ್ದನ್ನು ನಾವು ಕಾಣಬಹುದಾಗಿದೆ. ಆಡಳಿತಾತ್ಮಕವಾಗಿ ಮೋಡಿ ಲಿಪಿ, ಉರ್ದು ಭಾಷೆ ಬಳಕೆ ಮತ್ತು ವ್ಯವಹಾರಿಕವಾಗಿ ತೆಲುಗು ಭಾಷೆಯನ್ನು ಬ ಳಕೆ ಮಾಡುತ್ತಿದ್ದ ಕಾಲದಲ್ಲಿ ಈ ಭಾಗದ ಜನತೆಗೆ ಕನ್ನಡ ಭಾಷೆಯನ್ನು ಕಲಿಸಿದ ಕೀರ್ತಿಯು ಖಾಸಾಮಠಕ್ಕೆ ಸಲ್ಲುತ್ತದೆ. ಈ ಭಾಗದಲ್ಲಿ ಬಸವ ತತ್ವ ಪ್ರಸಾರ, ದಾಸೋಹ ತತ್ವ ಮತ್ತು ವಚನ ಸಾಹಿತ್ಯ ಪ್ರಚಾರದ ಜತೆಗೆ ಕನ್ನಡ ಭಾಷಾ ಪ್ರಸರಣದ ಕಾರ್ಯವನ್ನು ಖಾಸಾಮಠದ ಪರಂಪರೆ ಮುಂದುವರಿಸಿದೆ. ಮಠದ ವಿವರ : 600 ವರ್ಷಗಳ ಹಿಂದ ಚಿತ್ರದುರ್ಗದ ಜಗದ್ಗುರುಗಳಾಗಿದ್ದ ಗುರುಪಾದ ಮುರುಘಾ ಶರಣರ ಶಿಷ್ಯ ಶಾಂತವೀರ ಸ್ವಾಮಿಗಳು ಧರ್ಮ ಪ್ರಸಾರ ಮತ್ತು ಶ್ರೀಶೈಲದ ದರ್ಶನಕ್ಕೆಂದು ಪರ್ಯಟನೆ ಮಾಡುತ್ತಾ ನಾಣ್ಯದಪುರ (ಪಟ್ಟಣದ ಈಗಿನ ನಾಣಾಪುರ ಬಡಾವಣೆ) ಗ್ರಾಮದ ಹೊರವಲಯದ ಕಾಡಿನಲ್ಲಿ ತಪಸ್ಸಿಗೆ ಕುಳಿತರು. ನಂತರ ಭಕ್ತರು ಬರುವುದು, ಸಮಸ್ಯೆಗಳನ್ನು ಹೇಳಿಕೊಳ್ಳುವುದು ಆರಂಭವಾದ ನಂತರ ತಮ್ಮ ಸಂಕಲ್ಪ ಶಕ್ತಿಯಿಂದ ಮಠವನ್ನು ಕಟ್ಟಿಸಿದರು. ತುಂಬಾ ದಿನಗಳಾದರೂ ತಮ್ಮ ಶಿಷ್ಯ ಹಿಂದಿರುಗದ್ದರಿಂದ ಹುಡುಕಿಕೊಂಡು, ಆಂಧ್ರದ ಶ್ರೀಶೈಲಂ ಕ್ಷೇತ್ರದತ್ತ ಸಾಗಿದ್ದ ಗುರುಪಾದ ಮುರುಘಾ ಶರಣರು ಇಲ್ಲಿನ ಮಠವನ್ನು ನೋಡಿ 'ಇದು ಚಿತ್ರದುರ್ಗದ ಶಾಖಾಮಠವಲ್ಲ, ಇದೇ ಖಾಸಾ(ಸ್ವಂತ) ಮಠ' ಎಂದು ಹರ್ಷೋದ್ಘಾರ ಮಾಡಿದರು. ಕಾಲಾಂತರದಲ್ಲಿ ಇದೇ ಮಠದಲ್ಲಿ ಶಿವೈಕ್ಯರಾದರು. ಮುರುಘಾ ಮಠದ ಜಗದ್ಗುರುಗಳು ಕರೆದಂತೆ ಮಠಕ್ಕೆ ಖಾಸಾಮಠ ಎನ್ನುವ ಹೆಸರೇ ಕಾಯಂ ಆಗಿದೆ. ಖಾಸಾಮಠದ ಸ್ಥಾಪನೆಯ ನಂತರ ನಾಣ್ಯಪುರವು ಬೆಳೆಯುತ್ತಾ ಬಂದಿದ್ದು, ಇದನ್ನು ಗುರು ಮಟ್ಟಿದ ಕಲ್ಲು, ಗುರು ಮಠದ ಕಲ್ಲು ಎನ್ನುತ್ತಾ ಗುರುಮಠಕಲ್ ಆಗಿ ಹೆರಾಗಿದೆ ಎನ್ನುವುದು ಇತಿಹಾಸ. ಪಟ್ಟಣದಲ್ಲಿ ಸುಮಾರು ಮಠಗಳಳಿದ್ದವು. ಅವುಗಳಲ್ಲಿ ಖಾಸಾಮಠವು ಭೃಹತ್ತಾಗಿದ್ದರಿಂದ ಇದನ್ನು ತೆಲುಗು ಭಾಷೆಯಲ್ಲಿ ಪೆದ್ದಮಠಂ (ದೊಡ್ಡ ಮಠ) ಎನ್ನುವ ಹೆಸರಿಂದಲೂ ಕರೆಯಲಾಗುತ್ತದೆ. ಮಠದ ಒಂಬತ್ತನೇ ಪೀಠಾಧಿಪತಿಗಳಾಗಿದ್ದ ಲಿಂ.ಸಂಗಮೇಶ್ವರ ಶ್ರೀಗಳು 1999ರಲ್ಲಿ ಖಾಸಾಮಠದಲ್ಲಿ ಶಿಕ್ಷಣ ಸಮಸ್ಥೆಯನ್ನು ಆರಂಭಿಸಿದರು. ಕನ್ನಡ ಮಾಧ್ಯಮದಲ್ಲಿ ಗುಣಮಟ್ಟದ ಶಿಕ್ಷಣ ನೀಡುವ ಜತೆಗೆ, ಈ ಭಾಗದ ಜನತೆಗೆ ಕನ್ನಡ ಭಾಷೆಯನ್ನು ಕಲಿಸುವ ನಿಟ್ಟಿನಲ್ಲಿ ಶಾಲೆ ಕಳೆದ 25 ವರ್ಷಗಳಿಂದಲೂ ಕಾರ್ಯಪ್ರವೃತ್ತ ಖಾಸಾಮಠದ ಪೀಠಾಧಿಪತಿಗಳ ವಿವರ ಗುರುಮಠಕಲ್: ಪಟ್ಟಣದ ಖಾಸಾಮಠಕ್ಕೆ ಈವರೆಗೂ 10 ಜನ ಪೀಠಾಧಿಪತಿಗಳಾಗಿದ್ದು, ಪ್ರಸ್ಥುತ ಹತ್ತನೇ ಪೀಠಾಧ್ಯಕ್ಷರು ಪರಂಪರೆಯನ್ನು ಮುಂದುವರೆಸುತ್ತಿದ್ದಾರೆ. ಶಾಂತವೀರ ಶ್ರೀಗಳು ( ಖಾಸಾಮಠದ ಸ್ಥಾಪಕರು), ಇಮ್ಮಡಿ ಶಾಂತವೀರ ಶ್ರೀಗಳು, ಶಿವಪೂಜೆಪ್ಪ ಶ್ರೀಗಳು, ರುದ್ರಪ್ಪ ಶ್ರೀಗಳು, ಮಲ್ಲಿಕಾರ್ಜುನ ಶ್ರೀಗಳು, ಮುರುಘರಾಜೇಂದ್ರ ಶ್ರೀಗಳು, ಬಸವಣ್ಣಪ್ಪ ಶ್ರೀಗಳು, ಮುಮ್ಮಡಿ ಶಾಂತವೀರ ಶ್ರೀಗಳು, ಸಂಗಮೇಶ್ವರ ಶ್ರೀಗಳು, ಶಾಂತವೀರ ಗುರು ಮುರುಘರಾಜೇಂದ್ರ ಶ್ರೀಗಳು (ಪ್ರಸ್ಥುತ ಪೀಠಧ್ಯಕ್ಷರು) ಸಂಗಮೇಶ್ವರ ಶ್ರೀಗಳ ಪುಣ್ಯ ಸ್ಮರಣೆ ಇಂದು ಗುರುಮಠಕಲ್: ಪಟ್ಟಣದ ಖಾಸಾಮಠದ ಒಂಬತ್ತನೇ ಪೀಠಾಧಿಪತಿಗಳಾಗಿದ್ದ ಸಂಗಮೇಶ್ವರ ಶ್ರೀಗಳ ಪುಣ್ಯ ಸ್ಮ ರಣೆ ನವೆಂಬರ್ 8 ರಂದು ಜರುಗಲಿದೆ ಎಂದು ಖಾಸಾಮಠದ ಶಾಂತವೀರ ಗುರು ಮುರುಘರಾಜೇಂದ್ರ ಶ್ರೀಗಳು ತಿಳಿಸಿದರು. ಶುಕ್ರವಾರ ಬೆಳಿಗ್ಗೆ 9 ಗಂಟೆಗೆ ಸಂಗಮೇಶ್ವರ ಶ್ರೀಗಳ ಗದ್ದಿಗೆಗೆ ಅಭಿಷೇಕ, 11 ಗಂಟೆಗೆ ಮಹಾಮಂಗಳಾರತಿ, ಮಹಾದಾಸೋಹದ ನಡೆಯಲಿದೆ ಎಂದು ಅವರು ತಿಳಿಸಿದರು.

Comments