Русские видео

Сейчас в тренде

Иностранные видео


Скачать с ютуб ಕಲಾ ವಿಸ್ಮಯ-ಪ್ರರ್ದಶನ :ಶ್ರೀ ವಿನಯ್ ಹೆಗಡೆ,ವಿಶ್ವದ ಏಕೈಕ ಕಾಸ್ಮಿಕ್ ಕಲಾವಿದರು,ದಿ||13-01-2020 ಸ್ಥಳ:ಗವಿಮಠ ಕೊಪ್ಪಳ в хорошем качестве

ಕಲಾ ವಿಸ್ಮಯ-ಪ್ರರ್ದಶನ :ಶ್ರೀ ವಿನಯ್ ಹೆಗಡೆ,ವಿಶ್ವದ ಏಕೈಕ ಕಾಸ್ಮಿಕ್ ಕಲಾವಿದರು,ದಿ||13-01-2020 ಸ್ಥಳ:ಗವಿಮಠ ಕೊಪ್ಪಳ 4 года назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



ಕಲಾ ವಿಸ್ಮಯ-ಪ್ರರ್ದಶನ :ಶ್ರೀ ವಿನಯ್ ಹೆಗಡೆ,ವಿಶ್ವದ ಏಕೈಕ ಕಾಸ್ಮಿಕ್ ಕಲಾವಿದರು,ದಿ||13-01-2020 ಸ್ಥಳ:ಗವಿಮಠ ಕೊಪ್ಪಳ

ಕಾಸ್ಮಿಕ್ ಕಿರಣಗಳನ್ನು ಸಿಡಿಸುವ ಮೂಲಕ ಹೊಸಕಲೆಯನ್ನು ರೂಢಿಸಿಕೊಂಡಿರುವ ವಿನಯ ಹೆಗಡೆ ಬಹುಮುಖಿ ವ್ಯಕ್ತಿತ್ವ ಹೊಂದಿರುವ ವಿಶ್ವದ ಏಕೈಕ ಕಾಸ್ಮಿಕ್ ಕಲಾವಿದರಾಗಿದ್ದಾರೆ. ಕಾಸ್ಮಿಕ ಕಿರಣಗಳನ್ನು ಸಿಡಿಸುವ ತಂತ್ರಜ್ಞಾನವನ್ನು ಬಳಸಿಕೊಂಡು ತಮ್ಮ ಚಾಕಚಕ್ಯತೆಯಿಂದ ಬಯಲಿನಲ್ಲಿಯೇ ಸುಂದರ ಚಿತ್ರಗಳನ್ನು ಸೃಷ್ಟಿಸುವ ಕಲೆಯನ್ನು ಕರತಲಾಮಲಕಗೊಳಿಸಿಕೊಂಡಿದ್ದಾರೆ.. ಬಹುಮುಖಿ ಕಲಾವಿದರಾದ ಇವರು ಕೆನಡಾದ ಫಿಲಂ ಸ್ಕೂಲಿನಿಂದ ಪದವಿ, ಸಿಂಗಾಪುರದ ಸ್ಕೂಲಿನಿಂದ ಅನಿಮೇಷನ್‍ನಲ್ಲಿ ಪದವಿ, ಕೆನ್ ಸ್ಕೂಲ್ ಆಫ್ ಆರ್ಟ, ಬೆಂಗಳೂರಿನಿಂದ ಪೆಂಟಿಂಗ್ಸ್‍ನಲ್ಲಿ ಪದವಿಗಳಲ್ಲದೇ ಭಾರತದ ಸಾಂಪ್ರದಾಯಿಕ ಕಲಾ ಸಾಧನಗಳಾದ ಶಿಲ್ಪಕಲೆ, ಮೆಟಲ್, ವುಡ್, ಫೈಬರ್ ಗ್ಲಾಸ್, ವ್ಯಾಕ್ಸ್, ಪ್ಲಾಸ್ಟರ್ ಆಫ್ ಪ್ಯಾರೀಸ್ ಮತ್ತು ಇತರ ಸಾಧನಗಳನ್ನು ಬಳಸಿ ಕಲೆ ಅರಳಿಸಿ ದೇಶ ವಿದೇಶಗಳಲ್ಲಿ ಪಸಿದ್ಧಿ ಪಡೆದಿದ್ದಾರೆ. ವಿನಯ ಹೆಗಡೆಯವರು ಆಧುನಿಕ ಕಲಾ ತಾಂತ್ರಿಕ ಮಾಧ್ಯಮಗಳಾದ ವಿ.ಎಕ್ಸ್ ಡಿಸೈನರ್, 3ಡಿ ಡಿಸೈನರ್ ಶಿಲ್ಪಕಲೆ, ತ್ವರಿತ ಪೈಂಟಿಂಗಳಲ್ಲಿ ಪರಿಣಿತಿ ಪಡೆಯುವ ಮೂಲಕ ವೈವಿಧ್ಯಮಯ ಆಧುನಿಕ ತಂತ್ರಜ್ಞಾನಾಧಾರಿತ ಕಲೆಗಳನ್ನು ರೂಢಿಸಿಕೊಂಡು ತಮ್ಮ ಕಲಾಪ್ರತಿಭೆಯನ್ನು ಪ್ರದರ್ಶಿಸುತ್ತಿರುವ ಭಾರತದ ಹೆಮ್ಮೆಯ ಕಾಸ್ಮಿಕ್ ಕಲಾವಿದರೆನಿಸಿಕೊಂಡಿದ್ದಾರೆ. ವಿನಯ ಹೆಗಡೆ ಅಪ್ಪಟ ಅಭಿಜಾತ ಕಲಾವಿದನಾಗಿದ್ದು ಕಲೆ ಮತ್ತು ವೈಜ್ಞಾನಿಕ ತಂತ್ರಜ್ಞಾನವನ್ನು ಸಮ್ಮಿಲನಗೊಳಿಸಿವ ಮೂಲಕ ಹೊಸ ಹೊಸ ಪ್ರಯೋಗಗಳ್ನು ಮಾಡುತ್ತಿದ್ದಾರೆ. ಇವರ ‘ಕಾಸ್ಮಿಕ್ ಸ್ಪ್ಲಾಶ್’, ಗ್ಲೋ ಆರ್ಟ’ ಎನ್ನುವ ಕಾಸ್ಮಿಕ್ ಕಿರಣಗಳ ಜಾದೂ ಕಲೆ ಜನಮನಸೂರೆಗೊಳ್ಳುತ್ತಿದೆ. ತಬಲಾ ಮತ್ತು ಫೋಟೊಗ್ರಾಫಿಯಲ್ಲಿ ಪರಿಣಿತಿ ಪಡೆದಿರುವ ಶ್ರೀಯುತರು ಭಾರತದ ಪುರಾತನ ಶಿಲ್ಪಕಲೆಯ ಸಮಗ್ರ ಮಾಹಿತಿ ಹಾಗೂ ವೈವಿಧ್ಯತೆಯನ್ನು ತಮ್ಮ ಫೋಟೊಗ್ರಫಿಯಲ್ಲಿ ಸೆರೆಹಿಡಿದು ‘ಧ್ಯಾನ ಚಿತ್ರಾವಳಿ’ ಎಂಬ ಗ್ರಂಥವನ್ನು ರಚಿಸಿದ್ದಾರೆ. ಹೊಯ್ಸಳ ಶಿಲ್ಪಕಲೆಯ ಬಗ್ಗೆ ವಿಶೇಷ ಆಸಕ್ತಿ ಹೊಂದಿರುವ ಶ್ರೀಯುತ ವಿನಯ ಹೆಗಡೆಯವರು ಮೂಲತಃ ಸಿರಸಿಯವರಾಗಿದ್ದಾರೆ.

Comments