Русские видео

Сейчас в тренде

Иностранные видео


Скачать с ютуб Taro Root Gojju / Kesuvina Gedde Gojju / ಕೆಸುವಿನ ಗೆಡ್ಡೆಯ ಗೊಜ್ಜು в хорошем качестве

Taro Root Gojju / Kesuvina Gedde Gojju / ಕೆಸುವಿನ ಗೆಡ್ಡೆಯ ಗೊಜ್ಜು 3 года назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



Taro Root Gojju / Kesuvina Gedde Gojju / ಕೆಸುವಿನ ಗೆಡ್ಡೆಯ ಗೊಜ್ಜು

Taro Root is very healthy and high in fibre. A variety of recipes can be prepared using Taro Root. Here I have showed how to prepare this healthy and tasty Taro Root Gojju in a quick and easy method. ಕೆಸುವಿನ ಗೆಡ್ಡೆಯನ್ನು ಉಪಯೋಗಿಸಿ ಆನೇಕ ರೆಸಿಪಿಗಳನ್ನು ತಯಾರಿಸಬಹುದು. ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು.ಇದರಲ್ಲಿ ಫೈಬರ್ ಅಂಶವಿರುವುದರಿಂದ ಜೀರ್ಣಕ್ರಿಯೆಗೆ ಒಳ್ಳೆಯದು.ರುಚಿಕರವಾದ ಕೆಸುವಿನ ಗೆಡ್ಡೆಯ ಗೊಜ್ಜನ್ನು ತಯಾರಿಸುವ ವಿಧಾನ ಇಲ್ಲಿದೆ. 300 ಗ್ರಾಂ ಕೆಸುವಿನ ಗೆಡ್ಡೆಯನ್ನು ತೊಳೆದು ಕುಕ್ಕರಿನಲ್ಲಿ ಹಾಕಿ. ಗೆಡ್ಡೆಯು ಮುಳುಗುವಷ್ಟು ನೀರನ್ನು ಹಾಕಿ. 1 ಟೀ ಚಮಚ ಉಪ್ಪನ್ನು ಹಾಕಿ. ಮುಚ್ಚಳವನ್ನು ಮುಚ್ಚಿ. 2 ವಿಷಲ್ ಬರುವರೆಗೆ ಬೇಯಿಸಿ. ನಂತರ ಕುಕ್ಕರಿನ ಮುಚ್ಚಳನ್ನು ತೆಗೆಯಿರಿ. ನೀರನ್ನು ಸೋಸಿಕೊಳ್ಳಿ. ಕೆಸುವಿನ ಗೆಡ್ಡೆಯ ಸಿಪ್ಪೆಯನ್ನು ತೆಗೆಯಿರಿ. ಬೇಕಾದ ಆಳತೆಗೆ ಕತ್ತರಿಸಿಕೊಳ್ಳಿ. ಬಾಣಲೆಯನ್ನು ಬಿಸಿ ಮಾಡಿಕೊಳ್ಳಿ. 2 ಟೇಬಲ್ ಚಮಚ ಎಳ್ಳನ್ನು ಹಾಕಿ. 2 ಟೇಬಲ್ ಚಮಚ ಧನಿಯಾ ಹಾಕಿ. 1 ಟೀ ಚಮಚ ಜೀರಿಗೆ ಹಾಕಿ. 1/2 ಟೀ ಚಮಚ ಮೆಂತ್ಯ ಹಾಕಿ. 1 ಟೀ ಚಮಚ ಸಾಸಿವೆ ಹಾಕಿ. 8 ಒಣಮೆಣಸಿನಕಾಯಿಯನ್ನು ಹಾಕಿ. 1 ಟೀ ಚಮಚ ಎಣ್ಣೆಯನ್ನು ಹಾಕಿ. ಮಸಾಲೆ ಪದಾರ್ಥಗಳು ಪರಿಮಳ ಬಂದು ಬಣ್ಣ ಬದಲಾಗುವರೆಗೆ ಹುರಿಯಿರಿ. ನಂತರ ಒಲೆಯನ್ನು ಆರಿಸಿ. ಹುರಿದ ಪದಾರ್ಥಗಳನ್ನು ಮಿಕ್ಸಿಯಲ್ಲಿ ಹಾಕಿ. 1 ಕಪ್ ಆಗಲೇ ತುರಿದ ತೆಂಗಿನ ತುರಿಯನ್ನು ಹಾಕಿ. 1/2 ಕಪ್ ನೀರನ್ನು ಹಾಕಿ. ನುಣ್ಣಗೆ ರುಬ್ಬಿಕೊಳ್ಳಿ. ಬಾಣಲೆಯಲ್ಲಿ ಕತ್ತರಿಸಿಕೊಂಡ ಕೆಸುವಿನ ಗೆಡ್ಡೆಯನ್ನು ಹಾಕಿ. ನಿಂಬೆ ಗಾತ್ರದ ಹುಣಿಸೆ ಹಣ್ಣನ್ನು 1/4 ಲೀಟರ್ ನೀರಿನಲ್ಲಿ ನೆನೆಸಿ ನಂತರ ತೆಗೆದ ಅದರ ರಸವನ್ನು ಹಾಕಿ. 2 ರಿಂದ 3 ಟೇಬಲ್ ಚಮಚ ಬೆಲ್ಲದ ಪುಡಿಯನ್ನು ಹಾಕಿ. ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ. ಮಿಶ್ರಣ ಮಾಡಿ. ಮುಚ್ಚಳವನ್ನು ಮುಚ್ಚಿ. 5 ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ಬೇಯಿಸಿ. (ಹೀಗೆ ಮಾಡುವುದರಿಂದ ಕೆಸುವಿನ ಗೆಡ್ಡೆ ತಿನ್ನುವಾಗ ತುರಿಕೆ ಬರುವುದಿಲ್ಲ) ನಂತರ ಮುಚ್ಚಳವನ್ನು ತೆಗೆದು ಮಿಶ್ರಣ ಮಾಡಿ. ರುಬ್ಬಿಕೊಂಡ ಮಿಶ್ರಣವನ್ನು ಸೇರಿಸಿ. ನಂತರ 2 ಕಪ್(1/2 ಲೀಟರ್) ನೀರನ್ನು ಹಾಕಿ. ಮುಚ್ಚಳವನ್ನು ಮುಚ್ಚಿ. 5 ನಿಮಿಷಗಳ ಕಾಲ ಮಧ್ಯಮ ಉರಿಯಲ್ಲಿ ಕುದಿಸಿ. ಬಾಣಲೆಯಲ್ಲಿ 1 ಟೇಬಲ್ ಚಮಚ ಕೊಬ್ಬರಿ ಎಣ್ಣೆ/ಅಡುಗೆ ಎಣ್ಣೆಯನ್ನು ಹಾಕಿ. 1 ಟೀ ಚಮಚ ಸಾಸಿವೆಯನ್ನು ಹಾಕಿ. ಸಾಸಿವೆ ಸಿಡಿದ ನಂತರ 1/4 ಟೀ ಚಮಚ ಇಂಗನ್ನು ಹಾಕಿ. 5-6 ಕರಿಬೇವಿನ ಎಲೆಯನ್ನು ಹಾಕಿ. ಕರಿಬೇವು ಗರಿಗರಿಯಾದ ನಂತರ ತಯಾರಿಸಿಕೊಂಡ ಕೆಸುವಿನ ಗೊಜ್ಜಿಗೆ ಒಗ್ಗರಣೆ ಹಾಕಿ. ಮಿಶ್ರಣ ಮಾಡಿ. ರುಚಿಕರವಾದ ಕೆಸುವಿನ ಗೊಜ್ಜನ್ನು ಅನ್ನ,ಚಪಾತಿ,ಮುದ್ದೆ,ರೊಟ್ಟಿಯೊಂದಿಗೆ ಸವಿಯಿರಿ. #MANEADUGEWITHVEDA #tarorootgojjurecipe For more recipes visit my website- https://maneadigewithveda.wordpress.com/ Facebook-   / maneadugewithveda  

Comments